
ಕೊಪ್ಪಳ, 14 ಮಾರ್ಚ್ (ಹಿ.ಸ.)
ಆ್ಯಂಕರ್:
ಕೊಪ್ಪಳ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಪ್ರಾರಂಭಗೊಂಡಿರುವ ಬಲ್ದೋಟ ಕಂಪನಿಯನ್ನು ಸ್ಥಾಪಿಸಿ ಇಲ್ಲವೇ ಸರ್ಕಾರಿ ನೌಕರಿ ಕೊಡಿ ಎಂಬ ಅನಿರ್ದಿಷ್ಟವಾದಿ ಧರಣಿಯೂ 100 ದಿನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ವಿವಿಧ ರೈತ ಸಂಘಟನೆಗಳು ಮತ್ತು ಭೂಮಿ ಕಳೆದುಕೊಂಡ ನಿರಾಶ್ರಿತ ಧರಣಿ ನಿರತ ರೈತರು ತಿಳಿಸಿದರು.
2006-07ರಲ್ಲಿ ಕರ್ನಾಟಕ ಸರ್ಕಾರ ಕೆ ಐ ಎ ಡಿ ಬಿ ಮುಖಾಂತರ 1034 ಎಕರೆ ಜಮೀನನ್ನು ತೆಗೆದುಕೊಂಡಿದೆ. 20 ವರ್ಷ ಕಳೆದವು ಕಂಪನಿ ಪ್ರಾರಂಭವಾಗಿಲ್ಲ ಸುಪ್ರೀಂ ಕೋರ್ಟ್ ಆದೇಶವಿದ್ದರೂ ರೈತರಿಗೆ ಕೆಲಸ ಸಿಕ್ಕಿಲ್ಲ ರಾಜ್ಯ ಸರ್ಕಾರದ ರೈತರಿಗೆ ಅನ್ಯಾಯ ಮಾಡುತ್ತಿದೆ. ಕಾರ್ಖಾನೆ ಸ್ಥಾಪನೆ ಆಗಲೇಬೇಕು ಎಂಬ ಹೋರಾಟ 100 ದಿವಸಕ್ಕೆ ಪಾದಾರ್ಪಣೆ ಮಾಡಿದೆ. ಮಾರ್ಚ್ 17ರಂದು ಬೃಹತ್ ಪ್ರತಿಭಟನೆಯನ್ನು ಮಾಡಲಾಗುವುದು.ಧೂಳು ಮುಕ್ತ ಇಂಟಿಗ್ರೇಟೆಡ್ ಪ್ಲಾಂಟ್ ಸ್ಥಾಪನೆ ಆಗಲೇಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಧರಣಿ ನಿರತ ನೂರಾರು ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ರೈತ ಮುಖಂಡರಾದ ಸ್ವಾಮಿ ನಾಯಕ್ ವೆಂಕ ನಾಯಕ್ ರಾಜ ನಾಯಕ ರಾಮ ನಾಯಕ ಚಂದ್ರಶೇಖರ್ ನಾಯಕ ಲೋಕ ನಾಯಕ ರಾಮ ನಾಯಕ ಉಮಾ ನಾಯಕ ಚಂದ್ರಶೇಖರ್, ಹನುಮಂತಪ್ಪ ಕೌದಿ,ಹನುಮೇಶ್,ಮನೋಜ್,ಭೀಮೇಶ್,ಸ್ವಾಮಿ, ಮಲ್ಲಪ್ಪ,ಶಿವರಾಜ್ ಅಂಚಿನಾಳ, ಹನುಮೇಶ್ ಮಾಲಿ ಯೋಗೇಶ್ ಹಲಗೇರಿ,ದೇವಪ್ಪ ಹರಿಗೇರಿ,ಮಲ್ಲಪ್ಪ,ಶಿವರಾಜ್ ವಾಲ್ಮೀಕಿ ಮಂಜುನಾಥ್, ದೇವಪ್ಪ, ಈರಪ್ಪ ಹೊಸಮನಿ, ಹನುಮೇಶ್ ಹಾಲವರ್ತಿ,ಮನೋಜ್ ಹಾಲವರ್ತಿ,ಸ್ವಾಮಿ ಹಾಲವರ್ತಿ,ಭೀಮೇಶ್ ಪೂಜಾರ್,ಶ್ರೀಧರ್, ಪರಶುರಾಮ್,ಹುಲಗಪ್ಪ ಬಜನಿ,ಮಲ್ಲಿಕಾರ್ಜುನ, ಶರಣಪ್ಪ,ಕುಮಾರ ಸ್ವಾಮಿ,ರಾಜನಾಯ್ಕ್,ಯಲ್ಲಪ್ಪ , ಹುಲಗಪ್ಪ ,ಕುಮಾರಸ್ವಾಮಿ ಎಂ,ಕೃಷ್ಣಪ್ಪ,ನಾಗರಾಜ್,ಯಂಕಪ್ಪ ನಾಯ್ಕ್ , ಲಕ್ಷ್ಮಣ ನಾಯ್ಕ್ ಹನುಮೇಶ, ವೆಂಕಪ್ಪ,ಗುರುಲಿಂಗಪ್ಪ,ಶಿವರಾಜ ವಾಲ್ಮೀಕಿ,ಮಲ್ಲಪ್ಪ, ಶಿವರಾಜ್ ಅಂಚಿನಾಳ, ಜೆಡಿಸ್ವಾಮಿ ಮತ್ತು ಮುಂತಾದ ನೂರಾರು ರೈತರು ಭಾಗವಹಿಸಿದ್ದರು
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್