
ಬಳ್ಳಾರಿ, 14 ಮಾರ್ಚ್ (ಹಿ.ಸ.)
ಆ್ಯಂಕರ್: ಸಾಮಾಜಿಕ ಜಾಲತಾಣಗಳಲ್ಲಿ ಎಂ. ರಮಾಕಾಂತ್ ಎನ್ನುವವರು ಜಗಜ್ಯೋತಿ ವಿಶ್ವಗುರು ಬಸವಣ್ಣನವರು ಮತ್ತು ಅಕ್ಕಮಹಾದೇವಿ ಅವರ ಕುರಿತು ಅಶ್ಲೀಲವಾಗಿ ಹೀಯಾಳಿಸಿ, ದ್ರೋಹ ಮಾಡಿದ್ದು ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿರಿಗೇರಿ ಪನ್ನಾರಾಜ್ ಹಾಗೂ ಬಳ್ಳಾರಿಯ ಬಸವಭಕ್ತರು ಸೈಬರ್ ಕ್ರೈಂ ಪೆÇಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.
ಬಳ್ಳಾರಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೆಲೀಸ್ ಇನ್ಸ್ಪೆಕ್ಟರ್ ಕೆ. ಶ್ರೀನಿವಾಸ್ ಅವರಿಗೆ ದೂರು ಸಲ್ಲಿಸಿ, ಆರೋಪಿಯನ್ನು ತಕ್ಷಣವೇ ಬಂಧಿಸಿ, ಕಠಿಣವಾದ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಂಗನಕಲ್ ವಿಜಯ್ ಕುಮಾರ್, ರವಿಕುಮಾರ್, ಎಚ್.ಕೆ, ಮಲ್ಲಿಕಾರ್ಜುನ, ಚಂದ್ರಶೇಖರ ಆಚಾರಿ, ಕಲಾವತಿ, ದುರ್ಗಣ್ಣ, ಕಟ್ಟೇಗೌಡ, ಪಾಲಾಕ್ಷಗೌಡ, ಚಂದ್ರಶೇಖರಯ್ಯ ಸ್ವಾಮಿ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್