ಗ್ರಾಮೀಣ ಪ್ರದೇಶದಲ್ಲಿ ಬಿಎಸ್ಎನ್ಎಲ್ ಹೆಚ್ಚಿನ ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಗೆ ಸಂಸದ ಬೊಮ್ಮಾಯಿ ಸೂಚನೆ
ಹಾವೇರಿ, 28 ಫೆಬ್ರವರಿ (ಹಿ.ಸ.): ಆ್ಯಂಕರ್: ಹಾವೇರಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜನರ ಅನುಕೂಲಕ್ಕೆ ತಕ್ಕಂತೆ ಹೆಚ್ಚಿನ ಬಿಎಸ್‌ಎನ್‌ಎಲ್ ಸಂಪರ್ಕ ಕಲ್ಪಿಸುವ ಕಾರ್ಯ ಮಾಡಬೇಕು ಎಂದು ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸೂಚಿಸಿದರು. ಇಂದು ಹಾವೇರಿಯ
ಗ್ರಾಮೀಣ ಪ್ರದೇಶದಲ್ಲಿ ಬಿಎಸ್ಎನ್ಎಲ್ ಹೆಚ್ಚಿನ ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಗೆ ಸಂಸದ ಬೊಮ್ಮಾಯಿ ಸೂಚನೆ


ಹಾವೇರಿ, 28 ಫೆಬ್ರವರಿ (ಹಿ.ಸ.):

ಆ್ಯಂಕರ್:

ಹಾವೇರಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜನರ ಅನುಕೂಲಕ್ಕೆ ತಕ್ಕಂತೆ ಹೆಚ್ಚಿನ ಬಿಎಸ್‌ಎನ್‌ಎಲ್ ಸಂಪರ್ಕ ಕಲ್ಪಿಸುವ ಕಾರ್ಯ ಮಾಡಬೇಕು ಎಂದು ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಇಂದು ಹಾವೇರಿಯ ತಾಲೂಕು ಪಂಚಾಯತ ಆವರಣದಲ್ಲಿರುವ ಲೋಕಸಭಾ ಸದಸ್ಯರ ಜನಸಂಪರ್ಕ ಕಾರ್ಯಾಲಯದಲ್ಲಿ ಭಾರತ್ ಸಂಚಾರ ನಿಗಮ ನಿಯಮಿತ ಸಲಹಾ ಸಮಿತಿ ಸಭೆಯನ್ನು ನಡೆಸಿದರು.

ಈಗ ಸೆಟಲೈಟ್ ಮೂಲಕ ಎಲ್ಲವೂ ವೈರ್‌ಲೆಸ್ ಆಗಿದೆ. ಹೀಗಾಗಿ ಜನರು ಲ್ಯಾಂಡ್ ಲೈನ್ ಗೆ ಆಸಕ್ತಿ ತೋರಿಸುವುದಿಲ್ಲ. ಯಾರು ಆಸಕ್ತಿ ಇದ್ದಾರೆ ಅಲ್ಲಿ ಸಂಪರ್ಕ ಕಲ್ಪಿಸಬೇಕು. ಈಗ 5ಜಿ ಬಂದಿದೆ. ತಂತಜ್ಞಾನ ಸಾಕಷ್ಟು ಮುಂದುವರೆದಿದೆ. ಜನರು ಇದನ್ನು ಬಯಸದಿರುವಾಗ ನೀವು ಯಾಕೆ ಮಾಡುತ್ತಿದ್ದೀರಿ. ಜನರು ಲ್ಯಾಂಡ್ ಲೈನ್ ಸಂಪರ್ಕ ಬಯಸುವುದಿಲ್ಲ. ಮನೆಯಲ್ಲಿ ಪ್ರತಿಯೊಬ್ಬರೂ ಪ್ರತ್ಯೇಕ ಸಂಪರ್ಕ ಬಯಸುತ್ತಾರೆ. ನೀವು ಜನರ ಬೇಡಿಕೆ ಏನಿದೆ ಅನ್ನುವುದನ್ನು ತಿಳಿದಕೊಳ್ಳಬೇಕು. ವೈಫೈ ಬಳಕೆಗೆ ಕೆಲವೊಂದು ಮಿತಿಗಳಿವೆ. ಅವರು ಮನೆಯಲ್ಲಿದ್ದಾಗ ಮಾತ್ರ ವೈಫೈ ಬಳಕೆ ಮಾಡಬಹುದು. ಹಳ್ಳಿಗಳಲ್ಲಿ ನೆಟ್ ವರ್ಕ್ ಸಿಗಲು ಹೆಚ್ಚಿನ ಬಿಎಸ್ ಎನ್ ಎಲ್ ಟವರ್ ಗಳನ್ನು ಹಾಕಬೇಕು. ಜನರಿಗೆ ಸುಲಭವಾಗಿ ನೆಟ್ ವರ್ಕ್ ಸಿಗುವಂತೆ ಮಾಡಬೇಕು ಎಂದು ಸೂಚಿಸಿದರು.

ಮನೆಯಿಂದ ಹೊರಗೆ ಹೋದಾಗ ವೈಫೈ ಉಪಯೋಗಕ್ಕೆ ಬರುವುದಿಲ್ಲ. ಜನರು ತಾವೆಲ್ಲಿ ಹೋಗುತ್ತಾರೆ ಅಲ್ಲಿ ಆನ್ ಲೈನ್ ಸಂಪರ್ಕ ಇರಬೇಕೆಂದು ಬಯಸುತ್ತಾರೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಟವರ್ ಗಳನ್ನು ಹಾಕಬೇಕು. ಅವರ ಅಗತ್ಯ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಹಾವೇರಿ ಜಿಲ್ಲೆಯಲ್ಲಿ ಬ್ಯಾಡಗಿ, ಹಿರೆಕೆರೂರು ಹಾವೇರಿ ಬ್ಲಾಕ್ ಅಂತ ಮಾಡಿಕೊಂಡು ಪಂಚಾಯತಿಗಳಲ್ಲಿ ಸಂಪರ್ಕ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. 260 ಗ್ರಾಮ ಪಂಚಾಯತಿಗಳಿಗೆ ಸಂಪರ್ಕ ಕಲಿಸುವ ಗುರಿ ಇದೆ. ನಮದು ಪಿಪಿಪಿ ಮಾಡೆಲ್ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಕಡಿಮೆ ಇದೆ. ಜನರು ಮೊಬೈಲ್ ಜೊತೆಗೆ ಹೋಲಿಕೆ ಮಾಡಿ ನೋಡುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕನಿಷ್ಠ 50 ಸಂಪರ್ಕ ಕಲ್ಪಿಸುವ ಸಮೃದ್ಧಿ ಜಿಪಿ ಯೋಜನೆ ಚಾಲನೆಯಲ್ಲಿದೆ. ಅದರಲ್ಲಿ ಶಾಲೆ, ಕಾಲೇಜು, ವಾಣಿಜ್ಯ ಮಳಿಗೆಗಳಿಗೆ ಒಳಗೊಂಡು ಸಂಪರ್ಕ ಕಲಿಸಲಾಗುವುದು. ಜನರು ಬಿಎಸ್ಎನ್ಎಲ್ ಸಂಪರ್ಕ ಪಡೆದು ವೈರ್‌ಲೆಸ್ಟ್ ಮೂಲಕ ಅವರು ಬೇರೆ ಸಂಪರ್ಕ ಪಡೆಯಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಜಿ.ಎಂ ಧನಂಜಯಕುಮಾರ ತ್ರಿಪಾಟಿ, ಡಿ.ಜಿ.ಎಂ ರಾಜಕುಮಾರ ಆಸಂಗಿ ಮೋಬೈಲ್ ಡಿ.ಜಿ.ಎಂ ರಾಜೇಶ ಕದಂ ಡಿಜಿಎಂ ದಾವಣಗೆರೆ ಕೆ. ಗೋಪಾಲ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande