ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯ
ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ಒತ್ತಾಯ
ಚಿತ್ರ ; ಕೋಲಾರದ ಪತ್ರಕರ್ತರ ಭವನದಲ್ಲಿ ಮಾದಿಗ ದಂಡೋರ ಸಂಘಟನೆ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ  ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯ ಮಾಡಿದರು.


ಕೋಲಾರ, ೨೮ ಫೆಬ್ರವರಿ (ಹಿ.ಸ) :

ಆ್ಯಂಕರ್ : ಒಳ ಮೀಸಲಾತಿಯಲ್ಲಿ ವರ್ಗೀಕರಣಕ್ಕೆ ಒತ್ತಾಯದ ಬೇಡಿಕೆಯನ್ನು ಈಡೇರಿಸಲಿ ಎಂದು, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಆಗ್ರಹಿಸಿದ್ದಾರೆ.

ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಮಾತನಾಡಿದ ಮಾದಿಗ ದಂಡೋರ ಸಂಘಟನೆ ಮುಖಂಡರು, ಮಾದಿಗ ಸಮಾಜಕ್ಕೆ ಎಲ್ಲಾ ರಂಗದಲ್ಲು ಒಳಮೀಸಲಾತಿ ನೀಡಲು ಒತ್ತಾಯವಿದೆ, ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮಾದಿಗ ಸಮಾಜಕ್ಕೆ ಅನ್ಯಾಯವಾಗುತ್ತಿದೆ, ಯಾವುದೋ ಒತ್ತಡಕ್ಕೆ ಮಣಿದು ಸರ್ಕಾರ ಆ ಬಗ್ಗೆ ನಿರ್ಧಾರ ಕೈಗೊಳ್ತಿಲ್ಲ, ರಾಜ್ಯದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಮಾದಿಗ ಸಮಾಜ ಇದ್ದಾರೆ, ಯಾರಾದರು ಒಳಮೀಸಲಾತಿ ವರ್ಗೀಕರಣಕ್ಕೆ ತೊಂದರೆ ಕೊಟ್ಟರೆ, ಮುಂದಿನ ಚುನಾವಣೆಯಲ್ಲಿ ಅದಕ್ಕೆ ತಕ್ಕ ಶಾಸ್ತಿ ಪಡೆಯಬೇಕಾಗಿರುತ್ತದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಮುಖಂಡರು ಎಚ್ಚರಿಕೆ ನೀಡಿದ್ದು, ಸರ್ಕಾರ ಒಳಮೀಸಲಾತಿಯನ್ನು ತೆಲಂಗಾಣ, ಆಂದ್ರ, ಪಂಜಾಬ್ ನಂತೆ ಒಳ ಮೀಸಲಾತಿ ಜಾರಿಮಾಡಲಿ, ರಾಜ್ಯ ಕಾಂಗ್ರೆಸ್ ಸರ್ಕಾರ ಮಾದಿಗರ ಪರವಿಲ್ಲ, ಹೀಗೆ ಆದರೆ ಮುಂದೆ, ಮಾದಿಗರ ಕೇರಿಗಳಿಗೆ ನಿಮಗೆ ಪ್ರವೇಶ ನಿಷೇಧ ಹೇರುವ ಎಚ್ಚರಿಕೆಯನ್ನು ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande