ಪೋಕ್ಸೊ ಕಾಯ್ದೆ ಅಡಿ ಆರೋಪಿಗೆ ೨೦ ವರ್ಷ ಸಜೆ
ಪೋಕ್ಸೊ ಕಾಯ್ದೆ ಅಡಿ ಆರೋಪಿಗೆ ೨೦ ವರ್ಷ ಸಜೆ
ಪೋಕ್ಸೊ ಕಾಯ್ದೆ ಅಡಿ ಆರೋಪಿಗೆ ೨೦ ವರ್ಷ ಸಜೆ


ಕೋಲಾರ, ೨೮ ಫೆಬ್ರವರಿ (ಹಿ.ಸ) :

ಆ್ಯಂಕರ್ : ಕೋಲಾರ ಮಹಿಳಾ ಪೋಲೀಸ್ ಠಾಣಾ ಸರಹದ್ದಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗಿ ಅತ್ಯಾಚಾರ ಮಾಡಿದ ಮೈಸೂರು ಜಿಲ್ಲೆಯ ಕೆ.ಆರ್ನಗರ ತಾಲ್ಲುಕಿನ ಗದ್ದೆಹೊಸಹಳ್ಳಿ ಗ್ರಾಮದ ವಾಸಿ ೨೭ ವರ್ಷದ ಶಿವಕುಮಾರ್ ಎಂಬ ಆರೋಪಿಗೆ ಕೋಲಾರ ಪೋಕ್ಸೊ ವಿಶೇಷ ನ್ಯಾಯಾಲಯ ೨೦ ವರ್ಷ ಜೈಲು ಶಿಕ್ಷೆ ಹಾಗೂ ೨೦ ಸಾವಿರ ದಂಡ ವಿಧಿಸಿದೆ.

ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗಿ ಅತ್ಯಾಚಾರ ಮಾಡಿದ ಸಂಬಂಧ ಕೋಲಾರ ಮಹಿಳಾ ಪೋಲೀಸ್ ಠಾಣೆಯಲ್ಲಿ ೧೨-೬-೨೦೨೩ ರಂದು ನೀಡಿದ ದೂರಿನ ಮೇರೆಗೆ ಕಲಂ ೬ ಮತ್ತು ಕಲಂ ೯ ಪೋಕ್ಸೊ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಠಾಣೆಯ ಆರಕ್ಷಕ ನಿರೀಕ್ಷಕರು ಆರೋಪಿಯ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರಸಾದ್. ಕೆ. ಬಿ. ಅವರು ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಶಿವಕುಮಾರ್ ಅಪರಾಧಿಗೆ ಪೋಕ್ಸೊ ಕಾಯ್ದೆ ಅಡಿಯಲ್ಲಿ ೨೦ ವರ್ಷ ಜೈಲು ಶಿಕ್ಷೆ ಹಾಗೂ ೨೦ ಸಾವಿರ ದಂಡ ವಿಧಿಸಿದ್ದಾರೆ. ಜೊತೆಗೆ ನೊಂದ ಬಾಲಕಿಗೆ ಸರ್ಕಾರದ ವತಿಯಿಂದ ೫ ಲಕ್ಷ ಪರಿಹಾರ ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಡಿ. ಲಲಿತಕುಮಾರಿ ವಾದ ಮಂಡಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande