ಜನರ ಆರೋಗ್ಯಕ್ಕೆ ಮಾರಕವಾಗಿರುವ ಅವಧಿ ಮುಗಿದ ವಸ್ತುಗಳ ಮಾರಾಟ
ಜನರ ಆರೋಗ್ಯಕ್ಕೆ ಮಾರಕವಾಗಿರುವ ಅವಧಿ ಮುಗಿದ ವಸ್ತುಗಳ ಮಾರಾಟ
ಅವಧಿ ಮುಗಿದ ಸರಕು


ಕೋಲಾರ, ಫೆಬ್ರವರಿ ೨೪ (ಹಿ.ಸ) :

ಆ್ಯಂಕರ್ : ಅವಧಿ ಮುಗಿದ ವಸ್ತುಗಳು ಮಾರಾಟ ಮಾಡುತ್ತಿರುವ ಅಂಗಡಿ ಮುಂಗಟ್ಟುಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವಿಫಲವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಖಾದ್ರಿಪುರ ವಿ.ಸಂತೋಷ್ ಆರೋಪ ಮಾಡಿದ್ದಾರೆ.

ಕಳೆದ ೨೦೧೯ರಲ್ಲಿ ಇಡೀ ದೇಶಾದ್ಯಂತ ವಕ್ಕರಿಸಿದ ಕೋವಿಡ್ ೧೯ ದೇಶದ ಜನರ ಉಸಿರನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಿ ಈ ವಿಚಾರವಾಗಿ ಹಲವಾರು ಕ್ರಮಗಳನ್ನು ಸರ್ಕಾರವು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮೂಡಿಸುತ್ತಾ ಮಾಸ್ಕ್ ಬಳಕೆ, ಸಾಮಾಜಿಕ ಅಂತರ, ಕೈಗಳ ಶುದ್ಧೀಕರಣ ಆರೋಗ್ಯಕರ ಆಹಾರಗಳಂಥಹ ಅನೇಕ ಮಾರ್ಗಶುಚಿಗಳನ್ನು ಜನರಿಗೆ ಸೂಚಿಸಿತ್ತು. ಇದೆಲ್ಲವೂ ಕೋವಿಡ್ ನಂತಹ ಮಹಾಮಾರಿ ವೈರಸ್ನಿಂದ ಜನಸಾಮಾನ್ಯರ ಬದುಕು ಹತ್ತೊಟಿಗೆ ಬರಲು ಒಂದು ಒಳ್ಳೆ ಮಾರ್ಗವಾಗಿತ್ತು.

ಜನರ ಜೀವ ನಿಧಾನವಾಗಿ ತೆಗೆಯುವ ಅಪಾಯಕಾರಿ ವಸ್ತುಗಳ ಮಾರಾಟ ಜಾಲ ಕಾರ್ಯ ನಿರ್ವಹಿಸುತ್ತಿದೆ. ಸಂಬAಧಪಟ್ಟ ಇಲಾಖೆಗಳು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದಿದ್ದರೇ ಮುಂದಿನ ದಿನಗಳಲ್ಲಿ ನಮಗೆ ಗೊತ್ತಿಲ್ಲದೆ ಅನೇಕ ಜೀವಗಳು ನಾನಾ ರೀತಿಯ ರೋಗಗಳಿಗೆ ಬಲಿಯಾಗುವುದು ನಿಶ್ಚಿತ.

ಕೋಲಾರ ನಗರದ ಅನೇಕ ಕಡೆಗಳಲ್ಲಿ ಶೇಕಡ ೫೦% ರಿಯಾಯತಿ ಎಂದು ಬೋರ್ಡ್ ನೇತುಹಾಕಿ ಜನರಿಗೆ ಅವಧಿ ಮುಗಿದ ವಸ್ತುಗಳನ್ನು ನೆರವಾಗಿ ಮಾರಾಟ ಮಾಡುತಿದ್ದಾರೆ. ಜನಸಾಮಾನ್ಯರಿಗೆ ಅದರ ಅರಿವೇ ಇಲ್ಲದೇ ಕೊಂಡು ಉಪಯೋಗಿಸುತ್ತಿದ್ದಾರೆ. ಈ ವಿಚಾರವಾಗಿ ಸಂಭ0ದಪಟ್ಟ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಆಹಾರ ಸಂರಕ್ಷಣಾ ಇಲಾಖೆ ನಿದ್ಧೆ ಮಾಡುತಿದೆಯೇ? ಎಂಬುದು ನಮ್ಮೆಲ್ಲರ ಪ್ರಶ್ನೆಯಾಗಿದೆ.

ಭೂದು ಬಣ್ಣಕ್ಕೆ ತಿರುಗಿರುವ ಕರ್ಜೂರ, ಬಾದಾಮಿ ಪಾಕೆಟ್ಗಳು, ಕೊಕೊನೆಟ್ ಕ್ರೀಮ್ ಡಬ್ಬಗಳು, ಭ್ರೂ ಕಾಫಿ ಪಾಕೆೆಟ್ಗಳು, ತುಪ್ಪದ ಬಾಟೆಲ್ಗಳುಮ ಸಂಸ್ಕರಿಸಿದ ಎಣ್ಣೆ ಪಾಕೆಟ್ಗಳು, ಸಿಹಿ ತಿಂಡಿಗಳು, ಚಾಕ್ಲೆಟ್ ಬಾಕ್ಸ್ಗಳು, ಕುರ್ಕುರೆ ಪೊಕೆಟ್ಗಳು, ಕೂಲ್ ಡ್ರಿಂಕ್ಸ್ಗಳು, ಬಿಸ್ಕೆಟ್ ಪಾಕೆಟ್ಗಳು, ಖಾಜುಬರ್ಫೀ, ಡ್ರೆöÊ ಫ್ರೂಟ್ಸ್ ಇನ್ನು ಅನೇಕ ಪದಾರ್ಥಗಳು ಅವಧಿ ಮುಗಿದ ದಿನಾಂಕ ಸ್ಪಷ್ಟವಾಗಿ ಕಾಣಿಸುತ್ತಿದ್ದರೂ, ಮಾರಾಟ ಮಾತ್ರ ಯಾರ ಭಯವು ಇಲ್ಲದೆ ನಡೆಯುತ್ತಿದೆ.

ಆಹಾರ ಮತ್ತು ಆರೋಗ್ಯ ಇಲಾಖೆಯ ಕೋಲಾರದಲ್ಲಿ ಸಾತ್ತು ಹೋಗಿದೆ ಎಂಬುದನನ್ನು ನೋಡಬಹುದಾಗಿದೆ. ಜಿಲ್ಲೆಯಲ್ಲಿ ಜೀವಂತ ಶವವಾಗಿರುವ ಔಷದ ಇಲಾಖೆ, ಔಷದ ನಿಯಂತ್ರಕ ಇಲಾಖೆಗೆ ಸಂಬ0ಧ ಪಟ್ಟಂತಹ ವಸ್ತುಗಳದ ಮಾತ್ರೆ ಡಬ್ಬಗಳು, ಶ್ಯಾಂಪೂಗಳು, ಚರ್ಮದ ಕ್ರೀಮ್, ಮಾರ್ಜಕಗಳು, ಸೋಪುಗಳು, ಸರ್ಫ್ ಪಾಕೆಟ್ಗಳು, ಕೂಡಲಿನ ಎಣ್ಣೆಗಳು, ಇನ್ನು ಹಾಲವರು ವಸ್ತುಗಳು ಶೇಕಡ ೫೦% ರಿಯಾಯಿತಿ ಬೆಲೆಯಲ್ಲಿ ಸಿಗುವಂಥಹ ಅಂಗಡಿಗಳಲ್ಲಿ ಮಾರಾಟ ಮಾಡುತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ಕಂಡರೆ ನಿಜಕ್ಕೂ ಔಷದ ನಿಯಂತ್ರಕ ಇಲಾಖೆ ಜಿಲ್ಲೆಯಲ್ಲಿ ಜೀವಂತ ಶವವಾಗಿದೆ ಎಂಬುದು ಸ್ಪಷ್ಟಪಡಿಸುತ್ತದೆ.

ಒಟ್ಟಾರೆ ಜಿಲ್ಲೆಯಲ್ಲಿ ಶೇಕಡ ೫೦% ರಿಯಾಯಿತಿ ಎಂದು ಜನರನ್ನು ಯಾಮಾರಿಸುತ್ತಾ ಅವಧಿ ಮುಗಿದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಸಾರ್ವಜನಿಕರ ಆರೋಗ್ಯದಲ್ಲಿ ಚೆಲ್ಲಾಟವಾಡುತ್ತಿರುವ ಇಂಥಹ ಅಂಗಡಿ ಮುಂಗಟ್ಟುಗಳ ಮೇಲೆ ಅಧಿಕಾರಿಗಳು ಇನ್ನಾದರೂ ಕ್ರಮವಾಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

ಚಿತ್ರ : ಅವಧಿ ಮುಗಿದ ಸರಕು

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande