ಕೋಲಾರದಲ್ಲಿ ಪ್ಲಾಸ್ಟಿಕ್ ಮುಕ್ತ ಆಂದೋಲನ
ಕೋಲಾರದಲ್ಲಿ ಪ್ಲಾಸ್ಟಿಕ್ ಮುಕ್ತ ಆಂದೋಲನ
ಕೋಲಾರ ನಗರದಲ್ಲಿ ಪ್ಲಾಸ್ಟಿಕ್ ಮುಕ್ತ ಆಂದೋಲನದ ಅಂಗವಾಗಿ ಜಾಗೃತಿ ಜಾಥ ನಡೆಸಲಾಯಿತು.


ಕೋಲಾರ, ಫೆಬ್ರವರಿ ೨೪ (ಹಿ.ಸ) :

ಆ್ಯಂಕರ್ : ಕೋಲಾರ ನಮ್ಮ ಮನೆ. ಮನೆಯನ್ನು ಎಷ್ಟು ಸುಂದರವಾಗಿಟ್ಟುಕೊಳ್ಳುತ್ತೇವೆಯೋ, ಹಾಗೆಯೇ ನಮ್ಮ ನಗರವನ್ನೂ ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪ್ಲಾಸ್ಟಿಕ್ ಕೇವಲ ಕಸವಲ್ಲ, ನಾವು ಇಂದು ಬಳಸುವ ಒಂದೇ ಒಂದು ಪ್ಲಾಸ್ಟಿಕ್ ಚೀಲ ನೂರಾರು ವರ್ಷಗಳ ಕಾಲ ಭೂಮಿಯಲ್ಲಿ ಉಳಿಯುತ್ತದೆ. ನಾವು ನಮ್ಮ ಮಕ್ಕಳಿಗೆ ವಿಷಪೂರಿತ ಭೂಮಿಯನ್ನು ನೀಡಬೇಕೇ ಅಥವಾ ಹಸಿರು ಮತ್ತು ಸುಂದರವಾದ ಕೋಲಾರವನ್ನು ನೀಡಬೇಕೇ? ಎಂಬುದನ್ನು ನಾವೇ ನಿರ್ಧರಿಸಬೇಕು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಫರಿದ್ ಪಾಷ ತಿಳಿಸಿದರು.

ಕೋಲಾರ ನಗರದಲ್ಲಿ ಮಂಗಳವಾರ ಪ್ಲಾಸ್ಟಿಕ್ ನಿಷೇಧ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಅದ್ಭುತವಾಗಿ ಯಶಸ್ವಿಗೊಳಿಸಿದ ಎಲ್ಲಾ ಪೌರಕಾರ್ಮಿಕರು, ಕಮ್ಯುನಿಟಿ ಮೊಬಿಲೈಸರ್ಸ್ಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳು ಸಲ್ಲಿಸಲಾಯಿತು.

ನಗರವನ್ನು ಸ್ವಚ್ಛಗೊಳಿಸಲು ಪೌರಕಾರ್ಮಿಕರು ದಿನವಿಡೀ ಶ್ರಮಿಸುತ್ತಿದ್ದಾರೆ. ಅವರಿಗೆ ನಾವು ನೀಡಬಹುದಾದ ದೊಡ್ಡ ಗೌರವವೆಂದರೆ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಿ, ಕಸವನ್ನು ಸರಿಯಾಗಿ ವಿಲೇವಾರಿ ಮಾಡುವುದು. ವರ್ತಕರು ಮತ್ತು ಗ್ರಾಹಕರು ಇಬ್ಬರೂ ಮನಸ್ಸು ಮಾಡಬೇಕು. ಗ್ರಾಹಕರು ಮನೆಯಿಂದಲೇ ಬಟ್ಟೆಯ ಚೀಲ ತರುವ ಅಭ್ಯಾಸ ಮಾಡಿಕೊಳ್ಳಿ. ಪ್ಲಾಸ್ಟಿಕ್ ಚೀಲ ನೀಡದಂತೆ ಅಂಗಡಿಯವರಿಗೆ ಒತ್ತಾಯಿಸಿದರು.

ಪ್ರದರ್ಶಿಸಲಾದ ನಾಲ್ಕು ನಾಟಕಗಳು ಕೇವಲ ಮನರಂಜನೆಯಲ್ಲ. ಅವು ನಮ್ಮ ಕಣ್ಣು ತೆರೆಸುವ ಸತ್ಯಗಳು. ಈ ನಾಟಕಗಳ ಮೂಲಕ ನೀಡಲಾದ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ರೈತರು ಮತ್ತು ಪಶುಪಾಲಕರು ಗಮನಿಸಬೇಕಾದ ಸಂಗತಿಯೆ0ದರೆ, ಹಸುಗಳು ಮತ್ತು ಪ್ರಾಣಿಗಳು ರಸ್ತೆಯ ಮೇಲಿರುವ ಪ್ಲಾಸ್ಟಿಕ್ ತಿಂದು ಸಾವನ್ನಪ್ಪುತ್ತಿವೆ. ಮೂಕ ಪ್ರಾಣಿಗಳ ಜೀವ ಉಳಿಸಲು ಪ್ಲಾಸ್ಟಿಕ್ ತ್ಯಜಿಸಬೇಕು. ಪೌರಾಯುಕ್ತರಾದ ನವೀನ್ ಚಂದ್ರ ಗೋಪಾಲ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಅಭಿಯಾನಕ್ಕೆ ಕೇವಲ ಅಧಿಕಾರಿಗಳು ಸಾಲದು, ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದರು.

ಪ್ಲಾಸ್ಟಿಕ್ ನಿಷೇಧದ ಅಗತ್ಯತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ನಾಲ್ಕು ನಾಟಕಗಳ ಮೂಲಕ ಪರಿಣಾಮಕಾರಿ ಸಂದೇಶ ನೀಡಲಾಯಿತು. ಈ ನಾಟಕಗಳು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಪಡೆದವು.

ನಗರವನ್ನು ಸ್ವಚ್ಛ ಮತ್ತು ಹಸಿರುಮಯವಾಗಿಸಲು ಈ ಕಾರ್ಯಕ್ರಮವು ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಚಿತ್ರ : ಕೋಲಾರ ನಗರದಲ್ಲಿ ಪ್ಲಾಸ್ಟಿಕ್ ಮುಕ್ತ ಆಂದೋಲನದ ಅಂಗವಾಗಿ ಜಾಗೃತಿ ಜಾಥ ನಡೆಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande