ರಾಜ್ಯ ಸರ್ಕಾರಿ ನೌಕರರು ಸಂಘಟಿತರಾಗಲು ಕರೆ
ರಾಜ್ಯ ಸರ್ಕಾರಿ ನೌಕರರು ಸಂಘಟಿತರಾಗಲು ಕರೆ
ಮುಳಬಾಗಿಲು ತಾಲ್ಲೂಕು ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ /ಎಸ್.ಟಿ. ಸಮನ್ವಯ ಸಮಿತಿ ನೌಕರರ ಸಂಘದ ಸಭೆ ನಡೆಯಿತು.


ಕೋಲಾರ, ೨೪ ಫೆಬ್ರವರಿ (ಹಿ.ಸ) :

ಆ್ಯಂಕರ್ : ಸರ್ಕಾರಿ ನೌಕರರು ತಮ್ಮ ಸಮಸ್ಯೆಗಳನ್ನು ಆಗಿಂದಾಗೆ ಪರಿಹಾರ ಮಾಡಿಕೊಳ್ಳಲು ಮೊದಲು ಸಂಘಟಿತರಾಗಬೇಕು. ನೌಕರರಿಗೆ ಸಂಘಟನೆ ಶಕ್ತಿ ಎಂಬುವ ಹರಿವು ಎಲ್ಲರಲ್ಲೂ ಉಂಟು ಮಾಡಬೇಕು. ಈ ನಿಟ್ಟಿನಲ್ಲಿ ನೌಕರರಲ್ಲಿ ಜಾಗೃತಿ ಆಗುತ್ತೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ /ಎಸ್.ಟಿ. ಸಮನ್ವಯ ಸಮಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್ ಮುನಿರಾಜು ತಿಳಿಸಿದರು.

ಮುಳಬಾಗಿಲು ತಾಲೂಕು ಸಮಿತಿ ತಮಗೆ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಎಸ್ಸಿ/ಎಸ್ಟಿ ನೌಕರರು ತಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಆಗಿಂದಾಗೆ ಸಂಘಟನಾಗಬೇಕು. ಸಮಸ್ಯೆಗಳ ಚರ್ಚೆ ಮಾಡಬೇಕು. ಚರ್ಚೆ ನಂತರ ಅದಕ್ಕಾಗಿ ಪರಿಹಾರವನ್ನು ಹುಡುಕುವಂತಾಗಬೇಕು. ಆಗ ಮಾತ್ರ ಸಂಘಟನೆ ಯಶಸ್ವಿಯಾಗುತ್ತದೆ ಎಂದರು.

ಸಮಿತಿಯ ವಿಭಾಗೀಯ ಕಾರ್ಯದರ್ಶಿ ಎನ್ ಪ್ರದೀಪ್ ಮಾತನಾಡಿ ರಾಜ್ಯದಾದ್ಯಂತ ಸಂಘಟನೆ ಶಿವಶಂಕರ್ ರವರ ಅಧ್ಯಕ್ಷತೆಯಲ್ಲಿ ಸಂಘಟನೆ ಬಲಿಷ್ಠವಾಗಿದೆ. ಇಂತಹ ಸಂಘಟನೆಯಲ್ಲಿ ರಾಜ್ಯದ ಪ್ರತಿಯೊಬ್ಬ ಎಸ್ಸಿ ಎಸ್ಟಿ ನೌಕರರು ಸದಸ್ಯರಾಗುವುದು ಒಳಿತು ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಬಿ.ಎನ್ ನಾರಾಯಣಸ್ವಾಮಿ ಮಾತನಾಡಿ ತಾಲೂಕಿನಾದ್ಯಂತ ಇರುವ ಎಲ್ಲಾ ಸರ್ಕಾರಿ ಎಸ್ಸಿ ಎಸ್ಟಿ ನೌಕರರು ಒಂದೇ ವೇದಿಕೆಯಲ್ಲಿ ಸಂಘಟಿತರಾಗಿ ಮುಂದಿನ ತಿಂಗಳಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಮುಖ್ಯಮಂತ್ರಿಗಳಿಗೆ ಸಫಟನೆಯ ಶಕ್ತಿ ಹಾಗೂ ನಮ್ಮ ಸಮಸ್ಯೆಗಳ ಅರಿವನ್ನು ಉಂಟು ಮಾಡಬೇಕು ಎಂದರು

ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಎನ್ ರಾಮಚಂದ್ರ ಮಾತನಾಡಿ ಸಂಘಟನೆ ಇಂದು ನೆನ್ನೆಯದಲ್ಲ ಇದು ಶಾಶ್ವತವಾಗಿ ಬಲಿಷ್ಠ ಆಗಬೇಕಾದರೆ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ ಆದರ್ಶವನ್ನು ಜಾರಿ ತರುವಂತ ಸತತ ಪ್ರಯತ್ನ ಮಾಡಬೇಕು ಎಂದರು .

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಸೋಮೇಶ್ ಪಿ ಮಾತನಾಡಿ ವಿವಿಧ ಇಲಾಖೆಗಳಲ್ಲಿರುವ ಎಲ್ಲಾ ನೌಕರರು ಒಂದೇ ವೇದಿಕೆಯಲ್ಲಿ ಸಂಘಟಿತರಾಗುವ ಮೂಲಕ ತಮ್ಮ ಶಕ್ತಿಪ್ರದರ್ಶನ ಮಾಡಿ ಸಮಸ್ಯೆಗಳ ಪರಿಹರಿಸಿಕೊಳ್ಳಲು ಸಾಧ್ಯ ಎಂದರು

ಈ ಸಂದರ್ಭದಲ್ಲಿ ಕ್ಯಾಲೆಂಡರ್ ಅನ್ನು ಜಿಲ್ಲಾ ಗೌರವಾಧ್ಯಕ್ಷ ಜಿ ಶ್ರೀನಿವಾಸ್ ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಪ್ರಾಂಶುಪಾಲರಾದ ಮುನಿವೆಂಕಟಪ್ಪ ಸಮಾಜ ಕಲ್ಯಾಣ ಇಲಾಖೆ ಅಶ್ವಿನ್, ಎಸ್.ಸಿ. ರಾಮಪ್ಪ ಮತ್ತಿತರು ಉಪಸ್ಥಿತರಿದ್ದರು.

ಚಿತ್ರ : ಮುಳಬಾಗಿಲು ತಾಲ್ಲೂಕು ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ /ಎಸ್.ಟಿ. ಸಮನ್ವಯ ಸಮಿತಿ ನೌಕರರ ಸಂಘದ ಸಭೆ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande