
ಕೋಲಾರ, ೨೪ ಫೆಬ್ರವರಿ (ಹಿ.ಸ) :
ಆ್ಯಂಕರ್ : ಅಖಿಲ ಭಾರತ ಕುಂಬಾರ ಮಹಾಸಭಾ (ರಿ) ಯುವ ಘಟಕದ ರಾಷ್ಟ್ರೀಯ ಘಟಕದ ಅಧ್ಯಕ್ಷರಾಗಿ ತಾಲೂಕಿನ ಕಲ್ಲಂಡೂರು ಗ್ರಾಮದ ಡಾ.ಕೆ.ನಾಗರಾಜ್ ಅವರನ್ನು ನೇಮಕ ಮಾಡಲಾಗಿದೆ
ಮೈಸೂರಿನಲ್ಲಿ ಕುಂಬಾರ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ.ಶಿವಕುಮಾರ ಚೌಡಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಡಾ.ಕೆ.ನಾಗರಾಜ್ ಯುವ ಘಟಕದ ಅಧ್ಯಕ್ಷರಾಗಿ, ಕಾರ್ಯಾಧ್ಯಕ್ಷರಾಗಿ ಅಣ್ಣಯ್ಯ ಕುಲಾಲ್, ಗೌರವ ಅಧ್ಯಕ್ಷರಾಗಿ ಆಂಧ್ರಪ್ರದೇಶದ ಐಲಪುರಂ ರಾಜು ಸೇರಿದಂತೆ ಇತರೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ,
ಕಲ್ಲಂಡೂರು ಗ್ರಾಮದ ಡಾ ನಾಗರಾಜ್ ಅವರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕುಂಬಾರ ಸಮಾಜವನ್ನು ಸಂಘಟಿಸಿ ಸಮುದಾಯದ ಏಳಿಗೆಗಾಗಿ ದುಡಿಯುತ್ತಿದ್ದಾರೆ ಕುಂಬಾರ ಜನಾಂಗದಲ್ಲಿನ ಕುಲಕಸುಬು ಮಾಡುವವರಿಗೆ ಸಾಲ, ಕೌಶಲ್ಯ ತರಬೇತಿ ನೀಡಿ ಉತ್ತೇಜಿಸುವ ಜೊತೆಗೆ ಅವರನ್ನು ಆರ್ಥಿಕವಾಗಿ ಬಲ ತುಂಬಲು ಸಹಾಯಧನ ಒದಗಿಸುವುದು. ಕುಂಬಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಸಮುದಾಯದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
ಚಿತ್ರ : ಡಾ. ಕಲ್ಲಂಡೂರು ನಾಗರಾಜ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್