ಎಸ್ಸೆಸ್ಸೆಲ್ಸಿ ರಾಜ್ಯಮಟ್ಟದ ಪೂರ್ವಸಿದ್ದತಾ ಪರೀಕ್ಷೆ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ
ಎಸ್ಸೆಸ್ಸೆಲ್ಸಿ ರಾಜ್ಯಮಟ್ಟದ ಪೂರ್ವಸಿದ್ದತಾ ಪರೀಕ್ಷೆ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ
ಕೋಲಾರ ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ರಾಜ್ಯಮಟ್ಟದ ಪೂರ್ವಸಿದ್ದತಾ ಪರೀಕ್ಷೆ ನಡೆಯುತ್ತಿರುವ ಪರೀಕ್ಷಾ ಕೇಂದ್ರಗಳಿಗೆ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಕೋಲಾರ, ೨೪ ಫೆಬ್ರವರಿ (ಹಿ.ಸ) :

ಆ್ಯಂಕರ್ : ವಿದ್ಯಾರ್ಥಿಗಳ ಜೀವನದ ಅತಿ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ಮಗು ಅನುತ್ತೀರ್ಣವಾಗಬಾರದು, ಪ್ರೌಢಶಿಕ್ಷಣ ಮಂಡಳಿ ನೀಡಿರುವ ಮಾದರಿ ಪ್ರಶ್ನೆಪತ್ರಿಕೆಗಳು, ೩ ಪೂರ್ವಸಿದ್ದತಾ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳಿಗೆ ಹಲವು ಬಾರಿ ಮಕ್ಕಳಿಂದ ಉತ್ತರ ಬರೆಸಿ ಅವರ ಕಲಿಕೆ ದೃಢಪಡಿಸಿಕೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ಶಿಕ್ಷಕರಿಗೆ ಹೇಳಿದರು.

ರಾಜ್ಯಮಟ್ಟದ ೩ನೇ ಪೂರ್ವಸಿದ್ದತ ಪರೀಕ್ಷೆ ಹಿನ್ನಲೆ ಕೇಂದ್ರಗಳಿಗೆ ಭೇಟಿ ನೀಡಿದ ನಂತರ ತಾಲ್ಲೂಕಿನ ಸೂಲೂರು ಪ್ರೌಢಶಾಲೆಯಲ್ಲಿ ಪರೀಕ್ಷಾ ಕಾರ್ಯಗಳನ್ನು ಪರಿಶೀಲಿಸಿ ಮಾತನಾಡಿದರು.

ಮಕ್ಕಳ ಕಲಿಕಾ ಪ್ರಗತಿಯ ವಿಶ್ಲೇಷಣೆಗೆ ಸಹಕಾರಿಯಾಗಿರುವ ಪೂರ್ವಸಿದ್ದತಾ ಪರೀಕ್ಷೆಯಲ್ಲಿ ಹಿಂದುಳಿದ, ಕಡಿಮೆ ಅಂಕ ಪಡೆದ ಮಕ್ಕಳ ಬಗ್ಗೆ ವಿಶೇಷ ಗಮನ ನೀಡಿ ಅವರನ್ನು ಸಿದ್ದಗೊಳಿಸಿ ಎಂದು ತಾಕೀತು ಮಾಡಿದರು.

ಉತ್ತಮ ಫಲಿತಾಂಶದ ದೃಷ್ಟಿಯಿಂದ ಶಿಕ್ಷಕರು,ಮುಖ್ಯಶಿಕ್ಷಕರ ಜವಾಬ್ದಾರಿ ಅಧಿಕವಿದೆ, ಪೂರ್ವಸಿದ್ದತಾ ಪರೀಕ್ಷೆ ಫಲಿತಾಂಶ ವಿಶ್ಲೇಷಣೆ ನಡೆಸಿ, ಅದರಲ್ಲಿ ಕಡಿಮೆ ಅಂಕಗಳಿಸಿರುವ ಮಕ್ಕಳನ್ನು ಗುರುತಿಸಿ ಅವರ ಕಲಿಕಾ ಪ್ರಗತಿಗೆ ವಿಶೇಷ ಗಮನ ನೀಡಿ, ಅನುತ್ತೀರ್ಣರಾದವರನ್ನು ತೇರ್ಗಡೆಯಾಗುವ ಮಟ್ಟಿಗಾದರೂ ಸಿದ್ದಗೊಳಿಸಿ, ಉಳಿದ ಮಕ್ಕಳು ಗುಣಾತ್ಮಕ ಫಲಿತಾಂಶ ಪಡೆಯಲು ಮಾರ್ಗದರ್ಶನ ನೀಡಿ. ಎಸ್ಸೆಸ್ಸೆಲ್ಸಿ ಜೀವನದ ಮೊದಲ ಪಬ್ಲಿಕ್ ಪರೀಕ್ಷೆಯಾಗಿದೆ, ಇದರಿಂದ ಮಕ್ಕಳಲ್ಲಿ ಭಯ ಸಹಜ ಆದರೆ ಶಿಕ್ಷಕರು ಮಕ್ಕಳ ಕಲಿಕೆಯಲ್ಲಿ ದೃಢತೆ ಸಾಧಿಸುವಂತೆ ಮಾಡಿದರೆ ಅವರಲ್ಲಿನ ಹೆದರಿಕೆ ಮಾಯವಾಗುತ್ತದೆ, ಅದಕ್ಕಾಗಿಯೇ ನಡೆಸುತ್ತಿರುವ ಪೂರ್ವಸಿದ್ದತಾ ಪರೀಕ್ಷೆಗಳನ್ನು ಮೂಲ ಪರೀಕ್ಷೆ ಮಾದರಿಯಲ್ಲೇ ಬರೆಸಿ ಎಂದರು.

ಪಠ್ಯದಲ್ಲಿನ ಪ್ರತಿ ಪ್ರಶ್ನೆಗೂ ಉತ್ತರಿಸುವ ಶಕ್ತಿ ಮಕ್ಕಳಿಗೆ ಬಂದರೆ ಹೆದರಿಕೆ ತಾನಾಗಿಯೇ ದೂರವಾಗುತ್ತದೆ, ನಿತ್ಯ ವೇಳಾಪಟ್ಟಿಹಾಕಿಕೊಂಡು ಅಭ್ಯಾಸ ಮಾಡಲು ತಿಳಿಸಿ, ಕಷ್ಟವಾದ ಪ್ರಶ್ನೆಗಳಿಗೆ ಉತ್ತರವನ್ನು ಒಂದೆರಡು ಬಾರಿ ಬರೆದು ಅಭ್ಯಾಸ ಮಾಡಲು ತಿಳಿಸಿ, ಮನೆ ಭೇಟಿ ಮೂಲಕ ಪೋಷಕರಲ್ಲೂ ಜಾಗೃತಿ ಮೂಡಿಸಿ. ಅನ್ವಯಿಕ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸುವ ಮೂಲಕ ಶೇ.೧೦೦ ಸಾಧನೆಗೆ ಪಠ್ಯ ಓದಿಗೆ ಒತ್ತು ನೀಡಬೇಕು, ಈಗಾಗಲೇ ಇಲಾಖೆಯಿಂದ ನೀಡಿರುವ ಮಾದರಿ ಪ್ರಶ್ನೆಪತ್ರಿಕೆಗಳನ್ನು ಮತ್ತೆ ಮತ್ತೆ ಅಭ್ಯಾಸ ಮಾಡಲು ತಿಳಿಸಿ ಎಂದರು.

ವಿದ್ಯಾರ್ಥಿಗಳಿಲಗೆ ಕಿವಿಮಾತು ಹೇಳಿದ ಅವರು, ಪರೀಕ್ಷೆ ಕುರಿತು ಭಯಪಡುವ ಅಗತ್ಯವಿಲ್ಲ, ಆತ್ಮಸ್ಥೆöÊರ್ಯ ಹಾಗೂ ಸಂಭ್ರಮದಿAದ ಪರೀಕ್ಷೆ ಎದುರಿಸಲು ಸಿದ್ದರಾಗಿ, ಪಠ್ಯಕ್ರಮ ಪೂರ್ಣಗೊಂಡಿರುವುದನ್ನು ಖಾತ್ರಿ ಮಾಡಿಕೊಂಡು ನೈಜಗುರಿ ಸಾಧನೆಗೆ ಓದು ಮುಂದುವರೆಸಿ. ಪ್ರಶ್ನೆಪತ್ರಿಕೆ ಯಾವುದೇ ರೀತಿ ಕೊಟ್ಟರೂ ನೀವು ಉತ್ತರಿಸಲು ಸಿದ್ದರಾಗಿರಬೇಕು, ಅದಕ್ಕೆ ಪರಿಶ್ರಮ ಅಗತ್ಯವಿದೆ, ಕ್ರೀಡೆ, ಆಟ,ಸಿನಿಮಾ ಎಲ್ಲವನ್ನು ಪರೀಕ್ಷೆ ಮುಗಿಯುವವರೆಗೂ ಮರೆತುಬಿಡಿ ನಿಮ್ಮ ಗುರಿ ಕೇವಲ ಉತ್ತಮ ಫಲಿತಾಂಶದತ್ತ ಇರಲಿ. ಶಿಕ್ಷಕರ ಬೋಧನೆಯನ್ನು ಗಮನವಿಟ್ಟು ಕೇಳಿ, ಜತೆಗೆ ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ, ಅನ್ವಯಿಕ ಪ್ರಶ್ನೆಗಳಿಗೆ ಉತ್ತರ ಬರೆಯಲು ಇದು ಹೆಚ್ಚು ಸಹಕಾರಿ ಎಂದು ತಿಳಿಸಿ, ಶೇ.೧೦೦ ಸಾಧನೆಗೆ ಪಠ್ಯಪುಸ್ತಕ ಓದು ಅತಿ ಅವಶ್ಯ ಎಂದರು.

ಉತ್ತಮ ಬರವಣಿಗೆ ನಿಮ್ಮ ಸಾಧನೆಗೆ ಸ್ಪೂರ್ತಿಯಾಗಲಿದೆ, ವಿದ್ಯಾರ್ಥಿಗಳು ಬರವಣಿಗೆ ಉತ್ತಮಪಡಿಸಿಕೊಳ್ಳಲು ನಿರಂತರವಾಗಿ ಪಠ್ಯದಲ್ಲಿರುವುದನ್ನೇ ಬರೆದು ಅಭ್ಯಾಸ ಮಾಡಿ, ಬರವಣಿಗೆ ಉತ್ತಮವಾಗಿದ್ದರೆ ಮಾತ್ರ ಶೇ.೧೦೦ ಅಂಕ ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಭಾರ ಮುಖ್ಯಶಿಕ್ಷಕಿ ಸುಮ, ಶಿಕ್ಷಕರಾದ ಮುಕುಂದ,ದೀಪಾ,ನಾಗರಾಜ್,ನೀಲಾ, ಮರುತಿ, ಚಲಂ ಉಪಸ್ಥಿತರಿದ್ದರು..

ಚಿತ್ರ ಕೋಲಾರ ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ರಾಜ್ಯಮಟ್ಟದ ಪೂರ್ವಸಿದ್ದತಾ ಪರೀಕ್ಷೆ ನಡೆಯುತ್ತಿರುವ ಪರೀಕ್ಷಾ ಕೇಂದ್ರಗಳಿಗೆ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande