ಪುಟ್ಬಾಲ್ ಕ್ರೀಡೆಯನ್ನು ಉತ್ತೇಜಿಸಲು ಭಾರತ ಸರ್ಕಾರದ ಕ್ರಮ
ಪುಟ್ಬಾಲ್ ಕ್ರೀಡೆಯನ್ನು ಉತ್ತೇಜಿಸಲು ಭಾರತ ಸರ್ಕಾರದ ಕ್ರಮ
ಕೋಲಾರದ ನವೋದಯ ಶಾಲೆ ಉಪನ್ಯಾಸಕ ಬಾಬು ಕೋಲಾರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ತಾಲ್ಲೂಕಿನ ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳಿಗೆ ಕೇಂದ್ರ ಸರ್ಕಾರ ಒದಗಿಸಿರುವ ಪುಟ್ಬಾಲ್ಗಳನ್ನು ಹಸ್ತಂತರಿಸಿದರು.


ಕೋಲಾರ, ೨೪ ಫೆಬ್ರವರಿ (ಹಿ.ಸ) :

ಆ್ಯಂಕರ್ : ಪುಟ್ಬಾಲ್ ಕ್ರೀಡೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಿಲ್ಲೆಯ ೧೫೦ ಸರ್ಕಾರಿ ಪ್ರೌಢಶಾಲೆಗಳಿಗೆ ನವೋದಯ ಶಾಲೆಯ ಆಶ್ರಯದಲ್ಲಿ ತಲಾ ೫ ಪುಟ್ಬಾಲ್ಗಳನ್ನು ವಿತರಿಸುತ್ತಿದೆ ಎಂದು ಕೋಲಾರದ ನವೋದಯ ಶಾಲೆ ಉಪನ್ಯಾಸಕ ಬಾಬು ತಿಳಿಸಿದರು.

ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ತಾಲ್ಲೂಕಿನ ಸರ್ಕಾರಿ,ಅನುದಾನಿತ ಪ್ರೌಢಶಾಲೆಗಳಿಗೆ ಕೇಂದ್ರ ಸರ್ಕಾರ ಒದಗಿಸಿರುವ ಪುಟ್ಬಾಲ್ಗಳನ್ನು ಹಸ್ತಂತರಿಸಿ ಮಾತನಾಡಿದರು.

ಪುಟ್ಬಾಲ್ ಕ್ರೀಡೆಯನ್ನು ಶಾಲೆಗಳಲ್ಲಿ ಪ್ರೋತ್ಸಾಹಿಸುವ ಮೂಲಕ ಮಕ್ಕಳನ್ನು ಉತ್ತಮ ಕ್ರೀಡಾಪಟುಗಳನ್ನಾಗಿಸುವ ಗುರಿಯೊಂದಿಗೆ ಭಾರತ ಸರ್ಕಾರ ಶಾಲೆಗಳಿಗೆ ಪುಟ್ಬಾಲ್ಗಳನ್ನು ನೀಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಿ. ಕ್ರೀಡೆಗಳೂ ಸಹಾ ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು, ಉತ್ತಮ ಆರೋಗ್ಯ, ಪರಸ್ಪರ ಸ್ನೇಹ ಮನೋಭಾವ ವೃದ್ದಿಗೆ ಸಹಕಾರಿಯಾಗಿದೆ ಎಂದ ಅವರು, ಮಕ್ಕಳಲ್ಲಿ ಕ್ರೀಡಾಭಿರುಚಿ ಹೆಚ್ಚಿಸಿ ಎಂದು ಕೋರಿದರು.

ಗ್ರಾಮೀಣ ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ದೈಹಿಕ ಸದೃಢತೆ ಇರುತ್ತದೆ, ಈ ಮಕ್ಕಳು ಕ್ರೀಡೆಗಳಲ್ಲಿ ಹೆಚ್ಚುಸಾಧನೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ ಎಂದ ಅವರು, ಗ್ರಾಮೀಣ ಪ್ರದೇಶಗಳಲ್ಲೂ ಪುಟ್ಬಾಲ್ ಕಲಿಕೆಗೆ ದೈಹಿಕ ಶಿಕ್ಷಕರು ಒತ್ತು ನೀಡಬೇಕು. ಕ್ರಿಕೆಟ್ಗೆ ಇಂದು ಜನ ಮನಸೋತಿದ್ದಾರೆ ಆದರೆ ಇದರ ಜತೆಯಲ್ಲೇ ನಮ್ಮ ದೈಹಿಕ ಸಾಮರ್ಥ್ಯವನ್ನು ಸಾಕ್ಷೀಕರಿಸುವ ದೇಶಿ ಕ್ರೀಡೆಗಳಾದ ಕಬ್ಬಡ್ಡಿ, ಖೋಖೊ ಮರೆಯುತ್ತಿದ್ದಾರೆ ಎಂದ ಅವರು, ದೈಹಿಕ ಸಾಮರ್ಥ್ಯ ವೃದ್ದಿಗೆ ಈ ಕ್ರೀಡೆಗಳು ಹೆಚ್ಚು ಪ್ರೇರಕ. ಮಕ್ಕಳಲ್ಲಿ ಋಣಾತ್ಮಕ ಚಿಂತನೆ, ಆತ್ಮಹತ್ಯೆಯತ್ತ ಸೋಲುವ ಮನಸ್ಥಿತಿ ಹೆಚ್ಚುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದ ಅವರು, ಪೋಷಕರು ಮಕ್ಕಳನ್ನು ಕೇವಲ ಅಂಕಗಳಿಕೆಗೆ ಸೀಮಿತವಾಗಿ ನೋಡುವುದರಿಂದ ಇಂತಹ ಸಮಸ್ಯೆಗಳು ಹೆಚ್ಚುತ್ತಿವೆ ಎಂದರು.

ಮಕ್ಕಳು ತಮ್ಮ ಕಲಿಕೆಯಲ್ಲಿಸೋತಾಗ ಅದನ್ನು ಸಹಿಸಿಕೊಂಡು ಮತ್ತೆ ಗೆಲ್ಲುವತ್ತ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು, ಆದರೆ ಕ್ರೀಡೆಗಳಿಗೆ ಅವಕಾಶ ಕಡಿಮೆಯಾಗುತ್ತಿರುವುದರಿಂದ ಮಕ್ಕಳಲ್ಲಿ ಸೋಲನ್ನು ಸ್ಥೆöÊರ್ಯದಿಂದ ಕಾಣುವ ಕ್ರೀಡಾಮನೋಭಾವದ ಕೊರತೆ ಹೆಚ್ಚಿದೆ ಎಂದು ವಿಷಾದಿಸಿದರು.

ಭಾರತ ಸರ್ಕಾರ ಗುಣಮಟ್ಟದ ಪುಟ್ಬಾಲ್ಗಳನ್ನು ನೀಡಿದ್ದು, ಇದನ್ನು ಮಕ್ಕಳಿಗೆ ನೀಡಿ ಅವರು ಆಟವಾಡಲು ಅವಕಾಶ ಕಲ್ಪಿಸಿ, ದೈಹಿಕ ಆರೋಗ್ಯವಿದ್ದರೆ ಮಾತ್ರವೇ ಉತ್ತಮ ಕಲಿಕೆ ಸಾಧ್ಯ ಎಂಬುದನ್ನು ಅರಿಯಲು ಪೋಷಕರಿಗೆ ಮನವರಿಕೆ ಮಾಡಿಕೊಡಿ ಎಂದರು.

ಈ ಸಂದರ್ಭದಲ್ಲಿ ವಿವಿಧ ಶಾಲೆಗಳ ದೈಹಿಕ ಶಿಕ್ಷಕರಾದ ಶಶಿಕಲಾ, ರವಿ, ಮುರಳಿಧರ್, ಸಂತೋಷಕುಮಾರಿ, ಸಂಗಮ್ಮ, ಅಂಬಿಕಾ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಹಾಜರಿದ್ದು, ಪುಟ್ಬಾಲ್ಗಳನ್ನು ಪಡೆದುಕೊಂಡರು.

ಚಿತ್ರ ; ಕೋಲಾರದ ನವೋದಯ ಶಾಲೆ ಉಪನ್ಯಾಸಕ ಬಾಬು ಕೋಲಾರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ತಾಲ್ಲೂಕಿನ ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳಿಗೆ ಕೇಂದ್ರ ಸರ್ಕಾರ ಒದಗಿಸಿರುವ ಪುಟ್ಬಾಲ್ಗಳನ್ನು ಹಸ್ತಂತರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande