ಕೊಪ್ಪಳ-ಭಾಗ್ಯನಗರ ಬಂದ್ ನಿರ್ಣಯಗಳು
ಕೊಪ್ಪಳ, 24 ಫೆಬ್ರವರಿ (ಹಿ.ಸ.) : ಆ್ಯಂಕರ್ : 1. ಬಲ್ಡೋಟ ತೊಲಗುವವರೆಗೆ ಹೋರಾಟ ಮುಂದುವರಿಯುತ್ತದೆ. ಮುಂದುವರಿದ ಭಾಗವಾಗಿ ರಸ್ತೆ ತಡೆ, ರೈಲು ತಡೆ ಮುಂತಾದ ಹೋರಾಟಕ್ಕೆ ಮುಂದಾಗಲು ನಿರ್ಣಯಿಸಲಾಯಿತು. 2. ಶಾಸಕರು ಜಿಲ್ಲಾ ಮಂತ್ರಿಗಳ ನೆತೃತ್ವದಲ್ಲಿ ಶೀಘ್ರದಲ್ಲಿ ಸರ್ವಪಕ್ಷಗಳ ಮತ್ತು ಆಂದೋಲನದ ಮುಖ
ಕೊಪ್ಪಳ-ಭಾಗ್ಯನಗರ ಬಂದ್ : ನಿರ್ಣಯಗಳು


ಕೊಪ್ಪಳ-ಭಾಗ್ಯನಗರ ಬಂದ್ : ನಿರ್ಣಯಗಳು


ಕೊಪ್ಪಳ-ಭಾಗ್ಯನಗರ ಬಂದ್ : ನಿರ್ಣಯಗಳು


ಕೊಪ್ಪಳ, 24 ಫೆಬ್ರವರಿ (ಹಿ.ಸ.) :

ಆ್ಯಂಕರ್ :

1. ಬಲ್ಡೋಟ ತೊಲಗುವವರೆಗೆ ಹೋರಾಟ ಮುಂದುವರಿಯುತ್ತದೆ. ಮುಂದುವರಿದ ಭಾಗವಾಗಿ ರಸ್ತೆ ತಡೆ, ರೈಲು ತಡೆ ಮುಂತಾದ ಹೋರಾಟಕ್ಕೆ ಮುಂದಾಗಲು ನಿರ್ಣಯಿಸಲಾಯಿತು.

2. ಶಾಸಕರು ಜಿಲ್ಲಾ ಮಂತ್ರಿಗಳ ನೆತೃತ್ವದಲ್ಲಿ ಶೀಘ್ರದಲ್ಲಿ ಸರ್ವಪಕ್ಷಗಳ ಮತ್ತು ಆಂದೋಲನದ ಮುಖಂಡರ ನಿಯೋಗ ಕೊಂಡೊಯ್ದು ಲಕ್ಷಾಂತರ ಜನರ ಭವಿಷ್ಯದ ಆರೋಗ್ಯ ಹಾನಿ ಕುರಿತು ಮನವರಿಕೆ ಮಾಡಿಕೊಡುವುದು.

3. ಉಚ್ಚನ್ಯಾಯಾಲಯದ ಆದೇಶ ಉಲ್ಲಂಘಿಸಿ ಬಲ್ಡೋಟ ಬಸಾಪುರ ಕೆರೆ ಅತಿಕ್ರಮಣ ತೆರವು ಮಾಡಿ ಸಾರ್ವಜನಿಕರಿಗೆ ಬಳಕೆಗೆ ಮುಕ್ತಗೊಳಿಸಬೇಕು.

4. ಐ.ಐ.ಎಸ್. ಸಿ ಮತ್ತು ಎಐಐಎಂಎಸ್ ಪರಿಸರ, ಆರೋಗ್ಯ ಸಮೀಕ್ಷೆ ನಡೆಸಬೇಕು.

5. ಪರಿಸರ ತಜ್ಞರ ವರದಿಯಂತೆ ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಬೇಕು.

6. ಮುಖ್ಯಮಂತ್ರಿಗಳು, ಕೈಗಾರಿಕಾ ಮಂತ್ರಿ ಬಾಧಿತ ಹಳ್ಳಿಗೆ ಭೇಟಿ ಕೊಡಬಕು.

7. ತುಂಗಭದ್ರಾ ವಿಷಗೊಳಿಸಿದ ಕಾರ್ಖಾನೆ ಗಳನ್ನು ಸೀಜ್ ಮಾಡಬೇಕು.

8. ಮುಂದಿನ ದಿನಗಳಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಜಿಲ್ಲೆಗಳಲ್ಲಿ ಬಂದ್ ಗೆ ಕರೆ ನೀಡುವುದು.

9. ಬಾಧಿತ ಹಳ್ಳಿಗಳಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುವುದು.

10. ಸರ್ಕಾರ ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್ ಘೋಷಣೆ ಮಾಡಬೇಕು

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande