
ಬೆಂಗಳೂರು, 12 ಫೆಬ್ರವರಿ (ಹಿ.ಸ.) :
ಆ್ಯಂಕರ್ : ತತ್ವಜ್ಞಾನಿ, ಸಮಾಜ ಸುಧಾರಕರು ಹಾಗೂ ಆರ್ಯ ಸಮಾಜದ ಸಂಸ್ಥಾಪಕರಾದ ಮಹರ್ಷಿ ಶ್ರೀ ದಯಾನಂದ ಸರಸ್ವತಿ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿದ್ದಾರೆ.
“ವೇದಗಳಿಗೆ ಹಿಂತಿರುಗಿ” ಎಂಬ ಮಹರ್ಷಿಗಳ ಕರೆಯು ಸಾಮಾಜಿಕ ಸುಧಾರಣೆ, ಶಿಕ್ಷಣ ಹಾಗೂ ರಾಷ್ಟ್ರೀಯ ಜಾಗೃತಿಗೆ ಮಹತ್ವದ ಚಳುವಳಿಯನ್ನೇ ಹುಟ್ಟುಹಾಕಿತು ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ದುಷ್ಕೃತ್ಯಗಳ ವಿರುದ್ಧ ಮಹರ್ಷಿ ದಯಾನಂದರು ತೆಗೆದುಕೊಂಡ ಅಚಲ ನಿಲುವು ಹಾಗೂ ನ್ಯಾಯಯುತ ಮತ್ತು ಪ್ರಬುದ್ಧ ಸಮಾಜ ನಿರ್ಮಾಣಕ್ಕಾಗಿ ನಡೆಸಿದ ಹೋರಾಟ ಚಿರಸ್ಮರಣೀಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮಹರ್ಷಿ ದಯಾನಂದರ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ಚಿಂತನೆಗಳು ಹೊಸ ತಲೆಮಾರಿಗೆ ಪ್ರೇರಣೆಯಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa