ಭಾರತ–ಸಿಂಗಾಪುರ ಯುವ ನವೋದ್ಯಮಿಗಳ ಸಹಕಾರಕ್ಕೆ ಒತ್ತು: 4ನೇ ಸಿಂಗಾಪುರ–ಭಾರತ ಹ್ಯಾಕಥಾನ್ಗೆ ಪ್ರಹ್ಲಾದ ಜೋಶಿ ಚಾಲನೆ
ನವದೆಹಲಿ, 15 ನವೆಂಬರ್ (ಹಿ.ಸ.): ಭಾರತ ಮತ್ತು ಸಿಂಗಾಪುರ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಯುವ ಪ್ರತಿಭೆಗಳಲ್ಲಿ ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಬೆಳೆಸುವ ಉದ್ದೇಶದಿಂದ 4ನೇ ಸಿಂಗಾಪುರ–ಭಾರತ ಹ್ಯಾಕಥಾನ್–2026ರ ಉದ್ಘಾಟನಾ ಸಮಾರಂಭದಲ್ಲಿ ಕೇಂದ್
ಸಿಂಗಾಪುರ–ಭಾರತ ಹ್ಯಾಕಥಾನ್–2026ರ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗವಹಿಸಿ ಮಾತನಾಡಿದರು.


ನವದೆಹಲಿ, 15 ನವೆಂಬರ್ (ಹಿ.ಸ.):

ಭಾರತ ಮತ್ತು ಸಿಂಗಾಪುರ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಯುವ ಪ್ರತಿಭೆಗಳಲ್ಲಿ ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಬೆಳೆಸುವ ಉದ್ದೇಶದಿಂದ 4ನೇ ಸಿಂಗಾಪುರ–ಭಾರತ ಹ್ಯಾಕಥಾನ್–2026ರ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗವಹಿಸಿ ಮಾತನಾಡಿದರು.

ಸಿಂಗಾಪುರದ ಸಿಂಗಾಪುರ ನಿರ್ವಹಣಾ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಂಗಾಪುರ ಶಿಕ್ಷಣ ಸಚಿವ ಡೆಸ್ಮಂಡ್ ಲೀ, ಭಾರತ ರಾಯಭಾರಿ ಡಾ. ಶಿಲ್ಪಕ್ ಅಂಬುಲೆ, ವಿಶ್ವವಿದ್ಯಾಲಯದ ಉಪಾಧ್ಯಕ್ಷೆ ಪ್ರೊ. ಲಿಮ್ ಸನ್ ಸನ್, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಪ್ರೊ. ಯೋಗೇಶ್ ಸಿಂಗ್ ಸೇರಿದಂತೆ ಗಣ್ಯರು, ಬೋಧಕ ವರ್ಗದವರು, ಉದ್ಯಮ ಪಾಲುದಾರರು ಹಾಗೂ ಉಭಯ ದೇಶಗಳ 120 ಯುವ ನವೋದ್ಯಮಿಗಳು ಪಾಲ್ಗೊಂಡಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಮಾಜಿ ಪ್ರಧಾನಿ ಲೀ ಸಿಯೆನ್ ಲೂಂಗ್ ಅವರ ದೂರದೃಷ್ಟಿಯ ಫಲವಾಗಿ ಈ ಉಪಕ್ರಮ ರೂಪುಗೊಂಡಿದೆ. ಇದು ಉಭಯ ದೇಶಗಳ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಬಲವರ್ಧನೆ ಹಾಗೂ ನಾವೀನ್ಯತೆ ಮತ್ತು ಯುವ ಪ್ರತಿಭೆಗಳ ಪೋಷಣೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ–2020, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಮತ್ತು ಭಾರತ್ ಇನ್ನೋವೇಟ್ಸ್ ಮೂಲಕ ನಾವೀನ್ಯತೆ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಪ್ರಗತಿಯನ್ನು ಅವರು ಪ್ರಸ್ತಾಪಿಸಿದರು. ವಿಶ್ವವಿದ್ಯಾಲಯಗಳ ನಡುವಿನ ಸಾಂಸ್ಥಿಕ ಸಹಕಾರ, ನಿರಂತರ ಮಾರ್ಗದರ್ಶನ ಹಾಗೂ ನಾವೀನ್ಯತೆ ಪ್ರಯೋಗ ವೇದಿಕೆಗಳನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು.

ಯುವ ನವೋದ್ಯಮಿಗಳು ರೂಪಿಸುವ ಉತ್ತಮ ಆಲೋಚನೆಗಳು ಕೇವಲ ಮಾದರಿಗಳ ಹಂತಕ್ಕೆ ಸೀಮಿತವಾಗದೆ, ನೈಜ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯರೂಪದ ಆವಿಷ್ಕಾರಗಳಾಗಿ ಹೊರಹೊಮ್ಮಬೇಕು ಎಂಬುದು ಈ ಪ್ರಯತ್ನದ ಉದ್ದೇಶವಾಗಿದೆ. ಉತ್ತಮ ಭವಿಷ್ಯಕ್ಕಾಗಿ ಯುವಜನರು ಒಟ್ಟಾಗಿ ಕೆಲಸ ಮಾಡಲು, ಹೊಸ ಆಲೋಚನೆಗಳನ್ನು ರೂಪಿಸಲು ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande