
ನವದೆಹಲಿ, 14 ನವೆಂಬರ್ (ಹಿ.ಸ.):
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ನವೆಂಬರ್ 15 ಮತ್ತು 16ರಂದು ಈಜಿಪ್ಟ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ.
ಭಾರತ ಮತ್ತು ಈಜಿಪ್ಟ್ ನಡುವಿನ ದೀರ್ಘಕಾಲದ ಸ್ನೇಹ ಹಾಗೂ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ವಿಸ್ತರಣೆ, ಹೂಡಿಕೆ ಉತ್ತೇಜನ, ಕೈಗಾರಿಕಾ ಸಹಕಾರ ಹೆಚ್ಚಳ ಹಾಗೂ ಉದ್ಯಮ ವಲಯಗಳ ನಡುವಿನ ನೇರ ಸಂಪರ್ಕ ಬಲಪಡಿಸುವುದಕ್ಕೆ ವಿಶೇಷ ಆದ್ಯತೆ ನೀಡಲಾಗುವುದು.
ಭೇಟಿಯ ಸಂದರ್ಭದಲ್ಲಿ ಭಾರತ–ಈಜಿಪ್ಟ್ ಜಂಟಿ ವ್ಯಾಪಾರ ಸಮಿತಿಯ 7ನೇ ಅಧಿವೇಶನ ನಡೆಯಲಿದೆ. ಇದರೊಂದಿಗೆ ಭಾರತ–ಈಜಿಪ್ಟ್ ಜಂಟಿ ಉದ್ಯಮ ಮಂಡಳಿಯ ಸಭೆ ಹಾಗೂ ಭಾರತ–ಈಜಿಪ್ಟ್ ಉದ್ಯಮ ವೇದಿಕೆಯನ್ನೂ ಆಯೋಜಿಸಲಾಗಿದೆ.
ಈಜಿಪ್ಟ್‌ನ ಹಿರಿಯ ಸಚಿವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ಪಿಯೂಷ್ ಗೋಯಲ್ ಅವರು, ಅಲ್ಲಿನ ಪ್ರಮುಖ ಉದ್ಯಮ ಪ್ರತಿನಿಧಿಗಳೊಂದಿಗೂ ಸಂವಾದ ನಡೆಸಲಿದ್ದಾರೆ.
ಇದಲ್ಲದೆ, ಆಫ್ರಿಕನ್ ರಫ್ತು–ಆಮದು ಬ್ಯಾಂಕ್ (ಆಫ್ರೆಕ್ಸಿಂಬ್ಯಾಂಕ್), ಈಜಿಪ್ಟ್ ಕಿರಿಯ ಉದ್ಯಮಿಗಳ ಸಂಘ ಹಾಗೂ ಈಜಿಪ್ಟ್–ಭಾರತ ನವೋದ್ಯಮ ವೇದಿಕೆಯ ಪ್ರತಿನಿಧಿಗಳೊಂದಿಗೂ ಸಭೆ ನಡೆಸಲಿದ್ದಾರೆ.
ಈ ಭೇಟಿಯ ಮೂಲಕ ಭಾರತ ಮತ್ತು ಈಜಿಪ್ಟ್ ನಡುವಿನ ವ್ಯಾಪಾರ, ಹೂಡಿಕೆ ಹಾಗೂ ಕೈಗಾರಿಕಾ ಕ್ಷೇತ್ರಗಳ ಸಹಕಾರಕ್ಕೆ ಮತ್ತಷ್ಟು ವೇಗ ದೊರೆಯುವ ನಿರೀಕ್ಷೆಯಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.