


ಬಳ್ಳಾರಿ, 14 ಅಕ್ಟೋಬರ್ (ಹಿ.ಸ.)
ಬಳ್ಳಾರಿ ನಗರದ ಮಿಲ್ಲರಪೇಟೆಯ ಕವಿತಾ ಐಸ್ ಫ್ಯಾಕ್ಟರಿ ಪ್ರದೇಶದ ನಿವಾಸಿ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಅಲ್ಲೀಪುರದ ಬಳಿ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ.
ಮೃತರು ಲತೀಫಾ ಸಿಮ್ರಾನ್ (29) ಹಾಗೂ ಇಬ್ಬರು ಮಕ್ಕಳಾದ ಮಹಮ್ಮದ್ ಅಯಾನ್ (03) ಮತ್ತು ಆಯಿಷಾ ಫಾತಿಮಾ (02) ಅವರನ್ನು ಕರೆದುಕೊಂಡು ಹೋಗಿ, ಅಲ್ಲೀಪುರದ ಸಮೀಪದ ಕಾಲುವೆಯಲ್ಲಿ ಬಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮೃತಳ ಗಂಡ ಸದ್ದಾಂ ಹುಸೇನ್ ಮತ್ತು ಅವರ ಪೋಷಕರ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್