
ಹುಬ್ಬಳ್ಳಿ, 09 ಜನವರಿ (ಹಿ.ಸ.);
ಆ್ಯಂಕರ್:ಹುಬ್ಬಳ್ಳಿ ನಗರದಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ ಘಟನೆಯ ವಿರುದ್ಧ ನಗರದ ಸ್ಟೇಷನ್ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಇಂದು ಬಿಜೆಪಿ ಪ್ರತಿಭಟನಾ ಸಭೆ ಜರುಗಿತು. ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ ಸರ್ಕಾರದ ದ್ವೇಷ ರಾಜಕಾರಣ ಮತ್ತು ಆಡಳಿತ ಯಂತ್ರದ ದುರುಪಯೋಗವನ್ನು ಖಂಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥ ಮಹಿಳೆಯನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಹೇರಲಾಗಿದೆ ಮತ್ತು ವರ್ಗಾವಣೆಗೊಳಿಸುವ ಬೆದರಿಕೆ ನೀಡಲಾಗಿತ್ತು. ನಾಗರಿಕರ ಸುರಕ್ಷತೆಗೆ ಹೊಣೆಗಾರರಾಗಿದ್ದ ಪೊಲೀಸರೇ ಮಹಿಳೆಯೊಬ್ಬರನ್ನು ದೌರ್ಜನ್ಯಪಡಿಸಿರುವ ಘಟನೆ, ರಾಜ್ಯದಷ್ಟು ಮಾತ್ರವಲ್ಲದೆ, ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸ್ವಯಂಪ್ರೇರಿತ ಮಧ್ಯಪ್ರವೇಶಕ್ಕೆ ಕಾರಣವಾಗಿದೆ. ಈ ಘಟನೆ ರಾಜ್ಯದ ಆಡಳಿತ ವೈಫಲ್ಯಕ್ಕೆ ಕನ್ನಡಿ ಹಿಡಿದಿರುವುದಾಗಿ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa