ಸುಗಟೂರು ಹೋಬಳಿ ಶಾಲೆಗಳ ಅಕ್ಷರದಾಸೋಹ ಸಿಬ್ಬಂದಿಗೆ ಕಾರ್ಯಾಗಾರ
ಸುಗಟೂರು ಹೋಬಳಿ ಶಾಲೆಗಳ ಅಕ್ಷರದಾಸೋಹ ಸಿಬ್ಬಂದಿಗೆ ಕಾರ್ಯಾಗಾರ
ಕೋಲಾರ ತಾಲ್ಲೂಕಿನ ಸುಗಟೂರು ಸಬರಮತಿ ಶಾಲೆಯಲ್ಲಿ ಸುಗಟೂರು, ಮದನಹಳ್ಳಿ ಕ್ಲಸ್ಟರ್ ಶಾಲೆಗಳ ಅಡುಗೆ ಸಿಬ್ಬಂದಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ತಾಲ್ಲೂಕು ಬಿಸಿಯೂಟ ಸಹಾಯಕ ನಿರ್ದೇಶಕ ಸುಬ್ರಮಣಿ ಮಾತನಾಡಿದರು.


ಕೋಲಾರ, ೦೯ ಜನವರಿ (ಹಿ.ಸ) :

ಆ್ಯಂಕರ್ : ನೂರಾರು ಮಕ್ಕಳಿಗೆ ಅನ್ನ ಮಾಡಿ ಬಡಿಸುವ ಅಕ್ಷರದಾಸೋಹ ಸಿಬ್ಬಂದಿ ತಾಯಿಯಂತೆ ಕರ್ತವ್ಯ ನಿರ್ವಹಿಸಬೇಕು, ಊಟದಲ್ಲಿ ಶುಚಿ,ರುಚಿ,ಗುಣಮಟ್ಟಕ್ಕೆ ಲೋಪವಾಗದಂತೆ ಎಚ್ಚರವಹಿಸಬೇಕು ಎಂದು ಅಕ್ಷರದಾಸೋಹ ತಾಲ್ಲೂಕು ಸಹಾಯಕ ನಿರ್ದೇಶಕ ಎಸ್.ಟಿ.ಸುಬ್ರಮಣಿ ಕರೆ ನೀಡಿದರು.

ಕೋಲಾರ ತಾಲ್ಲೂಕಿನ ಸುಗಟೂರು ಸಬರಮತಿ ಪ್ರೌಢಶಾಲೆಯಲ್ಲಿ ಪ್ರಧಾನ ಮಂತ್ರಿ ಶಕ್ತಿ ಪೋಷಣ್‌ನಿರ್ಮಾಣ್ ಯೋಜನೆ ಆಶ್ರಯದಲ್ಲಿ ಸುಗಟೂರು, ಮದನಹಳ್ಳಿ ಕ್ಲಸ್ಟರ್‌ಗಳ ಸರ್ಕಾರಿ,ಅನುದಾನಿತ ಶಾಲಾ ಅಡುಗೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು

ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳೇ ಎಂದು ಪರಿಗಣಿಸಿ, ಮನೆಯಲ್ಲಿ ನಿಮ್ಮ ಮಕ್ಕಳನ್ನು ಕಾಣುವಷ್ಟೇ ಪ್ರೀತಿಯಿಂದ ಅವರನ್ನೂ ಕಾಣಬೇಕು, ಅದು ನಿಮ್ಮ ಮಕ್ಕಳಿಗೂ ಶ್ರೇಯಸ್ಕರ ಎಂದು ಕಿವಿಮಾತು ಹೇಳಿದರು.

ಅಡುಗೆ ಕೋಣೆ ಶುಭ್ರವಾಗಿದ್ದರೆ ಮಾತ್ರ ಅಡುಗೆಯಲ್ಲೂ ಶುಚಿತ್ವ ಕಾಪಾಡಲು ಸಹಕಾರಿಯಾಗುತ್ತದೆ ಎಂಬುದನ್ನು ಅರಿತು ಗಮನಹರಿಸಿ, ಪಾತ್ರೆಗಳ ಸ್ವಚ್ಚತೆ, ಶುದ್ದ ಕುಡಿಯುವ ನೀರು, ಗುಣಮಟ್ಟದ ತರಕಾರಿ ಬಳಕೆ ಉತ್ತಮ ಬಿಸಿಯೂಟ ತಯಾರಿಕೆಗೆ ಅತಿ ಮುಖ್ಯವಾಗಿದೆ, ಇವುಗಳು ಮಕ್ಕಳ ಆರೋಗ್ಯ ರಕ್ಷಣೆಗೂ ಸಹಕಾರಿಯಾಗಲಿದ್ದು, ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂದರು.

ಅಕ್ಷರದಾಸೋಹ ಕಾರ್ಯಕ್ರಮವನ್ನು ಕೋಲಾರ ತಾಲ್ಲೂಕಿನಲ್ಲಿ ಅತ್ಯಂತ ಯಶಸ್ವಿಯಾಗಿ ಯಾವುದೇ ಸಮಸ್ಯೆಗಳಿಲ್ಲದಂತೆ ನಿರ್ವಹಿಸಿಕೊಂಡು ಬರುತ್ತಿದ್ದೇವೆ, ಅಡುಗೆ ಸಾಮಗ್ರಿಗಳ ನಿರ್ವಹಣೆ, ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸಿ ಎಂದು ಕಿವಿಮಾತು ಹೇಳಿ, ಮಕ್ಕಳ ಹಾಜರಾತಿಗೆ ತಕ್ಕಂತೆ ಧಾನ್ಯಗಳ ಬಳಕೆ,ಸಂಗ್ರಹಣೆ ಇರಬೇಕು ಎಂದರು.

ಸಬರಮತಿ ಪ್ರೌಢಶಾಲೆ ಆಡಳಿತಾಧಿಕಾರಿ ಬಿ.ವೆಂಕಟೇಶ್, ಮಕ್ಕಳ ಆರೋಗ್ಯ ಕಾಪಾಡುವುದು ಶಿಕ್ಷಕರ ಜತೆಗೆ ಅಡುಗೆ ಸಿಬ್ಬಂದಿಯದ್ದು ಜವಾಬ್ದಾರಿಯಾಗಿದೆ, ಶಾಲೆಯ ಅಡುಗೆ ಮನೆ ನಿಮ್ಮ ಮನೆಯ ಅಡುಗೆ ಮನೆ ಎಂದೇ ಭಾವಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ, ಅಡುಗೆ ಮನೆಯಲ್ಲಿ ಜೇಡರ ಬಲೆ, ಹಲ್ಲಿ, ಇಲಿ,ಹೆಗ್ಗಣಗಳು ಇರದಂತೆ ಎಚ್ಚರವಹಿಸಿ ಎಂದು ಕಿವಿಮಾತು ಹೇಳಿದರು.

ಚರಣ್‌ತೇಜಾ ಇಂಡಿಯನ್ ಗ್ರಾಮೀಣ್ ಗ್ಯಾಸ್ ವಿತರಕ ಮಂಜುನಾಥ್ ಮಾತನಾಡಿ, ಅಡುಗೆ ಅನಿಲ ಬಳಕೆ, ಅವಘಡ ತಪ್ಪಿಸಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿ, ತಿಂಗಳಿಗೆ ಅಗತ್ಯವಾದ ಅಡುಗೆ ಅನಿಲ ಸಿಲೆಂಡರ್‌ಗಳ ಕುರಿತು ಮಾಹಿತಿ ಇಂಡೆAಟ್ ನೀಡಿ ಎಂದರು.

ಸಿಲೆAಡರ್ ಬಳಕೆ ಮಾಡುವಾಗ ಎಚ್ಚರವಹಿಸಿ, ನಿಗಧಿತ ಕಾಲಕ್ಕೆ ಗ್ಯಾಸ್ ಪೈಪ್ ಬದಲಿಸಿ, ಸ್ಟೌವ್ ಸ್ವಚ್ಚತೆ ಕಾಪಾಡಿಕೊಳ್ಳಿ, ಅಡುಗೆ ಮುಗಿದ ನಂತರ ರೆಗ್ಯುಲೇಟರ್ ಆಪ್ ಮಾಡಿ ಎಂದು ಸಲಹೆ ನೀಡಿದರು.

ಸಿಆರ್‌ಪಿ ಮುನಿನಾರಾಯಣಪ್ಪ ಸೇರಿದಂತೆ ಸುಗಟೂರು, ಮದನಹಳ್ಳಿ ಕ್ಲಸ್ಟರ್ ಶಾಲೆಗಳ ಅಡುಗೆ ಸಿಬ್ಬಂದಿ ಹಾಜರಿದ್ದರು.

ಚಿತ್ರ : ಕೋಲಾರ ತಾಲ್ಲೂಕಿನ ಸುಗಟೂರು ಸಬರಮತಿ ಶಾಲೆಯಲ್ಲಿ ಸುಗಟೂರು, ಮದನಹಳ್ಳಿ ಕ್ಲಸ್ಟರ್ ಶಾಲೆಗಳ ಅಡುಗೆ ಸಿಬ್ಬಂದಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ತಾಲ್ಲೂಕು ಬಿಸಿಯೂಟ ಸಹಾಯಕ ನಿರ್ದೇಶಕ ಸುಬ್ರಮಣಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande