ಈ ದೇಶದ ನಿಜವಾದ ಶ್ರೀಮಂತರು ರೈತರು : ಶಾಸಕ ಕೊತ್ತೂರು ಮಂಜುನಾಥ್
ಈ ದೇಶದ ನಿಜವಾದ ಶ್ರೀಮಂತರು ರೈತರು ; ಶಾಸಕ ಕೊತ್ತೂರು ಮಂಜುನಾಥ್
ಕೋಲಾರದಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಲಾಗಿದ್ದ ಸಿರಿಧಾನ್ಯ ಮೇಳವನ್ನು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಉದ್ಘಾಟಿಸಿದರು.


ಕೋಲಾರ: ೦೯ ಜನವರಿ (ಹಿ.ಸ) :

ಆ್ಯಂಕರ್ : ನೋಟಕ್ಕೆ ರೈತರು ಬಡವರಾಗಿ ಕಾಣಿಸಬಹುದು ಅಥವಾ ಕಷ್ಟಜೀವಿಗಳಾಗಿರಬಹುದು, ಆದರೆ ಈ ದೇಶದ ನಿಜವಾದ ಶ್ರೀಮಂತರು ರೈತರೇ ನಾವು ಊಟಕ್ಕೆ ಕುಳಿತಾಗ ಎಲೆಯನ್ನು ಎಷ್ಟು ಗೌರವದಿಂದ ಕಾಣುತ್ತೇವೆಯೋ, ರೈತರನ್ನೂ ಅಷ್ಟೇ ಗೌರವದಿಂದ ಕಾಣಬೇಕು. ಊಟ ಮುಗಿದ ಮೇಲೆ ಎಲೆಯನ್ನು ಎಸೆಯುವಂತೆ ರೈತರನ್ನು ನಿರ್ಲಕ್ಷಿಸಬಾರದು. ನಾವು ಬಳಸುವ ಪ್ರತಿ ತುತ್ತಿನ ಅನ್ನದ ಹಿಂದೆ ರೈತನ ಬೆವರು ಇದೆ ಎಂದು ಮಾರ್ಮಿಕವಾಗಿ ಕೋಲಾರ ವಿಧಾನಸಭಾ ಸದಸ್ಯರಾದ ಡಾ. ಕೊತ್ತೂರು ಜಿ. ಮಂಜುನಾಥ್ ತಿಳಿಸಿದರು.

ಕೃಷಿ ಇಲಾಖೆ, ಕೃಷಿಕ ಸಮಾಜದ ಸಹಯೋಗದಲ್ಲಿ ಕೋಲಾರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ‘ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ’ವನ್ನು ಉದ್ಘಾಟಿಸಿ ಮಾತನಾಡಿದರು.

ಆತ್ಮಾ ಯೋಜನೆಯಡಿ ಜಿಲ್ಲಾ ಮಟ್ಟದ ವಸ್ತುಪ್ರದರ್ಶನ, ರೈತ-ವಿಜ್ಞಾನಿ ಸಂವಾದ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಈ ದೇಶದ ಬೇರುಗಳಿದ್ದಂತೆ. ಸಮಾಜದಲ್ಲಿ ಅವರ ಪಾತ್ರ ಅತ್ಯಂತ ದೊಡ್ಡದು ಎಂದರು.

ಮೇಳದಲ್ಲಿ ಭಾಗವಹಿಸಿದ್ದ ಹಿರಿಯ ರೈತ ಮಹಿಳೆಯರನ್ನು ನೋಡಿ ಹರ್ಷ ವ್ಯಕ್ತಪಡಿಸಿದ ಶಾಸಕರು, ಹಿಂದಿನ ಕಾಲದವರು ಸಿರಿಧಾನ್ಯ ಮತ್ತು ಉತ್ತಮ ಆಹಾರ ಸೇವನೆಯಿಂದಾಗಿ ೬೦-೭೦ ವರ್ಷ ವಯಸ್ಸಾದರೂ ಇಂದಿಗೂ ಸದೃಢವಾಗಿದ್ದಾರೆ ಎಂದು ಆರೋಗ್ಯದಲ್ಲಿ ಸಿರಿಧಾನ್ಯಗಳ ಪಾತ್ರವನ್ನು ಒತ್ತಿ ಹೇಳಿದರು.

ಬೆಂಗಳೂರಿನAತಹ ನಗರಗಳಲ್ಲಿ ಮಣ್ಣು ಕಾಣುವುದೇ ಅಪರೂಪವಾಗಿದೆ. ರೈತರು ಯಾವುದೇ ಕಾರಣಕ್ಕೂ ತಮ್ಮ ಜಮೀನುಗಳನ್ನು ಮಾರಿಕೊಳ್ಳಬೇಡಿ. ಕೃಷಿ ಭೂಮಿಯನ್ನು ಉಳಿಸಿಕೊಳ್ಳುವುದು ಮುಂದಿನ ಪೀಳಿಗೆಯ ದೃಷ್ಟಿಯಿಂದ ಅತ್ಯಗತ್ಯ ಎಂದು ಮನವಿ ಮಾಡಿದರು. ಕಠಿಣ ಸಂದರ್ಭಗಳಲ್ಲಿ ಹಣವಿದ್ದರೂ ಆಹಾರ ಸಿಗುವುದು ಕಷ್ಟ ಎಂಬುದನ್ನು ಕೊರೋನಾ ಸಮಯ ನಮಗೆ ಕಲಿಸಿದೆ. ಆದ್ದರಿಂದ ರೈತರು ಬೆಳೆಯುವುದನ್ನು ನಿಲ್ಲಿಸಿದರೆ ದೇಶ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸಿದರು.

ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ವೈ. ನಂಜೇಗೌಡ ಅವರು ಮಾತನಾಡಿ, ರಾಜಕೀಯ ಜೀವನದ ನಡುವೆಯೂ ತೋಟ ಮತ್ತು ಹೊಲಗಳಿಗೆ ತಾವು ಭೇಟಿ ನೀಡುವುದಾಗಿ ಹೇಳಿದ ಅವರು, ಈ ವರ್ಷ ತಮ್ಮ ಜಮೀನಿನಲ್ಲಿ ಸುಮಾರು ೩೦೦ ಮೂಟೆ ರಾಗಿ ಮತ್ತು ೧೫೦ ಮೂಟೆ ಭತ್ತ ಬೆಳೆದಿರುವುದಾಗಿ ಹೆಮ್ಮೆಯಿಂದ ಹಂಚಿಕೊAಡರು.

ಕೃಷಿ ಕ್ಷೇತ್ರದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಾ, ಹಿಂದೆ ಬಳಸುತ್ತಿದ್ದ ಮರದ ನೇಗಿಲು, ಕಬ್ಬಿಣದ ನೇಗಿಲು, ಮರದ ಬಂಡಿ ಹಾಗೂ ಕಪಿಲೆಗಳ ಮೂಲಕ ನೀರು ಹರಿಸುತ್ತಿದ್ದ ಕಾಲವನ್ನು ನೆನಪಿಸಿಕೊಂಡರು.

ಇAದಿನ ಪೀಳಿಗೆಗೆ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸುವುದು ಸರ್ಕಾರದ ಮತ್ತು ಕೃಷಿ ಇಲಾಖೆಯ ಮುಖ್ಯ ಉದ್ದೇಶವಾಗಿದೆ. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ, ಹೃದಯಾಘಾತ ಮತ್ತು ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದನ್ನು ತಡೆಗಟ್ಟಲು ಸಾವಯವ ಮತ್ತು ಸಿರಿಧಾನ್ಯಗಳ ಸೇವನೆ ರಾಮಬಾಣವಾಗಿದೆ.

ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕೇವಲ ಗೊಬ್ಬರ ಮತ್ತು ಔಷಧಿಗಳ ಬಗ್ಗೆ ಮಾಹಿತಿ ನೀಡುವುದಷ್ಟೇ ಅಲ್ಲದೆ, ಸಿರಿಧಾನ್ಯಗಳನ್ನು ಬೆಳೆಯುವ ವಿಧಾನ ಮತ್ತು ಅದರ ಇಳುವರಿ ಹೆಚ್ಚಿಸುವ ಬಗ್ಗೆ ರೈತರಿಗೆ ಹೆಚ್ಚಿನ ಮಾರ್ಗದರ್ಶನ ನೀಡಬೇಕು ಎಂದು ಕಿವಿಮಾತು ಹೇಳಿದರು.

ಕೃಷ್ಣಬೈರೇಗೌಡರು ಕೃಷಿ ಸಚಿವರಾಗಿದ್ದ ಕಾಲದಲ್ಲಿ ಜಾರಿಗೆ ತಂದ 'ಸಿರಿಧಾನ್ಯ ಮೇಳ' ಮತ್ತು 'ಕೃಷಿ ಹೊಂಡ'ದAತಹ ಯೋಜನೆಗಳು ಇಂದಿಗೂ ರೈತರಿಗೆ ವರದಾನವಾಗಿವೆ ಎಂದು ಅವರು ಸ್ಮರಿಸಿದರು. ರೈತರ ಹಿತದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಅವರು ಆಶಿಸಿದರು.

ವಿಧಾನ ಪರಿಷತ್ ಸದಸ್ಯರಾದ ಎಂ. ಎಲ್. ಅನಿಲ್ ಕುಮಾರ್ ಅವರು ಮಾತನಾಡಿ ಕೋಲಾರ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯ ವಿಸ್ತರಣೆಗಾಗಿ ಈಗಾಗಲೇ ಕೋನಪುರ ಮತ್ತು ಕಲ್ಲಂಡೂರು ಗ್ರಾಮಗಳ ವ್ಯಾಪ್ತಿಯಲ್ಲಿ ಸರ್ವೇ ನಂಬರ್ ೧೦ ಮತ್ತು ೧೧ ರಲ್ಲಿ ಸುಮಾರು ೮೦ ರಿಂದ ೧೦೦ ಎಕರೆ ಜಮೀನನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಜಾಗದಲ್ಲಿ ರೈತರಿಗೆ ಪೂರಕವಾದ ಶೈತ್ಯಾಗಾರ ಮತ್ತು ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ ಬರಲಿದೆ ಎಂದರು.

ಸಿರಿಧಾನ್ಯಗಳ ಮಹತ್ವದ ಬಗ್ಗೆ ಮಾತನಾಡಿದ ಅನಿಲ್ ಕುಮಾರ್ ಅವರು, ಹಿಂದೆ ಸಿರಿಧಾನ್ಯಗಳು ಬಡವರ ಆಹಾರವಾಗಿದ್ದವು, ಆದರೆ ಇಂದು ಬದಲಾದ ಜೀವನಶೈಲಿಯಿಂದಾಗಿ ಸಕ್ಕರೆ ಕಾಯಿಲೆ ಮತ್ತು ಬಿಪಿ ಅಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಇಂದು ಸಿರಿಧಾನ್ಯಗಳು ಶ್ರೀಮಂತರ ಆಹಾರವಾಗಿ ಬದಲಾಗುತ್ತಿವೆ ಎಂದರು. ರೈತರು ಕೇವಲ ಬೆಳೆ ಬೆಳೆಯುವುದಷ್ಟೇ ಅಲ್ಲದೆ, ಅವುಗಳ ಮೌಲ್ಯವರ್ಧನೆ ಮತ್ತು ಬ್ರ‍್ಯಾಂಡಿAಗ್ ಮಾಡುವ ಕಲೆ ಕಲಿಯಬೇಕು ಎಂದು ಅವರು ಸಲಹೆ ನೀಡಿದರು.

ಕೃಷಿ ಇಲಾಖೆಯ ವತಿಯಿಂದ ನೀಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸಿ ರೈತರಿಗೆ ರಿಯಾಯಿತಿ ದರದಲ್ಲಿ ಚಾಪ್ ಕಟ್ಟರ್ ಮುಂತಾದ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತಿದೆ.

ರೇಷ್ಮೆ ಕೃಷಿಯಲ್ಲಿ ಚೀನಾ ದೇಶದ ಹಿನ್ನಡೆಯಿಂದಾಗಿ ಭಾರತದ ರೇಷ್ಮೆಗೆ ಉತ್ತಮ ಬೇಡಿಕೆ ಬಂದಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಮಣ್ಣಿನ ಆರೋಗ್ಯ ಕಾಪಾಡಲು ರಾಸಾಯನಿಕ ಮುಕ್ತ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಎಂ. ಆರ್. ರವಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ. ಕೆ. ರಮೇಶ್, ಜಂಟಿ ಕೃಷಿ ನಿರ್ದೇಶಕರು ಜಾವೇದಾ ನಸೀಮಾ ಖಾನಮ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಅಜಯ್ ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ವೈ. ಶಿವಕುಮಾರ್, ಉಪಕೃಷಿ ನಿರ್ದೇಶಕರಾದ ನಾಗರಾಜ್, ಮಂಜುಳಾ. ಮಾಜಿ ನಗರಸಭೆ ಅಧ್ಯಕ್ಷರು ಲಕ್ಷ್ಮೀದೇವಮ್ಮ ರಮೇಶ್, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ನಿರ್ದೇಶಕರು ಹಾಗೂ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ವಡಗೂರು ನಾಗರಾಜ್, ಹಾಗೂ ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದದ್ಯರಾದ ಸೀಸಂದ್ರ ಗೋಪಾಲಗೌಡ ಭಾಗವಹಿಸಿದ್ದರು.

ಚಿತ್ರ : ಕೋಲಾರದಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಲಾಗಿದ್ದ ಸಿರಿಧಾನ್ಯ ಮೇಳವನ್ನು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande