
ಕೋಲಾರ ೯ ಜನವರಿ (ಹಿ.ಸ) :
ಆ್ಯಂಕರ್ : ಮಕ್ಕಳಲ್ಲಿ ಕೇವಲ ಅಂಕ ಗಳಿಸುವ ಸ್ಪರ್ಧೆ ಇರಬಾರದು, ಬದಲಿಗೆ ಜ್ಞಾನದ ಹಸಿವು ಇರಬೇಕು. ಕಲಿಕಾ ಹಬ್ಬವು ಮಗುವಿನ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತದೆ ಎಂದು ತಾಲ್ಲೂಕು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಬಿ.ಎಂ. ರಾಧಮ್ಮ ಎಂದು ತಿಸಿದರು.
ಕೋಲಾರ ತಾಲ್ಲೂಕು ಶಿಳ್ಳಂಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಹರಟಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಉದ್ಘಾಟಿಸಿ ಮಾಡಿದರು.
ಇಲ್ಲಿ ವಿದ್ಯಾರ್ಥಿಗಳು ಭಯವಿಲ್ಲದೆ ಪ್ರಶ್ನಿಸುವುದನ್ನು ಮತ್ತು ಪರಿಸರದಿಂದ ಕಲಿಯುವುದನ್ನು ರೂಢಿಸಿಕೊಳ್ಳುತ್ತಾರೆ. ಪ್ರತಿ ಮಗುವೂ ಒಬ್ಬ ವಿಜ್ಞಾನಿ ಅಥವಾ ಕಲಾವಿದನಾಗಿ ಹೊರಹೊಮ್ಮಲು ಇಂತಹ ವೇದಿಕೆಗಳು ಅಡಿಪಾಯವಾಗಲಿ ಎಂದರು.
ಶಿಕ್ಷಣ ಸಂಯೋಜಕ ಸಿ.ವಿ. ನಾಗರಾಜ್ ಮಾತನಾಡಿಕಲಿಕೆಯು ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪ್ರಕ್ರಿಯೆಯಲ್ಲ. ಹಾಡು, ಕುಣಿತ, ಚಿತ್ರಕಲೆ ಮತ್ತು ಮಣ್ಣಿನ ಮಾದರಿಗಳ ಮೂಲಕ ಮಗು ವಿಷಯವನ್ನು ಬೇಗನೆ ಅರ್ಥೈಸಿಕೊಳ್ಳುತ್ತದೆ. ಈ ಹಬ್ಬವು ಮಕ್ಕಳಲ್ಲಿ ಸಾಮೂಹಿಕ ನಾಯಕತ್ವ ಮತ್ತು ಸಹಬಾಳ್ವೆಯ ಗುಣಗಳನ್ನು ಬೆಳೆಸಲು ಉತ್ತಮ ಅವಕಾಶ ಕಲ್ಪಿಸಿದೆ. ಇದನ್ನು ಶಿಕ್ಷಕರು ಹಬ್ಬದಂತೆ ಸಂಭ್ರಮದಿAದ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿ ಸರ್ಕಾರಿ ಶಾಲೆಗಳತ್ತ ಪೋಷಕರನ್ನು ಆಕರ್ಷಿಸಲು ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕಲಿಕಾ ಹಬ್ಬಗಳು ಸೇತುವೆಯಾಗಿವೆ. ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು ತಂಡವಾಗಿ ಶ್ರಮಿಸಿದಾಗ ಮಾತ್ರ ಇಂತಹ ಚಟುವಟಿಕೆಗಳು ಅರ್ಥಪೂರ್ಣವಾಗುತ್ತವೆ ಎಂದರು
ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಹರಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್. ನಾಗರಾಜ್ ಮಾತನಾಡಿ ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕೆ ಸದಾ ಬೆಂಬಲವಿರುತ್ತದೆ. ಮಕ್ಕಳ ಪ್ರತಿಭೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಬಾರದು. ಹಳ್ಳಿಯ ಮಕ್ಕಳು ಇವತ್ತು ಪ್ರದರ್ಶಿಸುತ್ತಿರುವ ಕಲಿಕಾ ಮಾದರಿಗಳು ಮತ್ತು ಅವರ ಮಾತುಗಾರಿಕೆ ನೋಡಿದರೆ ಹೆಮ್ಮೆಯಾಗುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವ ಮೂಲಕ ಅವರ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಹರಟಿ ಕ್ಲಸ್ಟರ್ ಮಟ್ಟದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಮ್ಮಲ್ಲಿ ಹುದುಗಿರುವ ಅನೇಕ ಪ್ರತಿಭಾ ಅನ್ವೇಕ್ಷಣೆಗೆ ಸಂಬAಧಿಸಿದAತೆ ಚರ್ಚೆ, ಭಾಷಣ, ವಿವಿಧ ಪ್ರದರ್ಶನಗಳ ಜೊತೆಗೆ ಕಲಿಕಾ ಹಬ್ಬವನ್ನು ಮತ್ತಷ್ಟು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮುನಿರಾಜ್, ಶಾಲಾ ಮುಖ್ಯೋಪಾಧ್ಯಾಯ ಕೃಷ್ಣಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮಂಜುನಾಥ್, ವಿವಿಧ ಶಾಲೆಗಳ ಶಿಕ್ಷಕರು ಮತ್ತಿತ್ತರರು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ಶಿಳ್ಳಂಗೆರೆಯಲ್ಲಿ ನಡೆದ ಕಲಿಕಾ ಹಬ್ಬವನ್ನು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಬಿ.ಎಂ. ರಾಧಮ್ಮ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್