ಜಯಪ್ರಕಾಶ ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
ಜಯಪ್ರಕಾಶ ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
ಮುಳಬಾಗಿಲು ತಾಲ್ಲೂಕಿನ ಎಂ.ಅಗ್ರಹಾರ ಜಯ ಪ್ರಕಾಶ್ ನಾರಾಯಣ ಪ್ರೌಢ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಯುವ ಸಪ್ತಾಹ ಹಾಗೂ ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ನಡೆಯಿತು.


ಕೋಲಾರ, ೧೭ ಜನವರಿ (ಹಿ.ಸ) :

ಆ್ಯಂಕರ್ : ಸ್ವಾಮಿ ವಿವೇಕಾನಂದರ0ತೆ 'ಸೇವಾ ಭಾವ' ಮತ್ತು 'ಆತ್ಮವಿಶ್ವಾಸ'ವನ್ನು ನಿಮ್ಮ ಜೀವನದ ಮಾರ್ಗದರ್ಶನಗೊಳಿಸಿಕೊಳ್ಳಿ. ನೀವು ಪ್ರತಿದಿನ ಒಂದು ಚಿಕ್ಕ ಉತ್ತಮ ಕೆಲಸ ಮಾಡಿದರೆ, ನಿಮ್ಮ ಸುತ್ತಲೂ ದೊಡ್ಡ ಬದಲಾವಣೆ ಸಂಭವಿಸುತ್ತದೆ. ನಿಮ್ಮೆಲ್ಲರ ಭವಿಷ್ಯ ಉದ್ಭಾಸವಾಗಲಿ, ದೇಶಕ್ಕೆ, ಸಮಾಜಕ್ಕೆ ಮತ್ತು ಕುಟುಂಬಕ್ಕೆ ಸಂತೃಪ್ತಿಯನ್ನು ತರಲಿ ಎಂದು ಕಲಾವಿದ ಗುಟ್ಲೂರು ಸುನಿಲ್ ತಿಳಿಸಿದರು.

ಮುಳಬಾಗಿಲು ತಾಲೂಕಿನ ಜಯಪ್ರಕಾಶ ನಾರಾಯಣ ಪ್ರೌಢ ಶಾಲೆ ಎಂ.ಅಗ್ರಹಾರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರುನಾಡ ಜಾನಪದ ಕಲಾಸಂಘ ಗುಟ್ಲೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಯುವ ಸಪ್ತಾಹ ಹಾಗೂ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಯುವ ಜನತೆ ದುಶ್ಚಟಗಳಿಂದ ದೂರ ಇದ್ದು ಸಾಮಾಜಿಕ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಗಳನ್ನು ತೋರಿಸಿ ಸಮಾಜಕ್ಕೆ ಒಳ್ಳೆ ಹೆಸರನ್ನು ತರಬೇಕು. ಯುವಜನತೆ ಸಮಾಜದ ಪರಿವರ್ತಕರಾಗಬಹುದು. ಕ್ರೀಡೆ ನಮಗೆ ಶಿಸ್ತು ನೀಡುತ್ತದೆ, ಜತೆನಡೆ ಹಾಗೂ ದೈಹಿಕ-ಮಾನಸಿಕ ದೃಢತೆ ಹೆಚ್ಚಿಸುತ್ತದೆ. ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ಹೃದಯದ ಭಾವನಾಶಕ್ತಿ ಮತ್ತು ಭಾರತದ ಅಪಾರ ಆಯಾಮಗಳನ್ನು ಬೆಳಕಿಗೆ ತರುತ್ತವೆ. ಈ ಎರಡರನ್ನೂ ಸಮನ್ವಯಗೊಳಿಸಿದಾಗ ರೂಪಾಂತರಕಾರಿ ನಾಯಕತ್ವ ಹುಟ್ಟುತ್ತದೆ.

ನಿಮ್ಮ ದೈನಂದಿನ ನಡೆಗಳಲ್ಲಿ ನೈತಿಕತೆ, ಶಿಸ್ತು ಮತ್ತು ದೃಢ ನಿಶ್ಚಯವನ್ನು ನಿರ್ವಹಿಸಿ. ದುಶ್ಚಟಗಳಿಂದ ದೂರವಾಗಿ, ಸಕಾರಾತ್ಮಕ, ಸ್ತಬ್ಧ ಚಿಂತನೆ ಮತ್ತು ಪರಿಶ್ರಮದಿಂದ ಎದುರಿಸಿ. ನಿಮ್ಮೊಳಗಿನ ಪ್ರತಿಭೆಯನ್ನು ಹೆಮ್ಮೆಪಡಿಸಿ, ಸ್ನೇಹ, ಸಹಕಾರ ಮತ್ತು ಸಮಾಜ ಸೇವೆಯಿಂದ ಬಲವಾಗಿರಲಿ ಎಂದರು.

ಶಾಲಾ ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಹಾಗೂ ಸಾಧನೆಗಳು ಮತ್ತು ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಯುವ ಜನರ ಪಾತ್ರ ಎಂಬ ಪ್ರಬಂಧವನ್ನು ನೀಡಲಾಗಿತ್ತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ತೃತೀಯ ಹಾಗೂ ಸಮಾಧಾನಕರ ಬಹುಮಾನ ಮತ್ತು ಪ್ರಶಸ್ತಿ ಪತ್ರ ನಿಧಿ ಮಕ್ಕಳಿಗೆ ಗೌರವ ನೀಡಲಾಗಿತ್ತು ಹಾಗೂ ಅಧ್ಯಕ್ಷರು ಕರುನಾಡ ಜಾನಪದ ಕಲಾಸಂಘ ವತಿಯಿಂದ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಕೆ.ಬಿ ನಾರಾಯಣಸ್ವಾಮಿ, ಸಹ ಶಿಕ್ಷಕರಾದ ಸುಬ್ರಮಣಿ, ಜಿ.ಕೆ.ರಘುನಾಥರೆಡ್ಡಿ, ಎಚ್.ರತ್ನಮ್ಮ, ಎಚ್.ನಾಗವೇಣಿ, ನಾಗವೇಣಿ.ಬಿ.ಎಮ್, ಕೆ.ಬಿ.ರವಿಕುಮಾರ್, ಎನ್.ಎಂ.ವೆ0ಕಟರೆಡ್ಡಿ, ವಿ.ಸೋಮಶೇಖರ್, ಜಾನಪದ ಕಲಾವಿದ ಹೊಳಲಿ ಸುನಿಲ ಕುಮಾರ್.ಹೆಚ್.ಎಂ, ಪೊಂಬರಹಳ್ಳಿ ನವೀನ್ ಮುಂತಾದವರು ಭಾಗವಹಿಸಿದ್ದರು.

ಚಿತ್ರ : ಮುಳಬಾಗಿಲು ತಾಲ್ಲೂಕಿನ ಎಂ.ಅಗ್ರಹಾರ ಜಯ ಪ್ರಕಾಶ್ ನಾರಾಯಣ ಪ್ರೌಢ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಯುವ ಸಪ್ತಾಹ ಹಾಗೂ ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande