
ಕೋಲಾರ, ೧೭ ಜನವರಿ (ಹಿ.ಸ) :
ಆ್ಯಂಕರ್ : ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ಅವರನ್ನು ಕಲಿಕೆಯಲ್ಲಿ ಮುಖ್ಯ ವಾಹನಿಗೆ ತರವಲ್ಲಿ ಈ ಕಲಿಕಾ ಹಬ್ಬದ ಕಾರ್ಯಕ್ರಮಗಳು ಅತ್ಯಂತ ಪ್ರಮುಖ ಪಾತ್ರ ವಹಿಸಲಿವೆ ಎಂದು ಕಮಲ ಮಹಡಿ ಸಿ.ಆರ್.ಪಿ ತಂಬಳ್ಳಿ ಟಿ.ಎಂ ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಲ್ಪೇಟೆಯಲ್ಲಿ ನಡೆದ ಕಮಲ ಮಹಡಿ ಕ್ಲಸ್ಟರ್ ಹಂತದ ಎಫ್.ಎಲ್.ಎನ್ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾವಂತ ಮಕ್ಕಳಿಗೆ ಸಾಕಷ್ಟ ಅವಕಾಶಗಳಿದ್ದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ವಿಶೇಷವಾಗಿ ಶಾಲಾ ಶಿಕ್ಷಣ ಇಲಾಖೆ ಈ ಕಾರ್ಯಕ್ರಮವನ್ನು ರೂಪಿಸಿದ್ದು ಇದರ ಸದ್ಬಳಕೆಯನ್ನು ಮಾಡಿಕೊಂಡು ಎಲ್ಲಾ ಮಕ್ಕಳಲ್ಲಿ ಗುಣಾತ್ಮಕ ಕಲಿಕೆಯನ್ನುಂಟು ಮಾಡುವಂತೆ ಶಿಕ್ಷಕರಿಗೆ ಕರೆ ನೀಡಿದರು. ಸರ್ಕಾರಿ ಶಾಲೆಗೆ ದಾಖಲಾದ ಪ್ರತಿ ಮಗುವಿಗೂ ಸ್ಪಷ್ಟ ಓದು, ಶುದ್ಧ ಬರಹ ,ಸರಳ ಗಣಿತ ಇವುಗಳ ಅಗತ್ಯತೆಯನ್ನು ಪ್ರತಿಪಾದಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಕೇವಲ ನೆನಪು ಮಾತ್ರ ಎಂದು ಶಿಕ್ಷಕರಿಗೆ ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಕೀಲುಕೋಟೆಯ ಶಾಲೆಯ ವಿಶ್ವನಾಥ್, ಕಮಲಾ ಮಹಡಿ ಶಾಲೆಯ ರಾಧಮ್ಮ, ವೆಂಕಟಮ್ಮ, ಕಠಾರಿ ಪಾಳ್ಯ ಶಾಲೆಯ ಶೋಭಾವತಿ,ನಾಗರತ್ನ ದೇವಾಂಗಪೇಟೆ ಶಾಲೆಯ ಪ್ರಭಾವತಿ, ಭೋವಿ ಕಾಲೋನಿ ಶಾಲೆಯ ಶಿಲ್ಪ, ಲಲಿತ, ಪಿಪಿಎಸ್ ಡಯಟ್ ಶಾಲೆಯ ಸುಜಾತ, ಪೂರ್ಣಿಮಾ ರಾಣಿ ಹಾಗು ಹಳೆ ಮಾಧ್ಯಮಿಕ ಶಾಲೆಯ ಶಾಲೆಯ ಯಶೋಧ, ಗಲ್‌ಪೇಟೆ ಶಾಲೆಯ ಮುಖ್ಯ ಶಿಕ್ಷಕಿ ಜಯಮ್ಮ, ಸಹ ಶಿಕ್ಷಕರಾದ ಜಯಲಕ್ಷ್ಮಿ, ಸೌಭಾಗ್ಯ ನಾಗವೇಣಿ, ಗಂಗಮ್ಮನ ಪಾಳ್ಯ ಶಾಲೆಯ ರಾಧಮ್ಮ, ಸುಜಾತ, ಎಲ್ ಮುನಿಯಪ್ಪ ಮತ್ತು ಅನೇಕ ಪೋಷಕರು ಮತ್ತು ಕ್ಲಸ್ಟರ್ನ ಎಲ್ಲಾ ಒಂದರಿ0ದ ಐದನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮಧಲ್ಲಿ ಮಕ್ಕಳಿಗೆ ಏಳು ವಿಶೇಷ ಚಟುವಟಿಕೆಗಳಲ್ಲಿ ಸ್ಪರ್ಧೆಗಳನ್ನು ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.
ಚಿತ್ರ : ಕೋಲಾರದ ಕಮಲ ಮಹಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲಿಕಾ ಹಬ್ಬದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್