
ಕೋಲಾರ, ೧೬ ಜನವರಿ (ಹಿ.ಸ.) :
ಆ್ಯಂಕರ್ : ತಾಲೂಕಿನ ನಾಗಲಾಪುರ ಬೆಟ್ಟದಲ್ಲಿರುವ ಶ್ರೀ ಕ್ಷೇತ್ರ ವೀರಭದ್ರ ಸ್ವಾಮಿ ದೇವಾಲಯದ ಭಕ್ತಾದಿಗಳ ಅನುಕೂಲಕ್ಕಾಗಿ ಸುಮಾರು ೫೦ ಲಕ್ಷ ವೆಚ್ಚದಲ್ಲಿ ಸಮುದಾಯ ಭವನ, ದಾಸೋಹ ಭವನ, ಶೌಚಾಲಯ, ಸ್ನಾನದ ಕೊಠಡಿ, ದ್ವಾರಬಾಗಿಲು ನಿರ್ಮಾಣಕ್ಕೆ ಅಧ್ಯತೆ ನೀಡಲಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಾಗಲಾಪುರ ಗ್ರಾಮದ ಜಾತ್ರಾ ವಿಶೇಷವಾಗಿ ಶುಕ್ರವಾರ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೮೦ ಲಕ್ಷ ರೂಗಳ ವೆಚ್ಚದ ಸಿಸಿ ರಸ್ತೆಯನ್ನು ಉದ್ಘಾಟಿಸಿದ ನಂತರ ದೇವಾಲಯದಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿ ವರ್ಷ ಸಾವಿರಾರು ಜನ ಜಾತ್ರೆಗೆ ಸೇರುವ ಜಾಗ ಅಭಿವೃದ್ಧಿಯಾಗಬೇಕು ಎಂದು ಕಳೆದ ವರ್ಷ ಗಮನಕ್ಕೆ ತಂದರು. ಅದರಂತೆ ಇವತ್ತು ಉದ್ಘಾಟನೆ ಸಹ ಮಾಡಲಾಗಿದೆ ಸಾಧ್ಯವಾದಷ್ಟು ನಾವು ಒಳ್ಳೆಯದು ಮಾಡಬೇಕು ಕೆಟ್ಟದ್ದು ಕೂಡ ಬಯಸಬಾರದು ಅದನ್ನು ದೇವರು ಕೂಡ ಒಪ್ಪುವುದಿಲ್ಲ ದೇವಸ್ಥಾನದ ಕೆಲಸಕ್ಕೆ ನಾಲ್ಕು ಜನ ಕೈಜೋಡಿಸುವ ಕೆಲಸವನ್ನು ಮಾಡಿದ್ದಾರೆ ಅದಕ್ಕೆ ಇಷ್ಟು ವೇಗದಲ್ಲಿ ಕೆಲಸಗಳು ನಡೆಯತ್ತಿವೆ ಮುಂದೆ ಇದೇ ರೀತಿ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಈ ಜಾಗದಲ್ಲಿ ಸುಮಾರು ೧೫ ಗ್ರಾಮಗಳ ಗ್ರಾಮದೇವತೆಗಳ ಒಂದು ಕಡೆ ಸೇರುತ್ತವೆ ಇವತ್ತು ಇಂತಹ ಸಂಪ್ರದಾಯಗಳು ಕಡಿಮೆಯಾಗುತ್ತಿವೆ ಹಳ್ಳಿಗಳಲ್ಲಿ ನಾಟಕಗಳು, ಭಜನೆ, ಹಳೆಯ ಸಂಪ್ರದಾಯಗಳು ಮರೆಯಾಗುತ್ತಿವೆ ಹಿಂದೆ ೧೨೧ ಸಂಸ್ಕೃತಿಯ ಕಲಾವಿದರು ಇದ್ದರು ಇವತ್ತು ಕೇವಲ ೧೬ ಮಾತ್ರ ಉಳಿದಿದ್ದು ಉಳಿದವು ಎಲ್ಲವೂ ಸತ್ತು ಹೋಗಿದೆ ಹಳೆ ಪದ್ದತಿಗಳು ಉಳಿಯಬೇಕು ಮತ್ತು ಅವುಗಳನ್ನು ಪೋತ್ಸಾಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ನೂರಾರು ವರ್ಷಗಳ ಇತಿಹಾಸವಿರುವ ಈ ದೇವಾಲಯಕ್ಕೆ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಮಾಡಲಾಗಿದೆ ಸೂಲೂರು ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು ೭ ಕೋಟಿ ವೆಚ್ಚದಲ್ಲಿ ಕಾಮಗಾರಿಗಳಿಗೆ ಚಾಲನೆ ಮಾಡಲಾಗಿದೆ ಹಿಂದೆ ದಿವಂಗತ ಸಿ ಬೈರೇಗೌಡರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುತ್ತಿದ್ದು ಅದೇ ಕೊನೆ ಇವತ್ತು ಕೊತ್ತೂರು ಮಂಜುನಾಥ್ ನೇತೃತ್ವದಲ್ಲಿ ಸಂಪರ್ಕ ರಸ್ತೆಗಳು ಸೇರಿದಂತೆ ಎಲ್ಲಾ ರಸ್ತೆಗಳಿಗೂ ಡಾಂಬರೀಕರಣ ಮಾಡಲಾಗುತ್ತದೆ ವರ್ಷದೊಳಗೆ ಎಲ್ಲಾ ರಸ್ತೆಗಳು ಪುರ್ಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ನಾಗಲಾಪುರದ ವೀರಧರ್ಮ ಸಿಂಹಾಸನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ತೇಜೇಶಲಿಂಗ ಶಿವಚಾರ್ಯ ಮಹಾಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಸೂಲೂರು ಗ್ರಾಪಂ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಪಿಎಲ್ಡಿ ಬ್ಲಾಕ್ ಅಧ್ಯಕ್ಷ ಶಿವಕುಮಾರ್, ದೇವಾಲಯ ಟ್ರಸ್ಟ್ ಅಧ್ಯಕ್ಷ ಶಿವಾನಂದಪ್ಪ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಕಾರ್ಯದರ್ಶಿ ವೀರೇಂದ್ರ ಪಾಟೀಲ್, ಗ್ರಾಪಂ ಸದಸ್ಯರಾದ ಅಶೋಕ್, ವೆಂಕಟೇಶ್, ಸುಜಾತಮ್ಮ, ರಾಮಕ್ಕ, ಕೃಷ್ಣಮೂರ್ತಿ, ಆದಿಮೂರ್ತಿ, ಸಿಕಿಂದರ್, ಗುತ್ತಿಗೆದಾರ ಲೋಕೇಶ್, ರಮೇಶ್, ಮುಖಂಡರಾದ ಕುಮಾರ್, ಚೌಡಪ್ಪ, ರಾಜಶೇಖರ್, ಈರಣ್ಣ, ಅಂಜಿನಪ್ಪ, ರಾಮಚಂದ್ರ ನದೀಂ, ನಾರಾಯಣಸ್ವಾಮಿ ಮುಂತಾದವರು ಇದ್ದರು.
ಚಿತ್ರ ; ಕೋಲಾರ ತಾಲ್ಲೂಕಿನ ನಾಗಲಾಪುರ ಗ್ರಾಮದ ಜಾತ್ರಾ ವಿಶೇಷವಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೮೦ ಲಕ್ಷ ರೂಗಳ ವೆಚ್ಚದ ಸಿಸಿ ರಸ್ತೆಯನ್ನು ಶಾಸಕ ಕೊತ್ತೂರು ಮಂಜುನಾಥ್ ಉದ್ಘಾಟಿಸಿದರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್