ಮಾಧ್ಯಮಗಳು ಬದ್ದತೆಯಿಂದ ಕೆಲಸ ನಿರ್ವಹಿಸಲು ಸಲಹೆ
ಮಾದ್ಯಮಗಳು ಬದ್ದತೆಯಿಂದ ಕೆಲಸ ನಿರ್ವಹಿಸಲು ಸಲಹೆ
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸಂಘದ ವತಿಯಿಂದ ಆಯೋಜಿಸಿದ್ದ ಪ್ರಸಕ್ತ ಸಾಲಿನ ಪತ್ರಿಕೋದ್ಯಮದ ಸವಾಲುಗಳು ಅದಕ್ಕೆ ಪತ್ರಕರ್ತರ ಮುಂದಿರುವ ಆಯ್ಕೆಗಳ ವಿಷಯದ ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಯಲು ಉಪಕುಲಪತಿ ಬಿ.ಕೆ.ರವಿ ಮಾತನಾಡಿದರು.


ಕೋಲಾರ, ೧೬ ಜನವರಿ (ಹಿ.ಸ.) :

ಆ್ಯಂಕರ್ : ಮಾಧ್ಯಮಗಳು ವೃತ್ತಿಯಲ್ಲಿ ಬದ್ದತೆ ಹೊಣೆಗಾರಿಕೆಯಿಂದ ಕೆಲಸ ನಿರ್ವಾಹಿಸುವ ಮೂಲಕ ಸಮಾಜವನ್ನು ಬಲಿಷ್ಟವಾಗಿ ಹಾಗೂ ಆರೋಗ್ಯಕರವಾಗಿ ರೂಪಿಸಲು ಸಾಧ್ಯ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಯಲು ಉಪಕುಲಪತಿ ಬಿ.ಕೆ.ರವಿ ಅಭಿಪ್ರಾಯ ಪಟ್ಟರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸಂಘದ ವತಿಯಿಂದ ಆಯೋಜಿಸಿದ್ದ ಪ್ರಸಕ್ತ ಸಾಲಿನ ಪತ್ರಿಕೋದ್ಯಮದ ಸವಾಲುಗಳು ಅದಕ್ಕೆ ಪತ್ರಕರ್ತರ ಮುಂದಿರುವ ಆಯ್ಕೆಗಳ ವಿಷಯದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಾಧ್ಯಮಗಳು ಮನಸ್ಸು ಮಾಡಿದರೆ ಬದಲಾವಣೆ ತರಲು ಸಾಧ್ಯ ಎಂಬುವುದಕ್ಕೆ ಪಲ್ಸ್ ಪೋಲಿಯೋ ಹಾಗೂ ಕುಷ್ಟ ರೋಗ ನಿಯಂತ್ರಣದ ಜಾಗೃತಿಯನ್ನು ಸಮಾಜದಲ್ಲಿ ಪ್ರಚಾರ ಪಡಿಸುವ ಮೂಲಕ ಯಶಸ್ವಿಗೊಳಿಸಿರು. ವುದನ್ನು ಉದಾಹರಿಸಿದ ಅವರು ಆರೋ ಗ್ಯಕಾರಿ ಮಾಧ್ಯಮಗಳಿಂದ ಆರೋಗ್ಯಕಾರಿ ಸಮಾಜ ನಿರ್ಮಾಣ ಸಾಧ್ಯ ಹಾಗಾಗಿ ಆರೋಗ್ಯಕಾರಿ ಸಮಾಜ ನಿರ್ಮಾಣಕ್ಕೆ ಮಾದ್ಯಮಗಳು ಕೈ ಜೋಡಿಸುವಂತಾಗ ಬೇಕೆಂದರು.

ಕಳೆದ ೧೯೮೦ ರಿಂದ ೨೦೨೫ರ ವರೆಗಿನ ಬಹಳಷ್ಟು ಭಾಷ ಮಾದ್ಯಮ ದಲ್ಲೂ ಬದಲಾವಣೆಗಳನ್ನು ಕಂಡಿದೆ. ಕನ್ನಡ ಮಾಧ್ಯಮವು ಭಾರತೀಯ ಮಾಧ್ಯ ಮಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಭಾಷಾಂತರ ತಂತ್ರಜ್ಞಾನ ಜಾಗತೀಕರಣದ ಅಲೆಯಲ್ಲಿ ಮಾಧ್ಯಮಗಳು ವಾಣಿಜ್ಯಕರೀಣ ಭರಾಟೆಯಲ್ಲಿ ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ಸಾಕಷ್ಟು ಬದಲಾವಣೆಯಾಗಿ ಅಧುನೀಕರಣಗೊಂಡಿದೆ. ತಂತ್ರಜ್ಞಾನ ಜಾಗತೀಕರಣದಲ್ಲಿ ಭಾರತವು ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಮನರಂಜನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ದೇಶಗಳು ಭಾರತೀಯ ಮಾಧ್ಯಮಗಳಲ್ಲಿ ಹೂಡಿಕೆ ಮಾಡಲು ಸರದಿ ಸಾಲಿನಲ್ಲಿ ನಿಂತಿದೆ ಎಂದು ಉದಾಹರಿಸಿದರು.

ಇಂದು ಅಧುನಿಕ ತಂತ್ರಜ್ಞಾನವು ಬಹಳಷ್ಟು ಮುಂದುವರೆದಿದ್ದರೂ ಸಹ ಮಾನವನ ಮೆದುಳಿಗೆ ಸಮಾನವಾ ಗದುಲದು ಎ.ಐ. ಹಾಗೂ ಬುದ್ದಿ ಮತ್ತೆ ಮಾನವನಿಗೆ ಸ್ವರ್ಧೆ ಇದ್ದರೂ ಸಮಾನಾಗಿ ಬರುವುದಿಲ್ಲ, ಎ,ಐ. ವೇಗವಾಗಿ ಕೆಲಸ ಮಾಡಿ ಸಮಯವನ್ನು ಉಳಿಸ ಬಹುದಾಗಿದೆ. ಸಮಾಜದ ಮೇಲೆ ಪರಿಣಾಮ ಬೀರುವಂತೆ ಪ್ರಚೋದಕಾರಿ ಪ್ರಕರಣಗಳನ್ನು ವೈಭವೀಕರಿಸುವುದು ಅಲ್ಲದೆ. ಅಧುನೀಕ ತಂತ್ರಜ್ಞಾನಗಳನ್ನು ಅರ್ಥಪೂರ್ಣವಾಗಿಸಿಕೊಂಡು ಸದ್ಬಳಿಸಿಕೊಂಡಾಗ ಮಾತ್ರ ಸಾರ್ಥಕತೆ ಉಂಟಾಗಲಿದೆ ಇದು ನಮ್ಮನ್ನು ಅವಲಂಭಿಸಿದೆ ಹಾಗಾಗಿ ಮಾದ್ಯಮ ಲೋಕಕ್ಕೆ ಇದು ಪೂರಕವಾಗಲಿದೆ ಹೊರತಾಗಿ ಮಾರಕವಾಗದು ಎಂದರು.

ಯಾರು ಸೃಜನಶೀಲತೆಯ ಪರಿಶ್ರಮ, ಶಿಸ್ತು, ಬದ್ದತೆ ಇರುವವರನ್ನು ಮಾತ್ರ ಮಾದ್ಯಮ ಸ್ವೀಕರಿಸಲಿದೆ. ಯಾವೂದೇ ವರದಿಗಳು ವಸ್ತುನಿಷ್ಟತೆಯಿಂದ, ಸತ್ಯಕ್ಕೆ ಸಮೀಪವಾಗಿರಬೇಕು ಟಿ.ವಿ.ಗಳು ಬಂದ ನಂತರವೂ ಮುದ್ರಣ ಮಾದ್ಯಮಗಳು ಬಲಷ್ಟವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪತ್ರಿಕೆಗಳು ಬಿಡುಗಡೆಯಾಗುತ್ತಿರುವುದನ್ನು ಕಾಣಬಹುದಾಗಿದೆ. ಮುದ್ರಣ ಮಾಧ್ಯಮಕ್ಕೆ ವಿದ್ಯುತ್ಮಾನ ಮಾಧ್ಯಮಗಳು, ಯೂ ಟ್ಯೂಬ್, ಸಾಮಾಜಿಕ ಜಾಲತಾಣಗಳು, ಸೇರಿದಂತೆ ಚಲನ ಚಿತ್ರಗಳು ವಾಣಿಜ್ಯೋದ್ಯಮಗಳು ಯಾವೂದೇ ಸ್ವರ್ಧೆಗಳು ಇರವುದು ಸಹಜ ಯಾವೂದೇ ತಂತ್ರಜ್ಞಾನ ಸಮಾಜದಲ್ಲಿ ಪರಿಚಿತವಾದ ಸಂದರ್ಭದಲ್ಲಿ ಬದಲಾವಣೆಗಳು ಸಹಜ ಪ್ರಕ್ರಿಯೆ ಆಗಿದೆ ಎಂದು ಹೇಳಿದರು.

ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಕೊಡುಗೆ ಅಪಾರವಾಗಿದೆ. ಸಾರ್ವಜನಿಕರಿಗೆ ವಸ್ತುನಿಷ್ಠ ವರದಿಗಳನ್ನು ತಲುಪಿಸುವುದು ಪತ್ರಿಹಂತದಲ್ಲೂ ಪವಿತ್ರ ಕಾರ್ಯಕ್ರಮವಾಗಿದೆ. ಅದರಲ್ಲೂ ಕೋಲಾರ ಜಿಲ್ಲೆಯ ಕೊಡುಗೆಗಳು ಪ್ರತಿ ಕ್ಷೇತ್ರದಲ್ಲೂ ಅಗ್ರಸ್ಥಾನದಲ್ಲಿರುವುದು ಗಮನಾರ್ಹ ಸಂಗತಿಯಾಗಿದೆ ಎಂದು ಹಲವಾರು ಉದಾಹರಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.

ಕೋವಿಡ್ ಬಂದ ನಂತರ ಮಾಧ್ಯಮ ಕ್ಷೇತ್ರದಲ್ಲಿ ಬಹಳಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ ಅವರು ಪುನ: ಮಾಧ್ಯಮದ ಮುಖ್ಯ ವಾಹಿನಿಗೆ ಬರು ವಂತಾಗ ಬೇಕು. ಕೋವಿಡ್ ಸಂದರ್ಭಧಲ್ಲಿ ಸಾರ್ವಜನಿಕರ ಬದುಕಿಗೆ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದು ಮಾದ್ಯಮಗಳು ಎಂಬು ವುದನ್ನು ಮರೆಯುವಂತಿಲ್ಲ. ಆರೋಗ್ಯ ಕ್ಷೇತ್ರ, ಸ್ವಚ್ಚತಾ ಕ್ಷೇತ್ರಗಳಷ್ಟೆ ಶ್ರಮವಹಿಸಿ ಮಾದ್ಯಮಗಳು ಕೆಲಸ ನಿರ್ವ ಹಿಸಿದವು ಈ ಸಂದರ್ಭದಲ್ಲಿ ಬಹಳಷ್ಟು ಮಂದಿ ಸಾವನ್ನಪ್ಪಿರುವುದು ಅವರ ತ್ಯಾಗ ಬಲಿದಾನಕ್ಕೆ ನಿದರ್ಶನವಾಗಿದೆ ಎಂದು ವಿಷಾಧಿಸಿದರು.

ನಾನು ಸಹ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಾಪಕನಾಗಿ ಅವಿಭಜಿತ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸಿ, ಮೈಸೂರು ವಿ.ವಿ.ಯಲ್ಲಿ ಕಾರ್ಯ ನಿರ್ವಹಿಸಿದ್ದು ಬೆಂಗಳೂರು ಉತ್ತರ ವಿವಿಯಲ್ಲಿ ೩ನೇ ಉಪಕುಲಪತಿಯಾಗಿ ನೇಮವಾಗಿದ್ದೇನೆ. ನಾನು ಮೂಲತ: ಚಿತ್ರದುರ್ಗದವನಾಗಿದ್ದರೂ ಸಹ ನನಗೆ ಕೋಲಾರದೊಂದಿಗೆ ಹೆಚ್ಚಿನ ಒಡನಾಟದ ಅವಿನಾಭಾಜ್ಯ ಸಂಬಂಧವಿದೆ. ಬೆಂಗ ಳೂರು ವಿವಿಯ ನನ್ನ ಅವಧಿಯಲ್ಲಿ ಅಧ್ಯ ಯನ ಮಾಡಿದ ಗ್ರಾಮೀಣ ಪ್ರದೇಶದವರು ರಾಜ್ಯದಿಂದ ರಾಷ್ಟ್ರಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದಾರೆ ಎಂದು ನೆನಪಿಸಿದರು.

ಕಳೆದ ೮೦ರ ದಶಕದಲ್ಲಿ ಮಾದ್ಯಮ ಕ್ಷೇತ್ರಕ್ಕೆ ತೀವ್ರ ಸಂಕಷ್ಟ ಕಾಲವಾಗಿತ್ತು ಮಾಹಿತಿಯನ್ನು ರವಾನಿಸುವಂತ ಸೌಲಭ್ಯಗಳು ಕೊರತೆಗಳಿದ್ದವು ಆಗಾ ಟೆಲಿಗ್ರಾಫಿಕ್ ೨೬ಅಕ್ಷರಗಳ ಇಂಗೀಷ್ ಮಾಧ್ಯಮದಲ್ಲಿ ರವಾನಿಸಬೇಕಾಗಿದ್ದು ಇದೊಂದು ಸವಾಲಾಗಿ ಪರಿಣಾಮಿಸಿತ್ತು. ಕನ್ನಡದಲ್ಲಿ ಮಾಹಿತಿಗಳನ್ನು ಕಳುಹಿಸಲು ಸಾಧ್ಯವಿರಲಿಲ್ಲ. ಅಂದು ತಂತ್ರಜ್ಞಾನದ ಕೊರತೆ ಬಹಳಷ್ಟು ಇತ್ತು. ಇಂಗ್ಲೀಷ್ನಿಂದ ಕನ್ನಡಕ್ಕೆ ಭಾಷಾಂತರ ಮಾಡುವುದು ಮಾದ್ಯಮದವರಿಗೆ ಸವಾಲು ಆಗಿತ್ತು ಎಂದು ತಮ್ಮ ಅನುಭವಗಳನ್ನು ಹಂಚಿ ಕೊಂಡರು.

ಪತ್ರಕರ್ತರಿಗೆ ಭಾಷೆ ಮೇಲೆ ಹಿಡಿತ ಇರಬೇಕು. ಏನೇ ದೃಶ್ಯ ಮಾಧ್ಯಮಗಳು ಇದ್ದರೂ ಮುದ್ರಣ ಮಾಧ್ಯಮಗಳ ವರದಿಯೇ ತಲಾತಲಾಂತರದಲ್ಲಿ ಉಳಿಯಲು ಸಾಧ್ಯವಾಗಿತ್ತು ೮೦ರ ದಶಕದ ನಂತರ ಕಂಪ್ಯೂಟರ್ ಪರಿಚಯವಾಯಿತು. ಆ ನಂತರ ಒಂದರ ಹಿಂದೆ ಒಂದು ಬಂದು ಇಂದು ಅಂಗೈನ ಮೂಬೈಲ್ನಲ್ಲಿ ಎಲ್ಲಾ ಕ್ಷೇತ್ರಗಳ ಮಾಹಿತಿಗಳು, ಸಂರ್ಪಕವನ್ನು ಸಾಧಿಸ ಬಹುದಾಗಿದೆ ಎಂದು ತಿಳಿಸಿದರು.

ತಂತ್ರಜ್ಞಾನದ ಜೊತೆಗೆ ಮಾದ್ಯಮಗಳು ಬದಲಾಗದಿದ್ದರೆ ಭವಿಷ್ಯವಿಲ್ಲ. ಮಾದ್ಯಮ ಮತ್ತು ಶಿಕ್ಷಣ ಎರಡು ಕೈ ಜೋಡಿಸಿದಾಗ ಮಾತ್ರ ಏನಾದರೂ ಪ್ರಗತಿ ಕಾಣಲು ಸಾಧ್ಯ. ಡಿಜಿಟಲ್ ಹಾಗೂ ಎ.೧ ಎರಡೂ ಅಧ್ಯಯನ ಮಾಡುವುದು ಅವಶ್ಯಕವಿದೆ ಈ ಬಗ್ಗೆ ಕಾರ್ಯಗಾರಗಳು ವಿಚಾರ ಸಂಕಿರಣಗಳು ಪತ್ರಕರ್ತರಿಗೆ ಅವಶ್ಯಕವಿದೆ. ಮಾಧ್ಯಮಗಳ ಸಹಕಾರದಿಂದ ಭವಿಷ್ಯದ ಪ್ರತಿಭೆಗಳನ್ನು ರೂಪಿಸಲು ಸಾಧ್ಯವಿದೆ ಎಂದರು.

ಪ್ರಶ್ನೆಯೊಂದಕ್ಕೆ ಆವೇಶ ಮತ್ತು ಸಹನೆ ಮಾದ್ಯಮಗಳ ನಡುವೆ ಆರೋಗ್ಯಕರ ಮಾದ್ಯಮಗಳಿಗೆ ರಕ್ಷಣೆ ಅಗತ್ಯವಿದೆ. ದೇಶದ ಏಕತೆ, ಸಮಗ್ರತೆಗೆ ಧಕ್ಕೆಯುಂಟು ಮಾಡುವ ಮಾರಕವಾದ ಮಾಹಿತಿಗಳನ್ನು ಅಂತರಿಕ ವಿಷಯಗಳನ್ನು ಬಹಿರಂಗ ಪಡೆಸುವು ದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ, ಇವತ್ತಿನ ಮಾದ್ಯಮ ಕ್ಷೇತ್ರಕ್ಕೆ ಕಾರ್ಪೊರೇಟ್ ಕಂಪನಿಗಳು ಲಗ್ಗೆ ಇಟ್ಟಿರುವುದರಿಂದ ನೈಜ ಪತ್ರಕರ್ತರಿಗೆ ನೆಲೆ ಇಲ್ಲದಿರುವುದರಿಂದ ಜೀವನಕ್ಕೆ ಭದ್ರತೆ ಇಲ್ಲವಾಗಿದೆ. ಇದರಿಂದ ಉತ್ಸಾಹಿ ಪತ್ರಕರ್ತರು ಮಾಧ್ಯಮ ಕ್ಷೇತ್ರಕ್ಕೆ ಬರುವುದಕ್ಕೆ ಹಿಂಜರಿಯುತ್ತಿದ್ದಾರೆ ಎಂದರು.

ಪತ್ರಕರ್ತರು ಸವಾಲುಗಳ ನಡುವೆ ವೃತ್ತಿಯನ್ನ ತೊಡಗಿಸಿಕೊಂಡು ಹೋಗುತ್ತಿದ್ದಾರೆ. ಅಲ್ಲದೆ ಇವತ್ತಿನ ದಿನಗಳಲ್ಲಿ ಪತ್ರಕರ್ತರಿಗೆ ಬರವಣಿಗೆಯ ಮೇಲೆ ಹಿಡಿತವಿಲ್ಲದೆ ದಾರಿ ತಪ್ಪುತ್ತಿದ್ದಾರೆ. ಬೆಂಗಳೂರು ಉತ್ತರ ವಿ.ವಿ ಯಿಂದ ಪತ್ರಕರ್ತರಿಗೆ ಕಾರ್ಯಗಾರಗಳು ಅವಶ್ಯಕತೆ ಇದೆ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಎಸ್. ರವಿಕುಮಾರ್ ಸ್ವಾಗತಿಸಿದರು.

ವೇದಿಕೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ. ಸುರೇಶ್ಕುಮಾರ್, ಖಜಾಂಚಿ ಬಿ.ಎಲ್. ರಾಜೇಂದ್ರಸಿಂಹ ಉಪಸ್ಥಿತರಿದ್ದರು.

ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ವಿ.ಗೋಪಿನಾಥ್, ಓಂಕಾರಮೂರ್ತಿ, ಸುನೀಲ್ಕುಮಾರ್, ಶಮ್ಗರ್, ಸುದರ್ಶನ್ ಮುಂತಾದವರು ಸಂವಾದದಲ್ಲಿ ಭಾಗವಹಿಸಿದ್ದರು.

ಚಿತ್ರ : ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸಂಘದ ವತಿಯಿಂದ ಆಯೋಜಿಸಿದ್ದ ಪ್ರಸಕ್ತ ಸಾಲಿನ ಪತ್ರಿಕೋದ್ಯಮದ ಸವಾಲುಗಳು ಅದಕ್ಕೆ ಪತ್ರಕರ್ತರ ಮುಂದಿರುವ ಆಯ್ಕೆಗಳ ವಿಷಯದ ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಯಲು ಉಪಕುಲಪತಿ ಬಿ.ಕೆ.ರವಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande