ಎಲ್ಲರು ಒಂದೇ ಎಂಬ ಭಾವದ ಹೊಳೆ ಹರಿಸುವುದು ಸುತ್ತೂರು ಜಾತ್ರೆ : ಬೊಮ್ಮಾಯಿ
ಮೈಸೂರು, 16 ಜನವರಿ (ಹಿ.ಸ.) : ಆ್ಯಂಕರ್ : ಸುತ್ತೂರು ಮಠದ ಪರಮಪೂಜ್ಯರು ಬಹಳ ದೂರದೃಷ್ಟಿ ಉಳ್ಳವರು ಅವರು ಅಂತಾರಾಷ್ಟ್ರೀಯ ಕಂಪನಿ ಸಿಇಒ ರೀತಿ ಕೆಲಸ ಮಾಡಿ ಎಲ್ಲವೂ ಮಾಡಿ ಮಾಡದಂತೆ ಇರುತ್ತಾರೆ. ಅವರ ಚಿತ್ತ ಎಂದೂ ಬದಲಾಗಿದ್ದನ್ನು ನಾನು ನೋಡಿಲ್ಲ. ಸದಾ ಏಕ ಚಿತ್ತದಲ್ಲಿ ಎಲ್ಲರನ್ನು ಕಾಣುವುದು ಅದು ಒಂದ
BsB


ಮೈಸೂರು, 16 ಜನವರಿ (ಹಿ.ಸ.) :

ಆ್ಯಂಕರ್ : ಸುತ್ತೂರು ಮಠದ ಪರಮಪೂಜ್ಯರು ಬಹಳ ದೂರದೃಷ್ಟಿ ಉಳ್ಳವರು ಅವರು ಅಂತಾರಾಷ್ಟ್ರೀಯ ಕಂಪನಿ ಸಿಇಒ ರೀತಿ ಕೆಲಸ ಮಾಡಿ ಎಲ್ಲವೂ ಮಾಡಿ ಮಾಡದಂತೆ ಇರುತ್ತಾರೆ. ಅವರ ಚಿತ್ತ ಎಂದೂ ಬದಲಾಗಿದ್ದನ್ನು ನಾನು ನೋಡಿಲ್ಲ. ಸದಾ ಏಕ ಚಿತ್ತದಲ್ಲಿ ಎಲ್ಲರನ್ನು ಕಾಣುವುದು ಅದು ಒಂದು ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಅವರು ಇಂದು ಮೈಸೂರು ಜಿಲ್ಲೆಯ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಸುತ್ತೂರು ಜಾತ್ರೆ ಭಕ್ರಿಯ ಹೊಳೆ ಹರಿಸುವ ಜಾತ್ರೆ ಭಕ್ತಿಯ ಜೊತೆಗೆ ನಾವೆಲ್ಲರೂ ಒಂದೆನ್ನುವ ಭಾವದ ಹೊಳೆ ಹರಿಸುವುದು ಸುತ್ತೂರು ಜಾತ್ರೆ. ಕಪಿಲಾ ನದಿಯ ತೀರದಲ್ಲಿ ಭಜ್ತರು ಕೇವಲ ದೈಹಿಕವಲ್ಲ ಸುದಾತ್ಮವನ್ನು ಪಡೆದುಕೊಳ್ಳುವ ಅವಜಾಶ ಸುತ್ತೂರು ಜಾತ್ರೆ ಪರಮಪೂಜ್ಯ ರ ಬದುಕು ಜನ ಸಾಮನ್ಯರ ಜೊತೆಗೆ ಮಿಂದು ಹೋಗಿದೆ. ಈ ರಾಜ್ಯದ ಉದ್ದಗಲಕ್ಕೂ ಪರಮಪೂಜ್ಯರು ಸುತ್ತಾಡಿದ್ದಾರೆ ಎಲ್ಲ ಕಡೆ ಕರ್ನಾಟಕ ದ ಬೇರೆ ಕಡೆ ಇರುವ ಸಂಸ್ಕೃತಿ, ಜಾನಪದ ಕಲೆ, ಎಲ್ಲವನ್ನೂ ಅರಿತವರಾಗಿದ್ದಾರೆ. ಅಷ್ಡೆ ಅಲ್ಲ. ಪರಮಪೂಜ್ಯ ರ ಕಾರ್ಯವ್ಯಾಪ್ತಿ ಕೇವಲ ಮೈಸೂರು ಚಾಮರಾಜನಗರಕ್ಕೆ ಸೀಮೊತವಾಗಿಲ್ಲ. ಬೆಂಗಳೂರಿಗಷ್ಟೆ ಸೀಮಿತವಾಗಿಲ್ಲ ಉತ್ತರ ಕರ್ನಾಟಕದ ಧಾರವಾಡಕ್ಕೂ ಕೂಡ ಅವರ ಕಾರ್ಯವ್ಯಾಪ್ತಿ ಅವರ ಶಿಕ್ಷಣ ಸಂಸ್ಥೆಗಳು ಇವೆ. ಧಾರವಾಡದಲ್ಲಿ ಸುಮಾರು ಮೂರರಿಂದ ಐದು ಸಾವಿರ ಮಕ್ಕಳು ಶ್ರೀಮಠದ ಆಶ್ರಯದಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಅಂದರೆ ಪರಮಪೂಜ್ಯ ರಿಗೆ ಸಮಸ್ತ ದೃಷ್ಟಿ ಏನಿದೆ ಅನ್ನುವುದಕ್ಕೆ ಸಾಕ್ಷಿ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande