ನಾಳೆ ಹೆಸ್ಕಾಂ ಕುಂದು-ಕೊರತೆ ಸಭೆ
ವಿಜಯಪುರ, 16 ಜನವರಿ (ಹಿ.ಸ.) : ಆ್ಯಂಕರ್ : ವಿಜಯಪುರ ತಾಲೂಕಿನ ಹೆಸ್ಕಾಂನ ಗ್ರಾಮೀಣ ಉಪ ವಿಭಾಗ ಕಚೇರಿಯಲ್ಲಿ ಜ.17ರ ಮಧ್ಯಾಹ್ನ 3:30ಕ್ಕೆ ವಿದ್ಯುತ್ ವಿತರಣೆಗೆ ಸಂಬಂಧಿಸಿದಂತೆ ಗ್ರಾಹಕರ ಅಹವಾಲು, ಕುಂದು-ಕೊರತೆ ಸಭೆ ಆಯೋಜಿಸಲಾಗಿದೆ. ಸಭೆಗೆ ಗ್ರಾಹಕರು ಪಾಲ್ಗೊಂಡು ವಿದ್ಯುತ್‌ಗೆ ಸಂಬಂಧಿಸಿದ ತಮ್ಮ ಕ
ನಾಳೆ ಹೆಸ್ಕಾಂ ಕುಂದು-ಕೊರತೆ ಸಭೆ


ವಿಜಯಪುರ, 16 ಜನವರಿ (ಹಿ.ಸ.) :

ಆ್ಯಂಕರ್ : ವಿಜಯಪುರ ತಾಲೂಕಿನ ಹೆಸ್ಕಾಂನ ಗ್ರಾಮೀಣ ಉಪ ವಿಭಾಗ ಕಚೇರಿಯಲ್ಲಿ ಜ.17ರ ಮಧ್ಯಾಹ್ನ 3:30ಕ್ಕೆ ವಿದ್ಯುತ್ ವಿತರಣೆಗೆ ಸಂಬಂಧಿಸಿದಂತೆ ಗ್ರಾಹಕರ ಅಹವಾಲು, ಕುಂದು-ಕೊರತೆ ಸಭೆ ಆಯೋಜಿಸಲಾಗಿದೆ.

ಸಭೆಗೆ ಗ್ರಾಹಕರು ಪಾಲ್ಗೊಂಡು ವಿದ್ಯುತ್‌ಗೆ ಸಂಬಂಧಿಸಿದ ತಮ್ಮ ಕುಂದು-ಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ವಿಜಯಪುರ ತಾಲೂಕಿನ ಹೆಸ್ಕಾಂನ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande