ನಾಳೆ 15 ಗ್ರಾಮಗಳಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್
ವಿಜಯಪುರ, 16 ಜನವರಿ (ಹಿ.ಸ.) : ಆ್ಯಂಕರ್ : ಸಾಮಾಜಿಕ ಭದ್ರತೆ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲೆಯ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ನಾಳೆ ಬೆಳಗ್ಗೆ 11 ಗಂಟೆಗೆ ಜಿಲ್ಲೆಯ 15 ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ತಿಳಿಸಿದ್ದಾರೆ. ವಿಜಯಪು
ನಾಳೆ 15 ಗ್ರಾಮಗಳಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್


ವಿಜಯಪುರ, 16 ಜನವರಿ (ಹಿ.ಸ.) :

ಆ್ಯಂಕರ್ : ಸಾಮಾಜಿಕ ಭದ್ರತೆ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲೆಯ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ನಾಳೆ ಬೆಳಗ್ಗೆ 11 ಗಂಟೆಗೆ ಜಿಲ್ಲೆಯ 15 ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ತಿಳಿಸಿದ್ದಾರೆ.

ವಿಜಯಪುರ ಉಪ ವಿಭಾಗಾಧಿಕಾರಿಗಳು ಬಬಲೇಶ್ವರ ತಾಲೂಕಿನ ದೇವರಗೆಣ್ಣೂರ ಗ್ರಾಮದ ಗ್ರಾಮ ಪಂಚಾಯತ ಸಭಾ ಭವನದಲ್ಲಿ, ಇಂಡಿ ಉಪ ವಿಭಾಗಾಧಿಕಾರಿಗಳು ಇಂಡಿ ತಾಲೂಕಿನ ಬಳ್ಳೊಳ್ಳಿ ಹೋಬಳಿಯ ಅರ್ಜನಾಳ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ, ವಿಜಯಪುರ ಗ್ರೇಡ್-2 ತಹಶೀಲ್ದಾರ ಅವರು ಗುಣಕಿ ಹಾಗೂ ಬೊಮ್ಮನಹಳ್ಳಿ ಗ್ರಾಮಗಳ ಗುಣಕಿಯ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ, ತಿಕೋಟಾ ಗ್ರೇಡ್-2 ತಹಶೀಲ್ದಾರ ಅವರು ರತ್ನಾಪೂರ ಗ್ರಾಮದ ಶ್ರೀ ಚಿದಾನಂದ ಮಠದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.

ಬಬಲೇಶ್ವರ ಗ್ರೇಡ್-2 ತಹಶೀಲ್ದಾರ ಅವರು ಸಾರವಾಡ ಗ್ರಾಮದ ಗ್ರಾಮ ಚಾವಡಿ, ಬಸವನಬಾಗೇವಾಡಿ ಗ್ರೇಡ್-2 ತಹಶೀಲ್ದಾರ ಅವರು ಉಕ್ಕಲಿ ಗ್ರಾಮದ ಸಂತ ಸೇವಾಲಾಲ್ ಸಭಾ ಭವನದಲ್ಲಿ,ನಿಡಗುಂದಿ ತಹಶೀಲ್ದಾರ ಅವರು ಆಲಮಟ್ಟಿ ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ಕೊಲ್ದಾರ ತಹಶೀಲ್ದಾರ ಅವರು ಹಳ್ಳದ ಗೆಣ್ಣೂರ ಗ್ರಾಮದ ಸಮುದಾಯ ಭವನದಲ್ಲಿ, ಮುದ್ದೇಬಿಹಾಳ ಗ್ರೇಡ್-2 ತಹಶೀಲ್ದಾರ ಅವರು ಕೋಳೂರ ಗ್ರಾಮದ ಶ್ರೀ ಕೊಟ್ಟೂರ ಬಸವೇಶ್ವರ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.

ತಾಳಿಕೋಟೆ ಗ್ರೇಡ್-2 ತಹಶೀಲ್ದಾರ ಅವರು ಬಾವೂರ ಗ್ರಾಮದ ಶ್ರೀ ಮಾರುತಿ ದೇವಸ್ಥಾನದಲ್ಲಿ, ಇಂಡಿ ಗ್ರೇಡ್-2 ತಹಶೀಲ್ದಾರ ಅವರು ಇಂಡಿ ಜಯನಗರ ಸಭಾ ಭವನದಲ್ಲಿ, ಚಡಚಣ ತಹಶೀಲ್ದಾರ ಅವರು ಶಿರಾಡೋಣ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ,ಸಿಂದಗಿ ತಹಶೀಲ್ದಾರ ಅವರು ಸಿಂದಗಿ ನಗರದ ವಾರ್ಡ್ ನಂ-1ರ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ,ದೇವರಹಿಪ್ಪರಗಿ ತಹಶೀಲ್ದಾರ ಅವರು ಭೈರವಾಡಗಿ ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಹಾಗೂ ಆಲಮೇಲ ತಹಶೀಲ್ದಾರ ಅವರು ಶಿರಸಗಿ ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.

ಅದಾಲತ್ ನಡೆಯುವ ಗ್ರಾಮಗಳಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮೂಲಕ ಪಿಂಚಣಿ ಪಾವತಿಸಲಾಗುತ್ತಿರುವುದರಿಂದ ಸಂಬ0ಧಿಸಿದ ಬ್ಯಾಂಕ್-ಅ0ಚೆ ಕಚೇರಿ ಅಧಿಕಾರಿಗಳು ಉಪಸ್ಥಿತರಿರುವರು. ಪಿಂಚಣಿ ಅದಾಲತ್‌ನಲ್ಲಿ ಪಿಂಚಣಿದಾರರ ಮಾಹಿತಿಗಳೊಂದಿಗೆ ಗ್ರಾಮದ ಲೆಕ್ಕಿಗರು, ಪಂಚಾಯತ್ ಕಾರ್ಯದರ್ಶಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಂಚೆ ಕಚೇರಿ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande