ಮಾಲೂರು ಶಾಸಕ ಕೆ. ವೈ. ನಂಜೇಗೌಡರ ಶಾಸಕ ಸ್ಥಾನ ಆಸಿಂಧು ; ಬಿ.ಜೆ.ಪಿ ಸಂಭ್ರಮ
ಮಾಲೂರು ಶಾಸಕ ಕೆ. ವೈ. ನಂಜೇಗೌಡರ ಶಾಸಕ ಸ್ಥಾನ ಆಸಿಂಧು ; ಬಿ.ಜೆ.ಪಿ ಸಂಭ್ರಮ
ಚಿತ್ರ ; ಮಾಜಿ ಶಾಸಕ ಕೆ ಎಸ್ ಮಂಜುನಾಥ್ ಗೌಡ ಅಭಿಮಾನಿಗಳು ನಗರದ ಕೆಂಪೇಗೌಡರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.


ಕೋಲಾರ, ೧೬ ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ವೈ. ನಂಜೇಗೌಡ ಅವರ ಶಾಸಕ ಸ್ಥಾನ ಆ ಸಿಂಧು ಗೊಳಿಸಿ ಮರು ಮತ ಎಣಿಕೆಗೆ ಹೈಕೋರ್ಟ್ ನ್ಯಾಯಪೀಠ ಆದೇಶಿಸಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಕೆ. ಎಸ್. ಮಂಜುನಾಥ್ ಗೌಡ ಹಾಗೂ ಅವರ ಅಭಿಮಾನಿಗಳು ನಗರದ ಕೆಂಪೇಗೌಡರ ವೃತ್ತದಲ್ಲಿ ಪಟಾಕಿ ಸಿಡಿಸಿ ಮಾರಿಕಾಂಬ ವೃತ್ತದ ವರೆಗೆ ಮೆರವಣಿಗೆ ಮೂಲಕ ಸಾಗಿ ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಲ್ಪಸಂಖ್ಯಾತ ಮುಖಂಡ ಸೈಯದ್ ಅಜ್ಗಾರ್ ೨೦೨೩ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕ ಕೆ. ವೈ. ನಂಜೇಗೌಡ ಅವರು ಚುನಾವಣಾ ಆಯೋಗದ ತಪ್ಪಿನಿಂದ ಮಾಜಿ ಶಾಸಕ ಕೆ. ಎಸ್. ಮಂಜುನಾಥ್ ಗೌಡ ಅವರ ವಿರುದ್ಧ ೨೪೮ ಮತಗಳ ಅಂತರದಿಂದ ಜಯಗಳಿಸಿದ್ದರು.

ಶಾಸಕ ಕೆ. ವೈ. ನಂಜೇಗೌಡ ಆಯ್ಕೆಯನ್ನು ಅಸಿಂದುಗೊಳಿಸಿ ಮರುಮತ ಎಣಿಕೆ ಮಾಡುವಂತೆ ನ್ಯಾಯಾಲಯದಲ್ಲಿ ಮಾಜಿ ಶಾಸಕರು ದಾವೆ ಹೂಡಿದ್ದರು, ಅದರಂತೆ ಹೈಕೋರ್ಟ್ ವಿಭಾಗೀಯ ನ್ಯಾಯ ಪೀಠವು ಚುನಾವಣಾ ಆಯೋಗವು ಮತ ಎಣಿಕೆ ಸರಿಯಾಗಿ ನಿರ್ವಹಿಸಿಲ್ಲ ಹಾಲಿ ಶಾಸಕ ಸ್ಥಾನವನ್ನು ಆ ಸಿಂಧು ಗೊಳಿಸಿ ಸುಪ್ರೀಂ ಕೋರ್ಟ್ಗೆ ಮೆಲ್ಮನವಿಯನ್ನು ಸಲ್ಲಿಸಲು ೩೦ ದಿನಗಳ ಕಾಲ ಕಾಲಾವಕಾಶ ನೀಡಿದೆ. ಮಾಜಿ ಶಾಸಕ ಕೆ. ಎಸ್. ಮಂಜುನಾಥ್ ಗೌಡ ಅವರಿಗೆ ಮರು ಮತ ಎಣಿಕೆಗೆ ನ್ಯಾಯಾಧೀಶರು ಆದೇಶಿಸಿರುವುದು ನ್ಯಾಯಕ್ಕೆ ಸಂದ ಜಯವಾಗಿದೆ, ಮರುಮತ ಎಣಿಕೆ ನಡೆಯಲಿದೆ ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡರು ಮತ್ತೊಮ್ಮೆ ತಾಲೂಕಿನ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದರು.

ನ್ಯಾಯಾಲಯವು ಮರು ಮತ ಎಣಿಕೆ ಆದೇಶಿಸಿದರೆ ಮೆಲ್ಮನವಿ ಹೋಗುವುದಿಲ್ಲ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವ ಶಾಸಕರು ನ್ಯಾಯಾಲಯದ ಆದೇಶವನ್ನು ಒಪ್ಪಿಕೊಂಡು ಮರು ಮತ ಎಣಿಕೆಗೆ ಹೋಗುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಎಟ್ಟಕೋಡಿ ಬಾಬು, ಕಿರಣ್ ಕುಮಾರ್, ಮಹೇಶ್, ವಿಜಯಕುಮಾರ್, ಜುಟ್ಟು ಮುನಿಕೃಷ್ಣ, ಇನ್ನಿತರರು ಹಾಜರಿದ್ದರು.

ಚಿತ್ರ : ಮಾಜಿ ಶಾಸಕ ಕೆ ಎಸ್ ಮಂಜುನಾಥ್ ಗೌಡ ಅಭಿಮಾನಿಗಳು ನಗರದ ಕೆಂಪೇಗೌಡರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande