ಕೋಲಾರ, ೧೬ ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮಾಲೂರು ವಿಧಾನ ಸಭಾ ಕ್ಷೇತ್ರದ ೨೦೨೩ ರ ಚುನಾವಣೆ ಮತಗಳ ಮರು ಎಣಿಕೆಯಲ್ಲಿ ಅನೇಕ ಲೋಪದೋಷಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಮತಗಳ ಮರು ಎಣಿಕೆಗೆ ಹೈ ಕೋರ್ಟ್ ಆದೇಶ ನೀಡಿದ್ದು, ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಮಾಜಿ ಶಾಸಕ ಮಂಜುನಾಥ್ ಗೌಡ ತಿಳಿಸಿದರು.
ಕೋಲಾರ ಬಿ.ಜೆ.ಪಿ.ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಚುನಾವಣೆ ವೇಳೆಯಲ್ಲಿ ಚಿತ್ರೀಕರಣ ಮಾಡಿದ್ದ ವಿಡಿಯೋಗಳು ಮತ್ತು ಹಾರ್ಡ್ ಡಿಸ್ಕ್ ನಾಪತ್ತೆ ಆಗಿರುವುದು,ಫಾರಂ ೧೧೭ ಸಿ ಯ ೧೧೩ ಫಾರಂಗಳಲ್ಲಿ ನಮ್ಮ ಏಜೆಂಟ್ ರವರುಗಳ ಸಹಿ ಮಾಡದಿರುವುದು ಹಾಗೂ ಫಾರಂ ಗಳ ಜೆರಾಕ್ಸ್ ಪ್ರತಿ ನೀಡದಿರುವುದು ಮತ್ತು ಚುನಾವಣೆ ಕಾನೂನುಗಳ ಪ್ರಕಾರ ಒಂದೇ ಕೊಠಡಿಯಲ್ಲಿ ೧೪ ಜನ ಮತ ಎಣಿಕೆ ಮಾಡ ಬೇಕಾದ ಜಾಗದಲ್ಲಿ ಕೇವಲ ೭ ಜನರನ್ನು ನಿಯೋಜಿಸಿ ಎರಡು ಕೋಣೆಗಳಲ್ಲಿ ಮತ ಎಣಿಕೆ ನಡೆಸಿರುವ ಲೋಪದೋಷಗಳನ್ನು ಗಮನಿಸಿರುವ ಹೈ ಕೋರ್ಟ್ ಚುನಾವಣೆ ಫಲಿತಾಂಶವನ್ನು ಅಸಿಂಧು ಗೊಳಿಸಿ ನಾಲ್ಕು ವಾರಗಳಲ್ಲಿ ಮತಗಳ ಮರು ಎಣಿಕೆಗೆ ಆದೇಶ ನೀಡಿದೆ ಎಂದು ವಿವರಿಸಿದರು.
ಕೆ.ವೈ. ನಂಜೇಗೌಡರ ಶಾಸಕ ಸ್ಥಾನ ಅಸಿಂಧುಗೊಳಿಸಿರುವ ಹೈಕೋರ್ಟ್ ಸುಪ್ರೀಂ ಕೋರ್ಟ್ ಹೋಗಲು ನಂಜೇಗೌಡರಿಗೆ ನಾಲ್ಕು ವಾರ ಅವಕಾಶ ನೀಡಿದೆ ಎಂದರು.ತಮಗೆ ಮರು ಮತ ಎಣಿಕೆಯಲ್ಲಿ ಗೆಲುವು ವಿಶ್ವಾಸ ಇದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ಜೆ.ಪಿ ಜಿಲ್ಲಾ ಅಧ್ಯಕ್ಷ ಓಂ ಶಕ್ತಿ ಚಲಪತಿ,ಮಾಜಿ ಸಂಸದ ಎಸ್. ಮುನಿಸ್ವಾಮಿ, ಮುಖಂಡರುಗಳಾದ ಮಹೇಶ್, ವಿಜಯಕುಮಾರ್, ತಿಮ್ಮರಾಯಪ್ಪ,ಕೃಷ್ಣಪ್ಪ, ಅರುಣಮ್ಮಮಮತ ಮುಂತಾದವರು ಇದ್ದರು.
ಚಿತ್ರ : ಕೋಲಾರ ನಗರದ ಬಿ.ಜೆ.ಪಿ.ಕಚೇರಿಯಲ್ಲಿ ಮಾಜಿ ಶಾಸಕ ಮಂಜುನಾಥ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್