ಕಾಶ್ಮೀರಿ ಸೇಬುಗಳೊಂದಿಗೆ ದೆಹಲಿಗೆ ಮರಳಿದ ವಿಶೇಷ ರೈಲು
ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಮಾರ್ಗದ ಮೂಲಕ ಸೇನೆಗೆ 753 ಮೆಟ್ರಿಕ್ ಟನ್ ಚಳಿಗಾಲದ ಸರಕುಗಳನ್ನು ತಲುಪಿಸಿದ ವಿಶೇಷ ರೈಲು, ಹಿಂದಿರುಗುವಾಗ ಕಾಶ್ಮೀರಿ ಸೇಬುಗಳನ್ನು ಹೊತ್ತು ದೆಹಲಿಗೆ ಮರಳಿದೆ. ಸೇನೆಯ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಇದು ಐತಿಹಾಸಿ
Apple train


ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಮಾರ್ಗದ ಮೂಲಕ ಸೇನೆಗೆ 753 ಮೆಟ್ರಿಕ್ ಟನ್ ಚಳಿಗಾಲದ ಸರಕುಗಳನ್ನು ತಲುಪಿಸಿದ ವಿಶೇಷ ರೈಲು, ಹಿಂದಿರುಗುವಾಗ ಕಾಶ್ಮೀರಿ ಸೇಬುಗಳನ್ನು ಹೊತ್ತು ದೆಹಲಿಗೆ ಮರಳಿದೆ. ಸೇನೆಯ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಇದು ಐತಿಹಾಸಿಕ ಮೈಲಿಗಲ್ಲೆಂದು ಪರಿಗಣಿಸಲಾಗಿದೆ.

ಬುಡ್ಗಾಮ್‌ನಿಂದ ನವದೆಹಲಿಗೆ ಹೊರಟ ಈ ಮೊದಲ ಮೀಸಲಾದ ಪಾರ್ಸೆಲ್ ರೈಲಿಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಸಿರು ನಿಶಾನೆ ತೋರಿದ್ದರು. ಎಂಟು ಪಾರ್ಸೆಲ್ ವ್ಯಾನ್‌ಗಳನ್ನು ಹೊಂದಿರುವ ರೈಲು ಪ್ರತಿದಿನ 23–24 ಟನ್ ಬೇಗ ಹಾಳಾಗುವ ಸರಕುಗಳನ್ನು, ಮುಖ್ಯವಾಗಿ ಸೇಬುಗಳನ್ನು, ಉತ್ತರ ಭಾರತದ ಮಾರುಕಟ್ಟೆಗಳಿಗೆ ಸಾಗಿಸಲು ಸಾಮರ್ಥ್ಯ ಹೊಂದಿದೆ.

ಇದಕ್ಕೂ ಮೊದಲು ಸೇನೆ ರಸ್ತೆಗಳ ಮೂಲಕ ಪಡಿತರ, ಇಂಧನ, ಔಷಧಿಗಳು ಸೇರಿದಂತೆ ಅಗತ್ಯ ಸಾಮಗ್ರಿ ಕಳುಹಿಸುತ್ತಿತ್ತು. ಆದರೆ ಹಿಮಪಾತ, ಭೂಕುಸಿತಗಳಿಂದಾಗಿ ದಾಸ್ತಾನು ಕಾರ್ಯಾಚರಣೆಗಳಲ್ಲಿ ಅಡಚಣೆ ಉಂಟಾಗುತ್ತಿತ್ತು. ಈಗ ರೈಲು ಸಂಪರ್ಕದಿಂದ ಸೇನೆಗೆ ಎಲ್ಲಾ ಹವಾಮಾನ ಪ್ರವೇಶ ಲಭ್ಯವಾಗಿದೆ.

ರಕ್ಷಣಾ ವಕ್ತಾರರು ನೀಡಿರುವ ಮಾಹಿತಿ ಪ್ರಕಾರ, ಹಿಂದಿರುಗುವ ರೈಲುಗಳು ಕಾಶ್ಮೀರಿ ಸೇಬುಗಳನ್ನು ಭಾರತೀಯ ಮಾರುಕಟ್ಟೆಗೆ ಸಾಗಿಸುವುದರಿಂದ ರೈತರಿಗೆ ಸಾರಿಗೆ ವೆಚ್ಚ ಕಡಿಮೆ, ಸರಕು ಹಾಳಾಗುವ ಪ್ರಮಾಣ ಕಡಿಮೆ ಹಾಗೂ ಆದಾಯ ಹೆಚ್ಚುವ ನಿರೀಕ್ಷೆ ಇದೆ. ಸೇನಾ ಅಧಿಕಾರಿಗಳು ಇದನ್ನು “ಮಿಲಿಟರಿ–ನಾಗರಿಕ ಸಮ್ಮಿಲನದ ವಿಶಿಷ್ಟ ಉದಾಹರಣೆ” ಎಂದು ಶ್ಲಾಘಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande