ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮುಂದಿನ ಐದು ವರ್ಷಗಳಲ್ಲಿ ಭಾರತವನ್ನು ಜೈವಿಕ ಇಂಧನ ಮತ್ತು ಹಸಿರು ಸಾರಿಗೆಯಲ್ಲಿ ವಿಶ್ವ ನಾಯಕನನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
ದೆಹಲಿ–ಮಾನೇಸರ್ ಮಾರ್ಗದಲ್ಲಿ ಏರ್ ಪಾಡ್ ವ್ಯವಸ್ಥೆ, ಮುಂಬೈನಲ್ಲಿ ನೀರಿನ ಟ್ಯಾಕ್ಸಿ ಸೇವೆ, ಫ್ಲ್ಯಾಶ್-ಚಾರ್ಜಿಂಗ್ ಎಲೆಕ್ಟ್ರಿಕ್ ಬಸ್‌ಗಳು, ಕೇಬಲ್ ಕಾರ್ ಯೋಜನೆಗಳು, ಪರ್ವತ ಪ್ರದೇಶಗಳಲ್ಲಿ ಸುರಂಗ ಮಾರ್ಗ ನಿರ್ಮಾಣ ಸೇರಿದಂತೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳ ವಿವರವನ್ನು ಅವರು ಹಂಚಿಕೊಂಡಿದ್ದಾರೆ.
ದೆಹಲಿ–ಮಾನೇಸರ್ ಮಾರ್ಗದಲ್ಲಿ ಏರ್ ಪಾಡ್ ವ್ಯವಸ್ಥೆ,18–25 ಪ್ರಯಾಣಿಕರ ಸಾಮರ್ಥ್ಯ, 200 ಕಿ.ಮೀ ವೇಗ. ದೇಶಾದ್ಯಂತ 300 ಕೇಬಲ್ ಕಾರ್ ಯೋಜನೆಗಳು ಕಾರ್ಯ ನಿರ್ವಹಣೆಯಲ್ಲಿವೆ. ಮುಂಬೈನಲ್ಲಿ ವೆನಿಸ್ ಮಾದರಿಯ ನೀರಿನ ಟ್ಯಾಕ್ಸಿ ಸೇವೆ, 17 ನಿಮಿಷಗಳಲ್ಲಿ ನವಿ ಮುಂಬೈ ವಿಮಾನ ನಿಲ್ದಾಣಕ್ಕೆ. 135 ಆಸನಗಳ ಫ್ಲ್ಯಾಶ್-ಚಾರ್ಜಿಂಗ್ ಎಲೆಕ್ಟ್ರಿಕ್ ಬಸ್ 20–30 ಸೆಕೆಂಡುಗಳಲ್ಲಿ ಚಾರ್ಜ್, ಡೀಸೆಲ್ ಬಸ್‌ಗಿಂತ 30% ಅಗ್ಗ. ಪರ್ವತ ಪ್ರದೇಶಗಳಲ್ಲಿ 450 ಕಿ.ಮೀ ಉದ್ದದ ಸುರಂಗ ಮಾರ್ಗ ಯೋಜನೆ. ರಸ್ತೆ ಅಪಘಾತ ತಡೆ: 2030ರೊಳಗೆ 50% ಅಪಘಾತ ಕಡಿತ ಗುರಿ, 6 ಏರ್‌ಬ್ಯಾಗ್ ಕಡ್ಡಾಯ, ಹೆಲ್ಮೆಟ್ ನಿಯಮ ಕಠಿಣ. ಇವಿಗಳ ಮಾರಾಟದಲ್ಲಿ ಏರಿಕೆ, ಪೆಟ್ರೋಲ್ ಬೈಕ್‌ಗಳಿಗಿಂತ 15% ಹೆಚ್ಚು, ಶೀಘ್ರದಲ್ಲೇ ಇವಿ–ಸಾಂಪ್ರದಾಯಿಕ ವಾಹನ ಬೆಲೆ ಸಮಾನವಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa