ಪೋಷಣ ಮಾಸಾಚರಣೆ ಕಾರ್ಯಕ್ರಮ - 2025
ಗದಗ, 16 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗದಗ ಹಾಗೂ ಶಿಶು ಅಭಿವೃದ್ಧಿ ಯೋಜನೆ, ಗದಗ ಇವರ ಸಂಯುಕ್ತಾಶ್ರಯದಲ್ಲಿ ಬೆಟಗೇರಿಯ ಮಂಜುನಾಥ ಸ್ವಾಮಿ ದೇವಸ್ಥಾನದ ಸಮುದಾಯ
ಪೋಟೋ


ಗದಗ, 16 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗದಗ ಹಾಗೂ ಶಿಶು ಅಭಿವೃದ್ಧಿ ಯೋಜನೆ, ಗದಗ ಇವರ ಸಂಯುಕ್ತಾಶ್ರಯದಲ್ಲಿ ಬೆಟಗೇರಿಯ ಮಂಜುನಾಥ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಜರುಗಿತು.

ಬೆಟಗೇರಿಯ ಮಂಜುನಾಥ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪೋಷಣ ಮಾಸಾಚರಣೆ ಕಾರ್ಯಕ್ರಮದವನ್ನು ನ್ಯಾಯಾಧೀಶರು ಜೆ.ಎಂ.ಎ.ಸಿ. 1 ನೇ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ ಶ್ರೀಮತಿ ಶಿಲ್ಪಾ ತಿಮ್ಮಾಪೂರ ಪೋಷಣ ಮಾಸಾಚರಣೆ ಉದ್ಘಾಟಿಸಿ ಮಾತನಾಡಿ ಪೌಷ್ಠಿಕ ಆಹಾರವನ್ನು ಮಕ್ಕಳು, ಗರ್ಭಿಣಿ, ಬಾಣಂತಿಯರು ಸರಿಯಾಗಿ ಸೇವಿಸಬೇಕು ಎಂದರು ಹಾಗೂ ಅದರ ಮಹತ್ವದ ಬಗ್ಗೆ ಸಲಹೆ ನೀಡಿದರು, ನಮ್ಮ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿರಿಸಿಕೊಳ್ಳಬೇಕು. ಇದರಿಂದ ರೋಗ ರುಜಿನೆಗಳನ್ನು ತಡೆಗಟ್ಟಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗದಗ ಶ್ರೀಮತಿ ಪದ್ಮಾವತಿ ಜಿ. ಇವರು ಮಾತನಾಡಿ ಸೆಪ್ಟೆಂಬರ ಮಾಹೆಯಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಬೊಜ್ಜುತನ ನಿವಾರಣೆ, ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವುದು, ಪೋಷಣ ಭಿ ಪಢಾಯಿ ಭಿ, ಶಿಶು & ಚಿಕ್ಕ ಮಕ್ಕಳ ಆಹಾರ ಅಭ್ಯಾಸಗಳು, ಪುರುಷರ ಸಹಬಾಗಿತ್ವದ ಹಾಗೂ ಇಲಾಖೆಯ ವಿವಿಧ ಯೋಜನೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಮುಖ್ಯ ಅಥಿತಿಗಳಾಗಿ ಆಗಮಿಸಿದ ಆಯುಷ ಇಲಾಖೆ ಗದಗ ಜಪಯಾಲಸಿಂಗ್ ಸೇವಳಕರ್ ಇವರು ಮಾತನಾಡಿ ಮನುಷ್ಯನ ಎಲ್ಲ ರೋಗಗಳಿಗೂ ಬೊಜ್ಜುತನವೆ ಕಾರಣ ಇದು ಬರದಂತೆ ಆರೋಗ್ಯಯುತ ಆಹಾರಭ್ಯಾಸಗಳನ್ನು ರೂಡಿಸಿಕೊಳ್ಳೊಣ ಎಂದರು,

ನಿರೂಪಣಾಧಿಕಾರಿಗಳು ಮ.ಮ.ಅ.ಇ ಗದಗ ಶ್ರೀಮತಿ ರಾಧಾ ಜಿ ಮಣ್ಣೂರ ಇವರು ಮಾತನಾಡಿ ಮಕ್ಕಳ ಬೆಳವಣಿಗೆ ಮೇಲ್ವಿಚಾರಣೆಯಲ್ಲಿ ಪಾಲಕರ ಹಾಗೂ ಇಲಾಖಾ ಸಿಬ್ಬಂದಿಗಳ ಪಾತ್ರದ ಕುರಿತು ತಿಳಿಸಿದರು, ಶ್ರೀಮತಿ ಶಕುಂತಲಾ ಅಕ್ಕಿ ಮಾನ್ಯ ನಗರ ಸಭಾ ಸದಸ್ಯರು ಗದಗ ಇವರು ಕೂಡಾ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದ್ದಿರಿ ಸದರಿ ಕಾರ್ಯಕ್ರಮದ ಮಾಹಿತಿ ಎಲ್ಲರಿಗೂ ತಲುಪಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ಶ್ರೀಮತಿ ಎಚ್.ಎಸ್ ಜೋಗೇರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಗದಗ, ಆಯುಷ ಇಲಾಖೆಯ ಇತರೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು

ತೀವ್ರ ಹಾಗೂ ಸಾಧಾರಣ ಅಪೌಷ್ಠಿಕ ಮಕ್ಕಳಿಗೆ ಚ್ಯವನ್ ಪ್ರಾಶ್ ವಿತರಣೆ, ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿಗಳ ವಿತರಣೆ, ಕಾರ್ಯಕರ್ತೆ ಹಾಗೂ 3 ರಿಂದ 6 ವರ್ಷದ ಮಕ್ಕಳಿಂದ ಪೋಷಣ ಭಿ ಪಢಾಯಿ ಭಿ ಕುರಿತಾದ ಚಟುವಟಿಕೆ, ಪೌಷ್ಠಿಕ ಆಹಾರಗಳ ಪ್ರಾತ್ಯಕ್ಷಿಕೆ, ಮಕ್ಕಳಿಂದ ಹಣ್ಣುಗಳ ಆರೋಗ್ಯರ ಗುಣಗಳ ಕುರಿತಾದ ಚಟುವಟಿಕೆ, ಕಾರ್ಯಕರ್ತೆ ಹಾಗೂ 0 ರಿಂದ 6 ವರ್ಷದ ಮಕ್ಕಳಿಂದ ವಯಸ್ಸಿಗೆ ತಕ್ಕಂತೆ ಮಗುವಿನ ಚಟುವಟಿಕೆಗಳ ಕುರಿತಾದ ಪಾತ್ಯಕ್ಷಿಕೆ, ಸ್ವದೇಶಿ ಹಾಗೂ ವಿದೇಶಿ ವಸ್ತುಗಳ ಬಳಕೆಯ ಕುರಿತಾದ ಕಾರ್ಯಕರ್ತೇಯರಿಂದ ಜಾನಪದ ಹಾಡು ಹಾಗೂ 3 ರಿಂದ 6 ವರ್ಷದ ಮಕ್ಕಳಿಂದ ನೃತ್ಯ ನಡೆದವು

ಸಂರಕ್ಷಣಾಧಿಕಾರಿ ಶಿಶು ಅಭಿವೃದ್ಧಿ ಯೋಜನೆ ಗದಗ ಶ್ರೀಮತಿ ರಾಜೇಶ್ವರಿ ಮೇಟಿ, ಶ್ರೀಮತಿ ಮಂಜುಳಾ ಕಮತ್ ಹಾಗೂ ಶ್ರಿ ಮತಿ ಸುರೇಖಾ ಮಲ್ಲಾಪೂರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕು.ಸಂಗೀತಾ ಹೂಗಾರ ಪೋಷಣ ಜಿಲ್ಲಾ ಸಂಯೋಜಕರು, ಕು. ಪವನ ಕಾಟೀಗರ ಪೋಷಣ ಜಿಲ್ಲಾ ಕಾರ್ಯಕ್ರಮ ಸಹಾಯಕರು, ಶ್ರೀಮತಿ ಕಾವೇರಿ ಚೇಗೂರ ಪೋಷಣ ತಾಲೂಕು ಸಂಯೋಜಕರು, ಗದಗ ಯೋಜನೆಯ ಎಲ್ಲ ವಲಯ ಮೇಲ್ವಿಚಾರಕಿಯರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಗರ್ಭಿಣಿಯರು, ತಾಯಂದಿರು, ಮಕ್ಕಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯವರು ಮತ್ತು ಸ್ತಿಶಕ್ತಿ ಗುಂಪಿನ ಸದಸ್ಯರು ಭಾಗವಹಿಸಿದ್ದರು.

ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪೂಜಾರ ಇವರ ಪ್ರಾರ್ಥನಾಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಶ್ರೀಮತಿ ಮಂಜುಳಾ ಕಮತ ಎಲ್ಲರನ್ನು ಸ್ವಾಗತಿಸಿದರು, ವಿಜಯಲಕ್ಷ್ಮಿ ಗುರುಬಸನಗೌಡ್ರ ವಲಯ ಮೇಲ್ವಿಚಾರಕಿ ಕಾರ್ಯಕ್ರಮದ ನಿರೂಪಪಿಸಿದರು ಶ್ರೀಮತಿ ವಿನೋದಾ ಹೊಂಬಳ ವಲಯ ಮೇಲ್ವಿಚಾರಕಿಯರ ವಂದನಾರ್ಪಣೆ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande