ಗದಗ ಜಿಲ್ಲೆಯಲ್ಲಿ ಮಳೆ ಆರ್ಭಟ, ಆರೋಗ್ಯ ಇಲಾಖೆ ಮಹಿಳಾ ಸಿಬ್ಬಂದಿ ನೀರುಪಾಲು
ಗದಗ, 16 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗಗದ ಜಿಲ್ಲೆಯ ಹಲವೆಡೆ ಭಾರಿ ಮಳೆ ಸುರಿಯುತ್ತಿದ್ದು, ಹಳ್ಳ ಕೆರೆಯ ನೀರು ತುಂಬಿ ಹರಿಯುತ್ತಿರುವ ಅವಾಂತರದಲ್ಲಿ ಒಬ್ಬ ಮಹಿಳಾ ಆರೋಗ್ಯ ಸಿಬ್ಬಂದಿ ನೀರು ಪಾಲಾಗಿದ್ದಾರೆ. ಈ ಘಟನೆ ರೋಣ ತಾಲೂಕಿನ ಬೆಳವಣಿಕಿ ಹಡಗಲಿ ಗ್ರಾಮದ ಮಧ್ಯ ಸಂಭವಿಸಿದೆ. ಬೆಳವಣಕಿ ಪ್ರಾಥ
ಪೋಟೋ


ಗದಗ, 16 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗಗದ ಜಿಲ್ಲೆಯ ಹಲವೆಡೆ ಭಾರಿ ಮಳೆ ಸುರಿಯುತ್ತಿದ್ದು, ಹಳ್ಳ ಕೆರೆಯ ನೀರು ತುಂಬಿ ಹರಿಯುತ್ತಿರುವ ಅವಾಂತರದಲ್ಲಿ ಒಬ್ಬ ಮಹಿಳಾ ಆರೋಗ್ಯ ಸಿಬ್ಬಂದಿ ನೀರು ಪಾಲಾಗಿದ್ದಾರೆ. ಈ ಘಟನೆ ರೋಣ ತಾಲೂಕಿನ ಬೆಳವಣಿಕಿ ಹಡಗಲಿ ಗ್ರಾಮದ ಮಧ್ಯ ಸಂಭವಿಸಿದೆ.

ಬೆಳವಣಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಬಸಮ್ಮ, ಬಸವರಾಜ ಕಡಪಟ್ಟಿ ಹಾಗೂ ವೀರಸಂಗಯ್ಯ ಹಿರೇಮಠ ಮೂವರೂ ಹಡಗಲಿ ಗ್ರಾಮದಲ್ಲಿ ಆರೋಗ್ಯ ಶಿಬಿರ ಮುಗಿಸಿ ಬೈಕ್‌ನಲ್ಲಿ ವಾಪಸಾಗುತ್ತಿದ್ದರು. ಈ ವೇಳೆ ಮಿಸೇನ್ ಕೇರಿ ಹಳ್ಳವು ಉಕ್ಕಿ ಹರಿಯುತ್ತಿದ್ದುದರಿಂದ ಬೈಕ್ ಕೊಚ್ಚಿಕೊಂಡು ಹೋಗಿದೆ. ಇಬ್ಬರು ಸಿಬ್ಬಂದಿ ಹಳ್ಳದ ಜಾಲಿಗಿಡದಲ್ಲಿ ಸಿಲುಕಿ ಬಚಾವ್ ಆಗಿ ಬಂದರೆ, ಬಸಮ್ಮ ನೀರಿನಲ್ಲಿ ಕೊಚ್ಚಿಹೋದರು.

ಘಟನೆಯ ತಿಳಿದ ಗ್ರಾಮಸ್ಥರು, ಪೊಲೀಸರು ತಕ್ಷಣವೇ ಶೋಧ ಕಾರ್ಯ ಆರಂಭಿಸಿದ್ದಾರೆ. ಇಬ್ಬರು ಸಿಬ್ಬಂದಿಗಳು ಸಣ್ಣಪುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ, ತಹಶಿಲ್ದಾರರ ಸೇರಿದಂತೆ ರೋಣ ಪೊಲೀಸರು ಭೇಟಿ ನೀರಿ ಪರಿಶೀಲನೆ ‌ನಡೆಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande