ನವದೆಹಲಿ, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮಹಿಳಾ ಪ್ರಯಾಣಿಕರ ಅನುಕೂಲತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಉತ್ತರ ರೈಲ್ವೆ ಪ್ರಮುಖ ಕ್ರಮ ಕೈಗೊಂಡಿದೆ. ಇದೀಗ ನವದೆಹಲಿ-ಪಾಣಿಪತ್ ಇಎಂಯು ರೈಲು (ಸಂಖ್ಯೆ 64469/64470) ಯ ಮಧ್ಯಭಾಗದಲ್ಲಿ ಮೂರು ಮಹಿಳಾ ಬೋಗಿಗಳನ್ನು ನಿರಂತರವಾಗಿ ಜೋಡಿಸಲಾಗಿದೆ.
ಮೊದಲು ಈ ಬೋಗಿಗಳು ರೈಲಿನ ಎರಡನೇ, 11ನೇ ಹಾಗೂ ಮಧ್ಯ ಭಾಗಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತಿತ್ತು. ಇದರಿಂದ ಮಹಿಳೆಯರಿಗೆ ಹತ್ತುವಾಗ ಮತ್ತು ಇಳಿಯುವಾಗ ಅನಾನುಕೂಲತೆ ಉಂಟಾಗುತ್ತಿತ್ತು. ಹೊಸ ವ್ಯವಸ್ಥೆಯಲ್ಲಿ, 12 ಬೋಗಿಗಳಿರುವ ಈ ಇಎಂಯು ರೈಲಿನ ಮಧ್ಯದಲ್ಲೇ ಮೂರು ಮಹಿಳಾ ಬೋಗಿಗಳನ್ನು ಒಟ್ಟಿಗೆ ಇರಿಸುವ ಮೂಲಕ ಸಮಸ್ಯೆ ಪರಿಹರಿಸಲಾಗಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಿಮಾಂಶು ಶೇಖರ್ ಉಪಾಧ್ಯಾಯ ತಿಳಿಸಿದ್ದಾರೆ.
ಈ ಬದಲಾವಣೆಯಿಂದ ಮಹಿಳಾ ಪ್ರಯಾಣಿಕರಿಗೆ ಪ್ರಯಾಣ ಸುಗಮವಾಗುವುದರ ಜೊತೆಗೆ ಸುರಕ್ಷತೆ ಹೆಚ್ಚುವುದು ಎಂದು ರೈಲ್ವೆ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ. ಬೋಗಿಗಳನ್ನು ಮಧ್ಯಭಾಗದಲ್ಲಿ ಜೋಡಿಸಿರುವುದರಿಂದ ಮೇಲ್ವಿಚಾರಣೆಯೂ ಸುಲಭವಾಗಲಿದ್ದು, ಮಹಿಳಾ ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಮತ್ತು ಭದ್ರತೆಯ ಅನುಭವ ಲಭ್ಯವಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa