ನಾರಾಯಣಪುರ, 11 ಸೆಪ್ಟೆಂಬರ್(ಹಿ.ಸ.):
ಆ್ಯಂಕರ್ : ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ನಕ್ಸಲ್ ನಿರ್ಮೂಲನಾ ಅಭಿಯಾನ ಮತ್ತೊಂದು ಯಶಸ್ಸು ಕಂಡಿದೆ. ಗುರುವಾರ ಜಿಲ್ಲೆಯ 16 ನಕ್ಸಲರು ನಾರಾಯಣಪುರ ಪೋಲಿಸ್ ವರಿಷ್ಠಾಧಿಕಾರಿ ರಾಬಿನ್ಸನ್ ಗುಡಿಯಾ ಅವರ ಮುಂದೆ ಶರಣಾಗಿದ್ದಾರೆ.
ಶರಣಾದವರಲ್ಲಿ ಜನತಾನ ಸರ್ಕಾರದ ಸದಸ್ಯರು, ಪಂಚಾಯತ್ ಮಿಲಿಟಿಯಾ ಕಮಾಂಡರ್ ಹಾಗೂ ಸದಸ್ಯರು, ನ್ಯಾಯ ಶಾಖೆಯ ಅಧ್ಯಕ್ಷರು ಸೇರಿದಂತೆ ಪ್ರಮುಖರು ಇದ್ದಾರೆ.
ಇವರಲ್ಲಿ ಕೆಲವರು ನಕ್ಸಲರ ಪಡಿತರ, ಔಷಧಿ ಪೂರೈಕೆ, ಶಸ್ತ್ರಾಸ್ತ್ರ ಸಾಗಣೆ, ಐಇಡಿ ನೆಡುವುದು ಹಾಗೂ ಭದ್ರತಾ ಪಡೆಗಳ ಚಲನೆ ಕುರಿತು ಮಾಹಿತಿ ನೀಡುವಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಎಸ್‌ಪಿ ರಾಬಿನ್ಸನ್ ಗುಡಿಯಾ ಮಾಹಿತಿ ನೀಡಿದ್ದಾರೆ.
ಶರಣಾದ ಪ್ರತಿಯೊಬ್ಬ ನಕ್ಸಲರಿಗೆ ಸರ್ಕಾರದ ಪುನರ್ವಸತಿ ನೀತಿಯಡಿಯಲ್ಲಿ ₹50,000 ಪ್ರೋತ್ಸಾಹ ಧನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಕ್ಸಲೀಯರ ಪುನರ್ವಸತಿಗಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa