ವಂಚನೆ ಪ್ರಕರಣದಲ್ಲಿ ಬೇಕಾಗಿದ್ದ ಮುನವ್ವರ್ ಖಾನ್ ಭಾರತಕ್ಕೆ ಗಡಿಪಾರು
ನವದೆಹಲಿ, 11 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಬ್ಯಾಂಕ್ ಆಫ್ ಬರೋಡಾದ ವಂಚನೆ ಮತ್ತು ನಕಲಿ ಪ್ರಕರಣದಲ್ಲಿ ಬೇಕಾಗಿದ್ದ ಮುನವ್ವರ್ ಖಾನ್ ನನ್ನು ಕುವೈತ್‌ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಇಂಟರ್‌ಪೋಲ್ ಚಾನೆಲ್‌ಗಳ ಮೂಲಕ ಈ ಹಸ್ತಾಂತರವನ್ನು ಯಶಸ್ವಿಯಾಗಿ ನಡೆಸಿದೆ.
Cbi


ನವದೆಹಲಿ, 11 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬ್ಯಾಂಕ್ ಆಫ್ ಬರೋಡಾದ ವಂಚನೆ ಮತ್ತು ನಕಲಿ ಪ್ರಕರಣದಲ್ಲಿ ಬೇಕಾಗಿದ್ದ ಮುನವ್ವರ್ ಖಾನ್ ನನ್ನು ಕುವೈತ್‌ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಇಂಟರ್‌ಪೋಲ್ ಚಾನೆಲ್‌ಗಳ ಮೂಲಕ ಈ ಹಸ್ತಾಂತರವನ್ನು ಯಶಸ್ವಿಯಾಗಿ ನಡೆಸಿದೆ.

ಸಿಬಿಐ ಮೂಲಗಳ ಪ್ರಕಾರ, ಖಾನ್ ಅವರನ್ನು ಕುವೈತ್ ಪೊಲೀಸರು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದರು. ಅಲ್ಲಿ ಅವರನ್ನು ಸಿಬಿಐನ ಚೆನ್ನೈನ ವಿಶೇಷ ಅಪರಾಧ ವಿಭಾಗದ ತಂಡ ವಶಕ್ಕೆ ಪಡೆದುಕೊಂಡಿತು.

2011ರಲ್ಲಿ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಖಾನ್ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣದಲ್ಲಿ ಆರೋಪ ಮಾಡಲಾಗಿತ್ತು. ಬ್ಯಾಂಕ್ ಆಫ್ ಬರೋಡಾದಲ್ಲಿ ವಂಚನೆ ನಡೆಸಿದ ಬಳಿಕ, ಅವರು ಇತರ ಆರೋಪಿಗಳೊಂದಿಗೆ ಕುವೈತ್‌ಗೆ ಪಲಾಯನ ಮಾಡಿದ್ದರು.

ಸಿಬಿಐ 2022ರ ಫೆಬ್ರವರಿ 7ರಂದು ಇಂಟರ್‌ಪೋಲ್ ಮೂಲಕ ಖಾನ್ ವಿರುದ್ಧ ರೆಡ್ ನೋಟಿಸ್ ಹೊರಡಿಸಿತ್ತು. ಕುವೈತ್ ಅಧಿಕಾರಿಗಳು ಅವರನ್ನು ಬಂಧಿಸಿದ ನಂತರ ಭಾರತಕ್ಕೆ ಹಸ್ತಾಂತರಿಸಲು ನಿರ್ಧರಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande