ಕೋಲಾರ, ೨೯ ಆಗಸ್ಟ್ (ಹಿ.ಸ) :
ಆ್ಯಂಕರ್ : ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಸುಸ್ಥಿರ ಸಮಾಜದ ಅಭಿವೃದ್ದಿಯ ಹದಿನೇಳು ಅಂಶಗಳನ್ನು ಇಟ್ಟುಕೊಂಡು ಸಮಾಜದಲ್ಲಿ ಉತ್ತಮವಾದ ವಾತಾವರಣ ಹಾಗೂ ಅಭಿವೃದ್ದಿಯನ್ನು ಸಾಧಿಸಲು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರು ಹಾಗೂ ಮಾಜಿ ಮಂತ್ರಿಗಳಾದ ಪಿ.ಜಿ.ಆರ್. ಸಿಂದ್ಯಾ ತಿಳಿಸಿದರು.
ಕೋಲಾರ ನಗರದ ಸ್ಕೌಟ್ ಭವನದಲ್ಲಿ ಆಯೋಜನೆ ಮಾಡಿದ್ದ ಮೂರು ದಿನಗಳ ರಾಜ್ಯ ಮಟ್ಟದ ವೃತ್ತಿ ಕೌಶಲ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಆಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ಎಲ್ಲಾ ವಿದ್ಯಾಥಿಗಳು ಸ್ಕೌಟ್ಸ್ ಗೈಡ್ಸ್ ಶಿಕ್ಷಣದಲ್ಲಿ ಭಾಗವಹಿಸಿಬೇಕು, ಎಲ್ಲರಿಗೂ ಸರ್ಕಾರ ಉಧ್ಯೋಗವನ್ನು ಸೃಷ್ಟಿಮಾಡಲು ಸಾಧ್ಯವಿಲ್ಲ, ಯುವಕರು ತಮ್ಮ ಗ್ರಾಮ, ಪಟ್ಟಣ,ನಗರದಲ್ಲಿನ ಬೇಡಿಕೆಗಳಿಗೆ ತಂಕ್ಕಂತೆ ಬೇಕಾದ ಉಧ್ಯೋಗವನ್ನು ತಾವೇ ಸೃಷ್ಟಿಸಿ ತಾವು ಉದ್ಯಮಿಗಳಾಗಿ ಹಲವರಿಗೆ ಉಧ್ಯೋಗ ಕೊಡುವ ಮೂಲಕ ಸಾರ್ಥಕ ಜೀವನ ನಡೆಸಬೇಕು, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಉತ್ತಮವಾದ ಹಾಗೂ ಅಗತ್ಯಕ್ಕೆ ತಕ್ಕಂತೆ ತಾವು ಉತ್ಪಾದನೆ ಮಾಡಿದರೆ ಮಾರುಕಟ್ಟೆಯಲ್ಲಿ ಉತ್ತಮ ಭೇಡಿಕೆ ಸಿಗಲಿದೆ,ರೋವರ್ಸ ಮತ್ತು ರೇಂಜರ್ಸ್ ಗಳು ತಮ್ಮ ಆಲೋಚನಾ ಶಕ್ತಿಯನ್ನು ಸಮಾಜದಲ್ಲಿನ ಜತ್ವಂತ ಸಮಸ್ಯೆಗಳಿಗೆ ಬೇಕಾದ ಪರಿಹಾರ ಕ್ರಮಗಳನ್ನು ರೂಪಿಸುವ ಮೂಲಕ ಈ ಸಮಾಜದ ಋಣವನ್ನು ತೀರಿಸಬೇಕು, ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಮೂಲ ಆಶಯ ಉತ್ತಮ ನಾಗರಿಕರನ್ನು ತಯಾರುಮಾಡುವುದರೊಂದಿಗೆ ಉತ್ತಮ ಜೀವನ ಕೌಶಲಗಳನ್ನು ಕಲಿಸುವ ಮೂಲಕ ತಮ್ಮ ದಿನನಿತ್ಯದಲ್ಲಿ ಬೇಕಾದ ಅಗತ್ಯವಸ್ತುಗಳನ್ನು ಉತ್ತಮ ಗುಣಮಟ್ಟದಲ್ಲಿ ತಯಾರಿಸಿ ಬಳಸುವ ಕ್ರಮವನ್ನು ಕಲಿಸುತ್ತಿದೆ, ಈ ವಿಷಯವನ್ನು ತಮ್ಮ ಸ್ನೇಹಿತರ ಬಳಿ ಹಂಚಿಕೊಳ್ಳುವ ಮೂಲಕ ಎಲ್ಲರೂ ಆರ್ಥಿಕವಾಗಿ ಸಬಲಿಕರಣವಾಗಿ ಉತ್ತಮ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ವಿ.ಶಂಕರಪ್ಪ ರವರು ಮಾತನಾಡಿ ಮಹಿಳಾ ಸಬಲಿಕರಣಕ್ಕೆ ಮತ್ತು ಸ್ವಯಂ ಉದ್ಯೋಗಕ್ಕೆ ಬೇಕಾದಂತಹ ಹಲವು ಉತ್ತಮ ಯೋಜನೆಗಳನ್ನು ಈ ಶಿಬಿರದಲ್ಲಿ ಕಲಿಸಲಿದ್ದು ತಾವು ಈ ಶಿಬಿರದ ಉದ್ದೇಶಗಳನ್ನು ಮೂಲ ಆದಾರವಾಗಿಟ್ಟುಕೊಂಡು ಭವಿಷ್ಯದಲ್ಲಿ ಉತ್ತಮ ಉದ್ಯಮಿಗಳಾಗಿ ರೂಪಗೊಳ್ಳಬೇಕು, ಯಾರು ಯಾವಾಗ ಯಾವ ರೀತಿಯಲ್ಲಿ ತಮ್ಮ ಜೀವನವನ್ನು ರುಪಿಸಿಕೊಳ್ಳುವರು ಎಂಬುದನ್ನು ಯಾರು ನೀರೀಕ್ಷೆ ಮಾಡಲಾಗುವುದಿಲ್ಲಾ, ಸಮಾಜದಲ್ಲಿ ಬದುಕಿನ ಮಧ್ಯೆ ಬರುವ ತಿರುವುಗಳು, ಸ್ನೇಹಿತರು, ಶಿಬಿರಗಳು ನೀಡುವ ಅನುಭವಗಳು ನಮ್ಮನ್ನು ಬದಲಾಯಿಸುತ್ತವೆ. ರಾಜ್ಯ ಮುಖ್ಯ ಆಯುಕ್ತರ ಆಶಯ ಸಾಕಾರಗೊಳ್ಳಲು ತಾವು ಉತ್ತಮವಾದ ಚಿತಂನೆಗಳನ್ನು ಮಾಡಬೇಕು, ಆ ಚಿಂತನೆಗಳಿಗೆ ಪೋಷಕರಾಗಿ ನಮ್ಮ ಸಂಸ್ಥೆ ನಿಮ್ಮೋಂದಿಗೆ ಸದಾ ಇರಲಿದೆ, ಸ್ಕೌಟ್ಸ್ ಗೈಡ್ಸ್ ಶಿಕ್ಷಣದ ಮೂಲ ಆಶಯ ನಮ್ಮ ಭೂಮಿಯನ್ನು ಉಳಿಸಬೇಕು, ಭೂಮಿ ಉಳಿದರೆ ಮಾತ್ರ ನಮಗೆ ನಿಮಗೆ ಭವಿಷ್ಯ ಈ ನಿಟ್ಟಿನಲ್ಲಿ ತಾವು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಸಹಕಾರ್ಯದರ್ಶಿ ಸ್ಕೌಟ್ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಯವಜನರ ವಿರಾಮ ವೇಳೆಯನ್ನು ಹೇಗೆ ಸದುಪಯೋಗಪಡಿಸಿಕೊಂಡು ತಮ್ಮ ಮನೆಯಲ್ಲಿ ಕಡಿಮೆ ಬಂಡವಾಳ ಹೂಡಿ ಸ್ವಯಂ ಉದ್ಯೋಗವನ್ನು ಕೈಗೊಳ್ಳುವ ಮೂಲಕ ತಮ್ಮ ಪೋಷಕರಿಗೆ ಆರ್ಥಿಕವಾಗಿ ನೆರವಾಗುವುದು ಹಾಗೂ ಹಣವನ್ನು ಉಳಿಸುವಂತಹ ಕೌಶಲವನ್ನು ಜೀವನದಲ್ಲಿ ಬೆಳೆಸಿಕೊಳ್ಳುವುದರ ಜೊತೆಗೆ ತಾವು ತಮ್ಮ ಇತರೆ ಗೆಳೆಯರಿಗಿಂತ ಭಿನ್ನವಾಗಿ ಜೀವನವನ್ನು ನಡೆಸಲು ಇಂತಹ ಶಿಬಿರಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆಯುಕ್ತ ಕೆ.ಆರ್.ಸುರೇಶ್, ಜಿಲ್ಲಾ ಕಾರ್ಯದರ್ಶಿ ನಾರಾಯಣಸ್ವಾಮಿ, ಜಿಲ್ಲಾ ತರಬೇತಿ ಆಯುಕ್ತೆ ಗೌರಾಬಾಯಿ, ಸಹಾಯಕ ಆಯುಕ್ತ ಕೃಷ್ಣಮೂರ್ತಿ, ಪಧಾದಿಕಾರಿಗಳಾದ ಜನಾರ್ಧನ್, ವಿನಯ್, ರಾಮಕೃಷ್ಣೇಗೌಡ, ಹರೀಶ್, ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ - ಕೋಲಾರ ನಗರದ ಸ್ಕೌಟ್ ಭವನದಲ್ಲಿ ಆಯೋಜನೆ ಮಾಡಿದ್ದ ಮೂರು ದಿನಗಳ ರಾಜ್ಯ ಮಟ್ಟದ ವೃತ್ತಿ ಕೌಶಲ ತರಬೇತಿ ಶಿಬಿರ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್