ಪದವಿಗಳಲ್ಲ, ಭವಿಷ್ಯದ ಬಾಗಿಲು ತೆರೆಯುವುದು ಕೌಶಲ್ಯತೆ : ಡಾ. ಶರಣಪ್ರಕಾಶ್‌ ಪಾಟೀಲ್
ಕೊಚ್ಚಿಯಲ್ಲಿ ನಡೆದ ಕೌಶಲ್ಯ ಶೃಂಗಸಭೆಯಲ್ಲಿ ಭಾಗವಹಿಸಿದ ಸಚಿವರು
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್‌ ಪಾಟೀಲ್


ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್‌ ಪಾಟೀಲ್


ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್‌ ಪಾಟೀಲ್


ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್‌ ಪಾಟೀಲ್


ಕೊಚ್ಚಿ (ಕೇರಳ), 29 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬದುಕಿನಲ್ಲಿ ಯಶಸ್ಸು ಸಾಧಿಸಿಬೇಕಾದರೆ ನಿರಂತರ ಕಲಿಕೆ ಮುಖ್ಯ. ಇದರ ಜೊತೆಗೆ ಕೌಶಲ್ಯ ಕೂಡಿದರೆ ಇನ್ನಷ್ಟು ಪ್ರಗತಿ ಸಾಧಿಸಬಹುದು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವೈಫಲ್ಯಕ್ಕೆ ಹೆದರಬಾರದು, ಕಲಿಕೆ ಮತ್ತು ನಾವೀನ್ಯತೆ, ಕ್ರಿಯಾಶೀಲತೆಗೆ ಹೆಚ್ಚು ಒತ್ತು ನೀಡಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್‌ ಪಾಟೀಲ್ ತಿಳಿಸಿದ್ದಾರೆ.

ಕೇರಳ ಸರ್ಕಾರ ಶುಕ್ರವಾರ ಆಯೋಜಿಸಿದ್ದ ಜಾಗತಿಕ ಕೌಶಲ್ಯ ಶೃಂಗಸಭೆಯಲ್ಲಿ ಡಾ. ಪಾಟೀಲ್ ಭಾಷಣ ಮಾಡಿದರು.

ಪ್ರತಿಯೊಬ್ಬ ಉದ್ಯಮಿ, ಸಾಧಕ ಮತ್ತು ನಾಯಕ ಯಶಸ್ಸನ್ನು ಕಾಣುವ ಮೊದಲು ವೈಫಲ್ಯವನ್ನು ಕಂಡಿದ್ದಾರೆ. ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದರು.

ವೈಫಲ್ಯ ಅಂತ್ಯವಲ್ಲ, ಯಶಸ್ಸಿನ ಮೆಟ್ಟಿಲು

ವೈಫಲ್ಯವು ಅಂತ್ಯವಲ್ಲ - ಇದು ಯಶಸ್ಸಿನ ಮೆಟ್ಟಿಲು. ಸರ್ಕಾರಗಳು, ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳು ನೀತಿಗಳು ಮತ್ತು ವಿಧಾನಗಳನ್ನು ರೂಪಿಸುತ್ತದೆ, ಆದರೆ ನಿಜವಾದ ಬದಲಾವಣೆಯು, ವಿಭಿನ್ನವಾಗಿ ಕನಸು ಕಾಣುವ, ಮತ್ತು ಕಾರ್ಯನಿರ್ವಹಿಸುವ ಧೈರ್ಯವನ್ನು ಯುವ ಸಮೂಹ ಮೈಗೂಡಿಸಿಕೊಳ್ಳಬೇಕು ಎಂದು ಡಾ. ಪಾಟೀಲ್‌ ತಿಳಿಸಿದರು.

ಔಪಚಾರಿಕ ಪದವಿಗಳು ಭವಿಷ್ಯಕ್ಕೆ ದಾರಿ ತೋರುತ್ತವೆ. ಆದರೆ ನಿಜವಾದ ಯಶಸ್ಸಿನ ಬಾಗಿಲುಗಳನ್ನು ತೆರೆಯುವುದು ಕೌಶಲ್ಯತೆ. ಇದು ಆತ್ಮವಿಶ್ವಾಸ, ಘನತೆ ಮತ್ತು ಸ್ವಾತಂತ್ರ್ಯವನ್ನು ತುಂಬುತ್ತದೆ. ಅದನ್ನು ಉನ್ನತ ಶಿಕ್ಷಣದೊಂದಿಗೆ ಸಂಯೋಜಿಸಿದಾಗ, ಉದ್ಯೋಗಕ್ಕೆ ಅರ್ಹರಾಗುವುದಲ್ಲದೆ, ಇತರರಿಗೆ ಉದ್ಯೋಗಗಳನ್ನು ಸೃಷ್ಟಿಸುವ ವ್ಯಕ್ತಿಗಳನ್ನು ರೂಪಿಸಬಹುದು ಎಂದು ಡಾ. ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದರು.

ಶಿಕ್ಷಣ ಕೇವಲ ಪರೀಕ್ಷಾ ತಯಾರಿಗೆ ಸೀಮಿತ ಆಗಬಾರದು

ಕೇರಳದ ಸಾಕ್ಷರತೆ ಮತ್ತು ಪ್ರಗತಿಪರ ಮನೋಭಾವ ಇಡೀ ದೇಶಕ್ಕೆ ಮಾದರಿ. ಶಿಕ್ಷಣವು ಕೇವಲ ಪರೀಕ್ಷಾ ತಯಾರಿಗೆ ಸೀಮಿತವಾಗಿರಬಾರದು. ಉದ್ಯೋಗದ ಭವಿಷ್ಯವನ್ನು ಪದವಿಗಳಿಂದ ವ್ಯಾಖ್ಯಾನಿಸಲಾಗುವುದಿಲ್ಲ, ಆದರೆ ಹೊಂದಿಕೊಳ್ಳುವಿಕೆ, ಸಮಸ್ಯೆ ಪರಿಹಾರ, ಸಹಯೋಗ ಮತ್ತು ನಾವೀನ್ಯತೆಯಿಂದ ಗುರುತಿಸಲಾಗುತ್ತದೆ. ಡಿಜಿಟಲ್ ತಂತ್ರಜ್ಞಾನಗಳು, ಯಾಂತ್ರೀಕತೆ, ಕೃತಕ ಬುದ್ಧಿಮತ್ತೆ ಮತ್ತು ಹೊಸ ವ್ಯವಹಾರ ಮಾದರಿಗಳೊಂದಿಗೆ ಕೌಶಲ್ಯಗಳು ಭವಿಷ್ಯದ ನಿಜವಾದ ಹೆಬ್ಬಾಗಿಲು ಆಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಜಾಗತಿಕ ಕೌಶಲ್ಯ ಶೃಂಗಸಭೆಯಲ್ಲಿ ಜಾಗತಿಕ ನಾಯಕರು, ನೀತಿ ನಿರೂಪಕರು, ಉದ್ಯಮ ನಾಯಕರು, ತರಬೇತಿ ಸಂಸ್ಥೆಗಳು, ಶೈಕ್ಷಣಿಕ ಅಧ್ಯಾಪಕರು, ಅಂತಾರಾಷ್ಟ್ರೀಯ ಸಂಸ್ಥೆಗಳು, ನಾವೀನ್ಯಕಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ 2,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಕೇರಳದ ಉನ್ನತ ಶಿಕ್ಷಣ ಸಚಿವರಾದ ಡಾ. ಆರ್. ಬಿಂದು, ಕೈಗಾರಿಕೆ ಸಚಿವ ಪಿ. ರಾಜೀವ್, ಸ್ಥಳೀಯ ಸ್ವ-ಆಡಳಿತ ಸಚಿವ ಎಂ.ಬಿ. ರಾಜೇಶ್ ಸೇರಿದಂತೆ ಹಲವು ಗಣ್ಯರು, ಇತರರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande