ಅಭಿವೃದ್ಧಿಯತ್ತ ಈಶಾನ್ಯ ಭಾರತ : ಅಮಿತ್ ಶಾ
ಗುವಾಹಟಿ, 29 ಆಗಸ್ಟ್ (ಹಿ.ಸ.) : ಆ್ಯಂಕರ್ : ಈಶಾನ್ಯ ಭಾರತವು ದಶಕಗಳ ಅಶಾಂತಿಯ ನಂತರ ಇಂದು ಶಾಂತಿ, ಪ್ರಗತಿ ಮತ್ತು ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ. ಅವರು ಅಸ್ಸಾಂನ ಗುವಾಹಟಿಯ ರಾಜಭವನದಲ್ಲಿ ‘ಬ್ರಹ್ಮಪುತ್ರ ವಿಭಾಗವನ್ನು ಉದ್ಘಾಟಿಸಿ
Amit sha


ಗುವಾಹಟಿ, 29 ಆಗಸ್ಟ್ (ಹಿ.ಸ.) :

ಆ್ಯಂಕರ್ : ಈಶಾನ್ಯ ಭಾರತವು ದಶಕಗಳ ಅಶಾಂತಿಯ ನಂತರ ಇಂದು ಶಾಂತಿ, ಪ್ರಗತಿ ಮತ್ತು ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ. ಅವರು ಅಸ್ಸಾಂನ ಗುವಾಹಟಿಯ ರಾಜಭವನದಲ್ಲಿ ‘ಬ್ರಹ್ಮಪುತ್ರ ವಿಭಾಗವನ್ನು ಉದ್ಘಾಟಿಸಿ, 322 ಕೋಟಿ ರೂ. ಮೌಲ್ಯದ ಎಂಟು ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಅಮಿತ್ ಶಾ ಅವರು ಮಹಾರಾಜ ಪೃಥು, ಲಚಿತ್ ಬರ್ಫುಕನ್ ಮತ್ತು ಚಿಲರಾಯ್ ಅವರ ತ್ಯಾಗಗಳನ್ನು ಸ್ಮರಿಸಿ ಈ ಪ್ರದೇಶವು ಭಾರತದ ಭದ್ರತೆಯ ಬಲವಾದ ಸ್ತಂಭ ಮತ್ತು ಸಾಂಸ್ಕೃತಿಕ ಪರಂಪರೆಯ ತೊಟ್ಟಿಲು ಎಂದರು. ಕಳೆದ 11 ವರ್ಷಗಳಲ್ಲಿ ಮೂಲಸೌಕರ್ಯ, ಭದ್ರತೆ, ಬಡತನ ನಿವಾರಣೆ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಈಶಾನ್ಯವು ಅಭೂತಪೂರ್ವ ಪ್ರಗತಿ ಸಾಧಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅವರು ದೇಶದ ಎರಡನೆಯ ರಾಷ್ಟ್ರೀಯ ಸೈಬರ್ ವಿಧಿವಿಜ್ಞಾನ ಪ್ರಯೋಗಾಲಯವನ್ನು ಗುವಾಹಟಿಯ ಲಚಿತ್ ಬರ್ಫುಕನ್ ಪೊಲೀಸ್ ಅಕಾಡೆಮಿಯಲ್ಲಿ ಉದ್ಘಾಟಿಸಿದರು. ಈ ಸೌಲಭ್ಯವು ಸೈಬರ್ ಅಪರಾಧ, ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ, ಒಳನುಸುಳುವಿಕೆ ಇತ್ಯಾದಿ ಸವಾಲುಗಳನ್ನು ಎದುರಿಸಲು ನೆರವಾಗಲಿದೆ ಎಂದರು.

ಅಸ್ಸಾಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande