ರಾಷ್ಟ್ರದ ಗುರಿ ಸಾಧನೆಯಲ್ಲಿ ಸಾರ್ವಜನಿಕ ವಲಯದ ಉದ್ಯಮಗಳ ಪ್ರಮುಖ ಪಾತ್ರ : ರಾಷ್ಟ್ರಪತಿ ದ್ರೌಪದಿ ಮುರ್ಮು
ನವದೆಹಲಿ, 29 ಆಗಸ್ಟ್ (ಹಿ.ಸ.) : ಆ್ಯಂಕರ್ : 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ರಾಷ್ಟ್ರದ ಗುರಿ ಸಾಧನೆಯಲ್ಲಿ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅವರು 2022-
President


ನವದೆಹಲಿ, 29 ಆಗಸ್ಟ್ (ಹಿ.ಸ.) :

ಆ್ಯಂಕರ್ : 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ರಾಷ್ಟ್ರದ ಗುರಿ ಸಾಧನೆಯಲ್ಲಿ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅವರು 2022-23ನೇ ಸಾಲಿನ ಸಿಪಿಎಸ್‌ಇ ಶ್ರೇಷ್ಠತಾ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾರ್ವಜನಿಕ ವಲಯದ ಉದ್ಯಮಗಳು ಕೇವಲ ಆರ್ಥಿಕ ಕೊಡುಗೆಯಲ್ಲ, ರಾಷ್ಟ್ರ ನಿರ್ಮಾಣ, ಸಮತೋಲಿತ ಮತ್ತು ಸಮಗ್ರ ಅಭಿವೃದ್ಧಿಯಲ್ಲಿಯೂ ಮುಂಚೂಣಿಯಲ್ಲಿವೆ. ಸ್ವಾತಂತ್ರ್ಯದ ನಂತರ ಕೈಗಾರಿಕೀಕರಣ, ಮೂಲಸೌಕರ್ಯ ಅಭಿವೃದ್ಧಿ, ಸಾಮಾಜಿಕ ಉನ್ನತಿ ಮತ್ತು ಪ್ರಾದೇಶಿಕ ಸಮತೋಲನದಲ್ಲಿ ಪಿಎಸ್‌ಯುಗಳು ಮಹತ್ತರ ಪಾತ್ರ ವಹಿಸಿವೆ” ಎಂದು ಹೇಳಿದರು.

ಉತ್ತಮ ಉದ್ಯಮವನ್ನು ಅದರ ಆರ್ಥಿಕ ಸಾಧನೆ ಮಾತ್ರವಲ್ಲ, ಸಾಮಾಜಿಕ, ಪರಿಸರ, ತಾಂತ್ರಿಕ ಮತ್ತು ನೈತಿಕ ಕಾರ್ಯಕ್ಷಮತೆಯಿಂದ ಗುರುತಿಸಲಾಗುತ್ತದೆ. ಸಿಪಿಎಸ್‌ಇಗಳು ದೇಶದ ಅಭಿವೃದ್ಧಿಗೆ ವೇಗವರ್ಧಕಗಳು ಮತ್ತು ಸಮಾಜದ ಸಮೃದ್ಧಿಗೆ ಆಧಾರಸ್ತಂಭಗಳಾಗಿವೆ. ಪಾರದರ್ಶಕತೆ, ಉತ್ತಮ ಆಡಳಿತ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮಾದರಿಯನ್ನು ಇವು ತೋರಿಸಿವೆ ಎಂದರು.

‘ಆಪರೇಷನ್ ಸಿಂಧೂರ್’ ವೇಳೆ ದೇಶೀಯ ವಾಯು ರಕ್ಷಣಾ ನಿಯಂತ್ರಣ ವ್ಯವಸ್ಥೆ ‘ಆಕಾಶತೀರ್’ ತೋರಿದ ಸಾಧನೆಗೆ ರಾಷ್ಟ್ರಪತಿಗಳು ವಿಶೇಷವಾಗಿ ಉಲ್ಲೇಖಿಸಿ, ಅದರ ಯಶಸ್ಸಿನಲ್ಲಿ ಸಾರ್ವಜನಿಕ ವಲಯದ ಕೊಡುಗೆ “ರಾಷ್ಟ್ರದ ಹೆಮ್ಮೆ” ಎಂದರು. ಕೃಷಿ, ಗಣಿಗಾರಿಕೆ, ಇಂಧನ, ವಿದ್ಯುತ್ ಉತ್ಪಾದನೆ, ಸಂಸ್ಕರಣೆ ಹಾಗೂ ಸೇವಾ ವಲಯಗಳಲ್ಲಿ ಸಿಪಿಎಸ್‌ಇಗಳ ಕೊಡುಗೆ ಗಮನಾರ್ಹವಾಗಿದೆ ಎಂದರು.

ಆತ್ಮನಿರ್ಭರ ಭಾರತ್ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಗಳಲ್ಲಿ ಪಿಎಸ್‌ಯುಗಳ ಪಾತ್ರವನ್ನು ಶ್ಲಾಘಿಸಿ “ಸಾರ್ವಜನಿಕ ವಲಯವು ಪ್ರತಿಯೊಂದು ಸವಾಲನ್ನು ಎದುರಿಸುತ್ತಿದೆ, ಸ್ವಾವಲಂಬಿ ನಾವೀನ್ಯತೆ ಮತ್ತು ತಾಂತ್ರಿಕ ಪ್ರಗತಿಗೆ ದಾರಿ ಮಾಡಿಕೊಡುತ್ತಿದೆ” ಎಂದು ಹೇಳಿದರು.

ಸಿಪಿಎಸ್‌ಇಗಳು ಶ್ರೇಷ್ಠತಾ ಪ್ರಶಸ್ತಿ ಪಿಎಸ್‌ಯುಗಳ ಅತ್ಯುತ್ತಮ ಸಾಧನೆ ಮತ್ತು ಕೊಡುಗೆಗಳನ್ನು ಎತ್ತಿ ತೋರಿಸುವ ಪ್ರಮುಖ ಪ್ರಯತ್ನವಾಗಿದ್ದು, ಇವು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೇರೇಪಿಸುತ್ತದೆ ಎಂದು ರಾಷ್ಟ್ರಪತಿ ಮುರ್ಮು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande