ದೇಶ ಮತ್ತು ಜಗತ್ತನ್ನು ಮುನ್ನಡೆಸಲು ಭಾರತದ ಯುವ ಪೀಳಿಗೆ ಸಮರ್ಥ : ಜ್ಯೋತಿರಾದಿತ್ಯ ಸಿಂಧಿಯಾ
ನವದೆಹಲಿ, 29 ಆಗಸ್ಟ್ (ಹಿ.ಸ.) : ಆ್ಯಂಕರ್ : ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಐಐಟಿ-ದೆಹಲಿ ಯ ಟೆಕ್‌ಫೆಸ್ಟ್ ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, “ಭಾರತದ ಯುವ ಪೀಳಿಗೆ ಮುಂದಿನ ವರ್ಷಗಳಲ್ಲಿ ದೇಶವನ್ನಷ್ಟೇ ಅಲ್ಲ, ಇಡೀ ಜಗತ್ತನ್ನೂ
Sindiya


ನವದೆಹಲಿ, 29 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಐಐಟಿ-ದೆಹಲಿ ಯ ಟೆಕ್‌ಫೆಸ್ಟ್ ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, “ಭಾರತದ ಯುವ ಪೀಳಿಗೆ ಮುಂದಿನ ವರ್ಷಗಳಲ್ಲಿ ದೇಶವನ್ನಷ್ಟೇ ಅಲ್ಲ, ಇಡೀ ಜಗತ್ತನ್ನೂ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದೆ” ಎಂದು ಹೇಳಿದರು.

ಭಾರತವನ್ನು ವಿಶ್ವಗುರು ಮಾಡುವ ದೃಷ್ಟಿಯಿಂದ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿ, “ನಳಂದ, ತಕ್ಷಶಿಲಾ ಮೊದಲಾದ ಪ್ರಾಚೀನ ವಿಶ್ವವಿದ್ಯಾಲಯಗಳಿಂದ ಹಿಡಿದು ಶೂನ್ಯದ ಆವಿಷ್ಕಾರದವರೆಗೆ ಜ್ಞಾನ ಅನ್ವೇಷಣೆ ಭಾರತೀಯ ಸಂಸ್ಕೃತಿಯ ಶಾಶ್ವತ ಅಂಗವಾಗಿದೆ. ಆ ಕಿಡಿ ಇಂದು ಯುವಜನರಲ್ಲೂ ಜೀವಂತವಾಗಿದೆ” ಎಂದರು.

ಸಿಂಧಿಯಾ ಅವರು ವಿದ್ಯಾರ್ಥಿಗಳಿಗೆ ಹೊಸತನದ ಮಾರ್ಗಗಳನ್ನು ಅನುಸರಿಸಿ, ತಂತ್ರಜ್ಞಾನವನ್ನು ಮಾನವೀಯ ಮೌಲ್ಯಗಳಿಗೆ ಹೊಂದಿಕೊಳ್ಳುವಂತೆ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು. ಕೃತಕ ಬುದ್ಧಿಮತ್ತೆ , 6G ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್ ಮುಂತಾದ ಕ್ಷೇತ್ರಗಳಲ್ಲಿ ಭಾರತವು ಜಾಗತಿಕ ನಾಯಕತ್ವ ಸಾಧಿಸಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು. “2030ರ ವೇಳೆಗೆ 6G ತಂತ್ರಜ್ಞಾನದಲ್ಲಿ ಭಾರತ ಮುಂಚೂಣಿಯಲ್ಲಿರಲಿದೆ ಹಾಗೂ ವಿಶ್ವದ ಪೇಟೆಂಟ್‌ಗಳಲ್ಲಿ ಕನಿಷ್ಠ 10% ಭಾರತದ್ದು ಆಗಿರಲಿದೆ” ಎಂದು ಹೇಳಿದರು.

ಅವರು ರೈತರಿಗೆ ನಿಖರ ಕೃಷಿ, ಮಕ್ಕಳಿಗೆ ಡಿಜಿಟಲ್ ಶಿಕ್ಷಣ, ಸಣ್ಣ ಪಟ್ಟಣಗಳ ರೋಗಿಗಳಿಗೆ ಟೆಲಿ-ಹೆಲ್ತ್‌ ಮೂಲಕ ಚಿಕಿತ್ಸೆ ನೀಡುವಂತಹ ಪರಿಹಾರಗಳನ್ನು ರೂಪಿಸಲು ಯುವಕರಿಗೆ ಕರೆ ನೀಡಿದರು. ಪ್ರತಿಭಾ ಪಲಾಯನದಿಂದ ಪ್ರತಿಭಾ ಲಾಭದತ್ತ ದಾರಿ ಮಾಡಬೇಕೆಂದು, ವಿದೇಶದಲ್ಲಿ ಅನುಭವ ಗಳಿಸಿದ ವಿದ್ಯಾರ್ಥಿಗಳು ಭಾರತಕ್ಕೆ ಮರಳಿ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಒತ್ತಾಯಿಸಿದರು.

“ಮುಂದಿನ ಶತಮಾನವು ಭಾರತದದ್ದಾಗಿರಲಿದೆ. ಇಂದಿನ ವಿದ್ಯಾರ್ಥಿಗಳು ಮತ್ತು ಯುವಕರು ಆ ಅದ್ಭುತ ಪ್ರಯಾಣದ ವಾಹಕರಾಗುತ್ತಾರೆ” ಎಂದು ಸಿಂಧಿಯಾ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande