ಗುಣಮಟ್ಟದ ಹಾಲು ಪೂರೈಕೆ ಮಾಡಲು ಕರೆ
ಗುಣಮಟ್ಟದ ಹಾಲು ಪೂರೈಕೆ ಮಾಡಲು ಕರೆ
ಚಿತ್ರ - ಕೋಲಾರ ತಾಲ್ಲೂಕಿನ ಚದುಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಕೋಮುಲ್ ನಿರ್ದೇಶಕಿ ಮಹಾಲಕ್ಷ್ಮೀ ಭಾಗವಹಿಸಿದ್ದರು.


ಕೋಲಾರ, ೨೯ ಆಗಸ್ಟ್ (ಹಿ.ಸ) :

ಆ್ಯಂಕರ್ : ಹಾಲು ಉತ್ಪಾದಕರು ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆಯ ಜೊತೆಗೆ ತಮ್ಮ ಹಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ ಅವುಗಳ ಆರೋಗ್ಯ ಕಾಪಾಡಿಕೊಂಡು ಉತ್ಪಾದಕರು ಆರ್ಥಿಕಾಭಿವೃದ್ಧಿ ಹೊಂದುವಂತೆ ಕೋಮುಲ್ ಉತ್ತರ ಕ್ಷೇತ್ರದ ಮಹಿಳಾ ನಿರ್ದೇಶಕಿ ಮಹಾಲಕ್ಷ್ಮೀ ಪ್ರಸಾದ್ ಬಾಬು ತಿಳಿಸಿದರು.

ತಾಲೂಕಿನ ಚದಮನಹಳ್ಳಿ ಮಹಿಳಾ ಡೇರಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮತ್ತು ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದ ಅವರು ಕೋಮುಲ್ ವತಿಯಿಂದ ನೀಡುವ ಸವಲತ್ತುಗಳನ್ನು ಹಾಲು ಉತ್ಪಾದಕರು ಸಮರ್ಪಕವಾಗಿ ಬಳಸಿಕೊಂಡು ಡೇರಿಗೆ ಗುಣಮಟ್ಟದ ಹಾಲನ್ನು ಪೂರೈಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಸಂಘದಿಂದ ನೀಡುವ ಪಶು ಆಹಾರಗಳನ್ನು ಹಸುಗಳಿಗೆ ಸಮರ್ಪಕವಾಗಿ ನೀಡಬೇಕು ಎಂದು ತಿಳಿಸಿದರು.

ಹೈನುಗಾರಿಕಾ ಕ್ಷೇತ್ರವು ರೈತರಿಗೆ ಬಹುದೊಡ್ಡ ಆರ್ಥಿಕ ಸಂಸ್ಥೆ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಕೋಮುಲ್ ಜಿಲ್ಲಾ ಹಾಲು ಒಕ್ಕೂಟವು ರಾಜ್ಯಕ್ಕೆ ಮಾದರಿಯಾಗಿ ರೂಪಿತಗೊಳ್ಳುತ್ತಾ ಇದೆ ಇದಕ್ಕೆ ರೈತರ ಸಹಕಾರವೇ ಪ್ರಮುಖವಾಗಿದೆ ಸಹಕಾರ ಸಂಘಗಳ ಮೂಲಕ ರೈತರ ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದಾಗಿದ್ದರೆ, ಹಾಲು ಅತ್ಯಂತ ಸರಳವಾಗಿ ಸಿಗುವಂತಹ ಪೌಷ್ಠಿಕ ಆಹಾರ ಮತ್ತು ಯಾವುದೇ ಕಲಬೆರೆಕೆ ಮಾಡದೆ ಶುದ್ಧವಾದ ಹಾಲನ್ನು ಡೈರಿಗೆ ಹಾಕುವ ಮೂಲಕ ಸಂಘದ ಸರ್ವತೋಮುಖ ಅಭಿವೃದ್ದಿಗೆ ಸಹಕರಿಸಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಮಂಜುಳಾ ಸಭೆಯ ಅಧ್ಯಕ್ಷೆ ವಹಿಸಿದ್ದರು ಕೋಮುಲ್ ಉಪ ವ್ಯವಸ್ಥಾಪಕ ಡಾ.ಮಹೇಶ್, ಕೋಮುಲ್ ಸ್ಟೆಪ್ ವಿಭಾಗದ ಉಪ ವ್ಯವಸ್ಥಾಪಕಿ ವಿಜಯಲಕ್ಷ್ಮೀ, ವಿಸ್ತಾರಣಾಧಿಕಾರಿ ರಾಮಾಂಜಿನಪ್ಪ, ಕಾರ್ಯದರ್ಶಿ ವೀಣಾ ಸೇರಿದಂತೆ ನಿರ್ದೇಶಕರು, ಹಾಲು ಉತ್ಪಾದಕರು ಗ್ರಾಮಸ್ಥರು ಇದ್ದರು.

ಚಿತ್ರ - ಕೋಲಾರ ತಾಲ್ಲೂಕಿನ ಚದುಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಕೋಮುಲ್ ನಿರ್ದೇಶಕಿ ಮಹಾಲಕ್ಷ್ಮೀ ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande