ಗದಗ, 29 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸಹಕಾರ ಇಲಾಖೆ, ಗದಗ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಹಾಗೂ ಕೆ.ಸಿ.ಸಿ. ಬ್ಯಾಂಕ್ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಒಬ್ಬ ನಿರ್ದೇಶಕರುಗಳಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರವು ಗುರುವಾರ ದಿ.ಕೆ.ಸಿ.ಸಿ ಬ್ಯಾಂಕ್ ಲಿ., ರೋಣ ಇದರ ಸಭಾಭವನ, ತಾ. ರೋಣ ಜಿ.ಗದಗ ಇದರ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷರು ಹಾಗೂ ಕೆ.ಸಿ.ಸಿ.ಬ್ಯಾಂಕ್ ಲಿ., ಧಾರವಾಡ ನಿರ್ದೇಶಕರಾದ ಜಿ. ಪಿ. ಪಾಟೀಲ ಉದ್ಘಾಟಿಸಿ ಮಾತನಾಡುತ್ತಾ ಇತ್ತೀಚಗೆ ಪ್ರಾಥಮಿಕ ಸಹಕಾರ ಸಹಕಾರ ಸಂಘಗಳಲ್ಲಿ ಹಣ ದುರುಪಯೋಗ ಪ್ರಕgಣಗಳು ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಕಾರಣ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಲಿ ನಿರ್ದೇಶಕರುಗಳ ಕರ್ತವ್ಯ ಪ್ರಮುಖವಾಗಿರುತ್ತದೆ. ಈ ಕುರಿತು ಇಂದು ಸಂಘಗಳ ಪ್ರಗತಿಗೆ ಶ್ರಮಿಸಿದ ಸಹಕಾರಿಗಳು ಮತ್ತು ಇಲಾಖಾ ಅಧಿಕಾರಿಗಳಿಂದ ಉಪನ್ಯಾಸಗಲನ್ನು ಏರ್ಪಡಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕೆ.ಸಿ.ಸಿ ಬ್ಯಾಂಕ್ ಲಿ., ಗದಗ ಇದರ ಮಾಜಿ ನಿರ್ದೇಶಕರಾದಸಿ.ಕೆ.ಮಾಳಶೆಟ್ಟಿ ರವರು ಸಂಸ್ಥೆಗಳ ಮೂಲಕ ಭಾರತದ ಗ್ರಾಮೀಣ ಆರ್ಥಿಕತೆಯನ್ನು ಪುನರುಜ್ಜಿವನಗೊಳಿಸುವ ದಿಟ್ಟ ಮಾರ್ಗಸೂಚಿ ರಾಷ್ಟೀಯ ಸಹಕಾರಿ ನೀತಿ-2025 ಅನ್ನು ಕೇಂದ್ರ ಸಚಿವರು ಈಗಾಗಲೇ ಅನಾವರಣಗೊಳಿಸಿದ್ದಾರೆ. ಮಾದರಿ ಸಹಕಾರಿ ಗ್ರಾಮಗಳನ್ನು ರಚಿಸುವುದು ಇದರ ಉದ್ದೇಶವಾಗಿದೆ. ನಬಾರ್ಡ ಬೆಂಬಲದೊಂದಿಗೆ ಈ ಮಾದರಿ ಗ್ರಾಮಗಳು ತಂತ್ರಜ್ಞಾನ ಮತ್ತು ಸಮುದಾಯದ ಮಾಲೀಕತ್ವದಿಂದ ನಡೆಸುವ ಆಧುನೀಕೃತ ಸಹಕಾರಿ ಸಂಸ್ಥೆಗಳ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ ಸಹಕಾರ ಕ್ಷೇತ್ರದ ಆರೋಗ್ಯಕರ ಬೆಳವಣಿಗೆ ಜನಾಗೃತಿಯನ್ನು ಅವಲಂಬಿಸಿರುತ್ತದೆ. ಜಾಗೃತ ಜನರಲ್ಲಿ ಸಹಕಾರ ಪ್ರಜ್ಞೆ ಮೂಡಿಬಂದಲ್ಲಿ ಸಹಕಾರಿ ವ್ಯವಸ್ಥೆಯ ಅರಿವು ಜಾಗೃತಗೊಳ್ಳುತ್ತದೆ. ಸಹಕಾರ ಸಂಸ್ಥೆಗಳ ಸದಸ್ಯ ಬಳಗ ತಮ್ಮ ಸಹಕಾರ ಸಂಸ್ಥೆಗಳ ಬಗ್ಗೆ ಸದಾ ಜಾಗೃತರಾಗಿರುವುದೇ ಆ ಸಂಘದ ಬೆಳವಣಿಗೆಗೆ ಪೋಷಕ ಎನಿಸುತ್ತದೆ ಎಂದರು
ಹಿರಿಯ ಸಹಕಾರಿಗಳಾದ ವ್ಹಿ. ಡಿ. ಮೇಘರಾಜ ರವರು ಮಾತನಾಡುತ್ತಾ ಸಹಕಾರ ತತ್ವಗಳು ಸಮಾಜದಲ್ಲಿ ಸಮಾನತೆ, ಆರ್ಥಿಕತೆ ಸಬಲೀಕರಣಕ್ಕೆ ಪೂರಕವಾಗಿವೆ. ಇದರಿಂದ ಸಾರ್ವಜನಿಕ ವಲಯ ಮತ್ತು ಖಾಸಗಿ ಕ್ಷೇತ್ರಗಳ ನಡುವೆ ಸಹಕಾರಿ ಕ್ಷೇತ್ರದ ಪೈಪೋಟಿಯನ್ನು ಎದುರಿಸಲು ಸಾಧ್ಯವಾಗುತ್ತದೆ. ಹಾಗೂ ಅತಿ ಸಣ್ಣ ಹಿಡುವಳಿದಾರರು, ಸಣ್ಣ ರೈತರು, ಸಣ್ಣ ವ್ಯಾಪಾರಿಗಳು, ಚಿಲ್ಲರೆ ಮಾರಾಟಗಾರರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮುಂದುವರೆಯಲು ಸಾಧ್ಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಹಕಾರಿಗಳು ಹಾಗೂ ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ ಇದರ ನಿರ್ದೇಶಕರಾದ ಸಿ. ಬಿ. ದೊಡ್ಡಗೌಡ್ರ ರವರು ಮಾತನಾಡುತ್ತಾ ಪ್ಯಾಕ್ಸಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಲ್ಲಿಯ ಸೌಲಭ್ಯಗಳನ್ನು ಅಳವಡಿಕೊಂಡು ಸಹಕಾರಿಗಳಿಗೆ ಅನುವು ಮಾಡಿಕೊಡುವುದು ಅತೀ ಅವಶ್ಯ ಅದರೊಂದಿಗೆ ಅಧ್ಯಕ್ಷದಾದವರು ಸದಸ್ಯರಿಂದ ಸ್ವೀಕರಿಸಲಾಗುತ್ತಿರುವ ಠೇವು ಮತ್ತು ಸಾಲಗಳ ಒಳನಿಯಮಾವಳಿಗಳ ಪ್ರಕಾರ ಸಂಘದಲ್ಲಿ ಠೇವುಗಳನ್ನು ಸ್ವೀಕರಿಸಲಾಗಿತ್ತೀದೆಯೇ ಕೃಷಿ, ಕೃಷಿಯೇರತ ಸಾಲಗಳನ್ನು ನೀಡಲಾಗಿತ್ತಿದೆಯೇ? ಹಾಗೆ ಸಂಘದ ದುಡಿಯುವ ಬಂಡವಾಳವು ಯಾವ ಯಾವ ಲೆಕ್ಕಶಿರ್ಷಿಕೆಯಲ್ಲಿ ಎಷ್ಟೇಷ್ಟು ಮೊತ್ತ ದುಡಿತಾ ಇದೆ? ಮತ್ತು ಸಂಘದಿಂದ ಸಾಲಗಳ ಗುಣಮಟ್ಟವನ್ನು ಪರಿಶೀಲಿಸುವುದು, ಅದರಲ್ಲಿ ಕೃಷಿಗೆ ಅಲ್ಪಾವಧಿ ಬೆಳೆಸಾಲ, ಪಶುಸಂಗೋಪನೆ ಸಾಲ ಮತ್ತು ಕೃಷಿ ಮಧ್ಯಮಾವಧಿ ಸಾಲ, ಈ ಎಲ್ಲ ಅಂಶಗಳನ್ನು ಪರಿಶೀಲನೆ ಮಾಡಿದ ಮೇಲೆ ಮುದ್ದತ ಮೀರಿದ ಸಾಲದ ವಸೂಲಾತಿಗೆ ಕ್ರಮ ವಿಡುವುದು, ಸುಸ್ತಿ ಸಾಲವನ್ನು ವಸೂಲು ಮಾಡಲು ಸಾಕಷ್ಟು ತಿಳುವಳಿಕೆ ನೋಟಿಸುಗಳನ್ನು ಕಳಿಸಲು ಕ್ರಮ ವಹಿಸುವುದು. ಇವುಗಳೆಲ್ಲಾ ಉತ್ತಮವಾಗಿ ನಿರ್ವಹಿಸುವುದರಿಂದ ಸಂಘದ ಮೇಲೆ ಹೆಚ್ಚು ವಿಶ್ವಾಸ ಹಾಗೂ ಪ್ರಗತಿ ಹೊಂದಲು ಕಾರಣವಾಗುತ್ತದೆ.
ಗದಗ ಜಿಲ್ಲಾ ಸಹಕಾರ ಯುನಿಯನ್ ನಿ., ನಿರ್ದೇಶಕರಾದ ಸುರೇಶಗೌಡ ಎಂ. ಪಾಟೀಲ ರವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಪ್ಯಾಕ್ಸಗಳ ಬಲವೃದ್ದಿಗೆ ರಾಷ್ಟçದಾದ್ಯಂತ ವಿಶೇಷ ಪ್ರಯತ್ನಗಳು ನಡೆಯುತ್ತಿವೆ. ಪ್ಯಾಕ್ಸಗಳು ಆರ್ಥಿಕವಾಗಿ ಸಬಲಗೊಂಡು ಲಾಭದಾಯಕವಾಗಿ ಕೆಲಸ ನಿರ್ವಹಿಸಿದರೆ ಸಹಕಾರ ಚಳುವಳಿಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂಬ ಭಾವನೆಗೆ ಅವಕಾಶವಾಗಿದೆ. ಆರ್ಥಿಕ ಸಮಾನತೆ, ದುರ್ಬಲ ಜನರ ಏಳಿಗೆಗೆ ಮತ್ತು ಸಮಾಜದ ಪ್ರಗತಿಯ ರೂವಾರಿಯಾಗಿರುವ ಸಹಕಾರ ಕ್ಷೇತ್ರ ಇಂದು ಜೀವನದ ಎಲ್ಲಾ ಪ್ರಕಾರಗಳನ್ನು ಆವರಿಸಿಕೊಂಡು ಮಾನವ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಸಹಕಾರ ತತ್ವಗಳು ಸಮಾಜದಲ್ಲಿ ಸಮಾನತೆ, ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದೆ. ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಇದರ ಅಧ್ಯಕ್ಷರಾದ ಸಿ.ಎಂ.ಪಾಟೀಲ ರವರು ಅಧ್ಯಕ್ಷಿಯ ಭಾಷಣ ಮಾಡುತ್ತ ಉತ್ತಮ ಸೇವೆ ಎಂದರೆ, ಎಲ್ಲರೂ ಸಂಸ್ಥೆಗೆ ಬಂದು ಯಾವುದೇ ತಾರತಮ್ಯವಿಲ್ಲದೆ ಅವರ ಕೆಲಸಗಳನ್ನು ಸಕಾಲದಲ್ಲಿ ಪೂರೈಸಿಕೊಂಡು ಹೋಗುವಂತಿರಬೇಕು.ಸಹಕಾರ ಸಂಸ್ಥೆಗಳು ತಮ್ಮ ಸದಸ್ಯರಿಗೆ ಅಥವಾ ಗ್ರಾಹಕರಿಗೆ ನೀಡುವ ಸೇವೆಗಳಲ್ಲಿ ಏನಾದರೂ ನ್ಯೂನತೆಗಳು ಕಂಡು ಬಂದಲ್ಲಿ ತಕ್ಷಣವೇ ಅವುಗಳನ್ನು ಗಮನಿಸಿ, ಸೂಕ್ತ ಕ್ರಮಗಳನ್ನು ಕೈಗೊಂಡಾಗ, ಸಂಸ್ಥೆಯ ಮೇಲಿನ ವಿಶ್ವಾಸ ಹೆಚ್ಚುತ್ತದೆ. ಇದನ್ನು ಸಹಕಾರ ಸಂಸ್ಥೆಗಳು ಮಾಡದಿದ್ದರೆ, ಅವರಿಗಿಂತ ಮುಂಚೆಯೆ, ಅಂದರೆ ಸಹಕಾರಿ ಸಂಸ್ಥೆಗಳು ಯೋಚಿಸುವಷ್ಟರಲ್ಲಿ... ಬೇರೆ ಸಂಸ್ಥೆಗಳು ಜನರಿಗೆ ಬೇಕಾದ ಕೆಲಸಗಳನ್ನು ಮಾಡಿಕೊಟ್ಟಿರುತ್ತಾರೆ. ಇದರಿಂದ ಸಹಕಾರ ಸಂಸ್ಥೆಗಳ ವ್ಯವಹಾರ ಕುಸಿದು ಬೀಳುವ ಸಾಧ್ಯತೆ ಇದೆ.
ಕಾರ್ಯಕ್ರಮದಲ್ಲಿ ಕೆ.ಸಿ.ಸಿ ಬ್ಯಾಂಕ್ ರೋಣ ನಿರೀಕ್ಷಕರಾದ ಎ.ಎ. ಶಾಬಾದಿ, ಕೆ.ಸಿ.ಸಿ ಬ್ಯಾಂಕ್ ರೋಣ ಕಿರಿಯ ನಿರೀಕ್ಷಕರುಗಳಾದ ಜಿ. ಪಿ.ರಾಠೊಡ, ಎಂ. ಬಿ. ಪೂಜಾರಿ, ಉಪಸ್ಥಿತರಿದ್ದರು.
ತರಬೇತಿ ಕಾರ್ಯಾಗಾರದಲ್ಲಿ “ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಆಡಳಿತ ನಿರ್ವಹಣೆ” ಕುರಿತು ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ ಇದರ ನಿರ್ದೇಶಕರಾದ ಸಿ. ಬಿ. ದೊಡ್ಡಗೌಡ್ರ “ಸಭೆಗಳು ಹಾಗೂ ಸಭೆಗಳಲ್ಲಿನ ಪ್ರಕಾರಗಳ” ಕುರಿತು ಕೆ.ಓ.ಎಫ್. ಹುಬ್ಬಳ್ಳಿ ಮಾಜಿ ಅಧ್ಯಕ್ಷರಾದ ವ್ಹಿ. ಬಿ. ಚಿಕ್ಕರಡ್ಡಿ ಹಾಗೂ “ಸಾಲ ತರುವುದು, ವಿತರಿಸುವುದು, ವಸೂಲಿ ಹಾಗೂ ಸಂಬAಧಿಸಿದ ಬ್ಯಾಂಕಿಗೆ ಮರುಪಾವತಿಸುವ” ಕುರಿತು ರೋಣ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಪ್ರಶಾಂತ ಮುಧೋಳ ಉಪನ್ಯಾಸ ನೀಡಿದರು.
ಹಿರೇಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶಂಕರಗೌಡ ವ್ಹಿ. ಗೌಡರ ಪ್ರಾರ್ಥನೆ ಮಾಡಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಹಾಗೂ ಕಾರ್ಯಕ್ರಮವನ್ನು ನಿರೂಪಿಸಿದರು, ಯೂನಿಯನ್‌ದ ಮಹಿಳಾ ಸಹಕಾರ ಶಿಕ್ಷಕಿ ಶ್ರೀಮತಿ ರಶೀದಾಬಾನು ಸಿ. ಯಲಿಗಾರ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP