ಜ್ಯೂರಿಚ್, 29 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ 2025ರ ಡೈಮಂಡ್ ಲೀಗ್ ಫೈನಲ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
ಜರ್ಮನಿಯ ಜೂಲಿಯನ್ ವೆಬರ್ ಅದ್ಭುತ ಪ್ರದರ್ಶನ ನೀಡಿ 91.57 ಮೀಟರ್ ಎಸೆದು ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದರು.
ನೀರಜ್ ತಮ್ಮ ಕೊನೆಯ ಪ್ರಯತ್ನದಲ್ಲಿ 85.01 ಮೀಟರ್ ದಾಖಲಿಸಿ ಟ್ರಿನಿಡಾಡ್‌ನ ಕೆಶೋರ್ನ್ ವಾಲ್ಕಾಟ್ (84.95 ಮೀ) ಅವರನ್ನು ಹಿಂದಿಕ್ಕಿ ರನ್ನರ್-ಅಪ್ ಆಗಿದರು. ವೆಬರ್ ಮೊದಲ ಎರಡು ಎಸೆತಗಳಲ್ಲಿ 91.37 ಮೀ ಮತ್ತು 91.57 ಮೀ ದಾಖಲಿಸಿ ಸ್ಪರ್ಧೆಯಲ್ಲೇ ಅಗ್ರಸ್ಥಾನ ಪಡೆದರು.
2022ರಲ್ಲಿ ಟ್ರೋಫಿ ಗೆದ್ದಿದ್ದ ನೀರಜ್, 2023 ಹಾಗೂ 2024ರಂತೆ ಈ ಬಾರಿಯೂ ಎರಡನೇ ಸ್ಥಾನಕ್ಕಷ್ಟೇ ತೃಪ್ತಿಪಟ್ಟಿದ್ದಾರೆ. ಇದೀಗ ಅವರು ಮುಂದಿನ ತಿಂಗಳು ಟೋಕಿಯೊ ವಿಶ್ವ ಚಾಂಪಿಯನ್‌ಶಿಪ್‌ಗೆ ಸಜ್ಜಾಗುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa