ಫೈನಲ್ ಪ್ರವೇಶಿಸಿದ ಇಂಟರ್ ಮಿಯಾಮಿ ತಂಡ
ನವದೆಹಲಿ, 28 ಆಗಸ್ಟ್ (ಹಿ.ಸ.) : ಆ್ಯಂಕರ್ : ಲಿಯೋನೆಲ್ ಮೆಸ್ಸಿಯ ಅದ್ಭುತ ಪ್ರದರ್ಶನದೊಂದಿಗೆ ಇಂಟರ್ ಮಿಯಾಮಿ ತಂಡವು ಲೀಗ್ಸ್ ಕಪ್ 2025 ಫೈನಲ್‌ಗೆ ಪ್ರವೇಶಿಸಿದೆ. ಫ್ಲೋರಿಡಾ ಡರ್ಬಿ ಸೆಮಿಫೈನಲ್‌ನಲ್ಲಿ ಮಿಯಾಮಿ, ಒರ್ಲ್ಯಾಂಡೊ ಸಿಟಿಯನ್ನು 3-1 ಗೋಲುಗಳಿಂದ ಸೋಲಿಸಿತು. ಮೊದಲಾರ್ಧದಲ್ಲಿ ಮಾರ್ಕೊ ಪಸಾಲಿಕ್
Final


ನವದೆಹಲಿ, 28 ಆಗಸ್ಟ್ (ಹಿ.ಸ.) :

ಆ್ಯಂಕರ್ : ಲಿಯೋನೆಲ್ ಮೆಸ್ಸಿಯ ಅದ್ಭುತ ಪ್ರದರ್ಶನದೊಂದಿಗೆ ಇಂಟರ್ ಮಿಯಾಮಿ ತಂಡವು ಲೀಗ್ಸ್ ಕಪ್ 2025 ಫೈನಲ್‌ಗೆ ಪ್ರವೇಶಿಸಿದೆ. ಫ್ಲೋರಿಡಾ ಡರ್ಬಿ ಸೆಮಿಫೈನಲ್‌ನಲ್ಲಿ ಮಿಯಾಮಿ, ಒರ್ಲ್ಯಾಂಡೊ ಸಿಟಿಯನ್ನು 3-1 ಗೋಲುಗಳಿಂದ ಸೋಲಿಸಿತು.

ಮೊದಲಾರ್ಧದಲ್ಲಿ ಮಾರ್ಕೊ ಪಸಾಲಿಕ್ ಅವರ ಗೋಲಿನಿಂದ ಒರ್ಲ್ಯಾಂಡೊ ಮುನ್ನಡೆ ಸಾಧಿಸಿದ್ದರೂ, ದ್ವಿತೀಯಾರ್ಧದಲ್ಲಿ ಮೆಸ್ಸಿಯ ದ್ವಿಗೋಲು ಹಾಗೂ ಟೆಲಾಸ್ಕೊ ಸೆಗೋವಿಯಾ ಗಳಿಸಿದ ಗೋಲಿನಿಂದ ಮಿಯಾಮಿ ಗೆಲುವನ್ನು ಖಚಿತಪಡಿಸಿಕೊಂಡಿತು.

77ನೇ ನಿಮಿಷದಲ್ಲಿ ಪೆನಾಲ್ಟಿಯಿಂದ ಮೆಸ್ಸಿ ಸಮಬಲ ತಂದರು, ಬಳಿಕ 88ನೇ ನಿಮಿಷದಲ್ಲಿ ಜೋರ್ಡಿ ಆಲ್ಬಾ ಜೊತೆಗಿನ ಸಮನ್ವಯದಿಂದ ಎರಡನೇ ಗೋಲು ಬಾರಿಸಿದರು. 91ನೇ ನಿಮಿಷದಲ್ಲಿ ಸೆಗೋವಿಯಾ, ಲೂಯಿಸ್ ಸುವಾರೆಜ್ ಜೊತೆಗಿನ ಒನ್-ಟು ಮೂಲಕ ಮೂರನೇ ಗೋಲು ದಾಖಲಿಸಿದರು.

ಈ ಗೆಲುವಿನಿಂದ ಮಿಯಾಮಿ 2026ರ ಕಾನ್ಕಾಕ್ಯಾಫ್ ಚಾಂಪಿಯನ್ಸ್ ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ. ಫೈನಲ್‌ನಲ್ಲಿ (ಆಗಸ್ಟ್ 31) ಮಿಯಾಮಿ ಎಲ್ಎ ಗ್ಯಾಲಕ್ಸಿ ಅಥವಾ ಸಿಯಾಟಲ್ ಸೌಂಡರ್ಸ್ ವಿರುದ್ಧ ಸೆಣಸಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande