ನವದೆಹಲಿ, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡವು ಅದ್ಭುತ ಆಲ್‌ರೌಂಡ್ ಪ್ರದರ್ಶನ ನೀಡಿ ಓಲ್ಡ್ ಡೆಲ್ಲಿ 6 ತಂಡವನ್ನು DLS ನಿಯಮದಂತೆ 104 ರನ್‌ಗಳಿಂದ ಸೋಲಿಸಿ ಡೆಲ್ಲಿ ಪ್ರೀಮಿಯರ್ ಲೀಗ್ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ತಂಡವು 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು.
ಯಶ್ ಧುಲ್ ಅದ್ಭುತ ಅರ್ಧಶತಕ ಬಾರಿಸಿದರು. ಯುಗಲ್ ಸೈನಿ (28), ಜಾಂಟಿ ಸಿಧು (28), ಆದಿತ್ಯ ಭಂಡಾರಿ (17) ಉತ್ತಮ ಕೊಡುಗೆ ನೀಡಿದರು. ಅಂತಿಮ ಹಂತದಲ್ಲಿ ಆರ್ಯನ್ ರಾಣಾ (42, 14 ಎಸೆತ)* ಸ್ಫೋಟಕ ಆಟದಿಂದ ತಂಡದ ಮೊತ್ತವನ್ನು ಬಲಪಡಿಸಿದರು.
ಬೌಲಿಂಗ್‌ನಲ್ಲಿ ರಜನೀಶ್ ದಾದರ್ 4 ಓವರ್‌ಗಳಲ್ಲಿ 40 ರನ್ ನೀಡಿ 3 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಓಲ್ಡ್ ಡೆಲ್ಲಿ 6 ತಂಡವು ಆರಂಭದಲ್ಲೇ ಆಘಾತಕ್ಕೆ ಗುರಿಯಾಯಿತು. ಮಳೆಯಿಂದಾಗಿ ಗುರಿ 15 ಓವರ್‌ಗಳಿಗೆ 174 ರನ್ ಆಗಿ ನಿಗದಿಯಾಯಿತು. ಆದರೆ ತಂಡ 69 ರನ್‌ಗಳಿಗೆ ಆಲೌಟ್ ಆಯಿತು.
ಕಿಂಗ್ಸ್ ಪರ ಬೌಲರ್‌ಗಳು: ಜಾಂಟಿ ಸಿಧು 1 ಓವರ್‌ನಲ್ಲಿ ಕೇವಲ 2 ರನ್ ನೀಡಿ 2 ವಿಕೆಟ್,ಸಿಮರ್‌ಜಿತ್ ಸಿಂಗ್ 2 ರನ್‌ಗಳಿಗೆ 2 ವಿಕೆಟ್ ,ಪುಂಡೀರ್ 28 ರನ್‌ಗಳಿಗೆ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು.
ಈ ಗೆಲುವಿನಿಂದ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಪ್ಲೇಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa