ನವದೆಹಲಿ, 27 ಆಗಸ್ಟ್ (ಹಿ.ಸ.) :
ಆ್ಯಂಕರ್ : ಯುಪಿ ಟಿ20 ಲೀಗ್‌ನ 19ನೇ ಪಂದ್ಯದಲ್ಲಿ ಕಾನ್ಪುರ್ ಸೂಪರ್‌ಸ್ಟಾರ್ಸ್, ಕಾಶಿ ರುದ್ರಾಸ್ ವಿರುದ್ಧ 128 ರನ್‌ಗಳ ಭಾರೀ ಅಂತರದ ಗೆಲುವು ಸಾಧಿಸಿದೆ. ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಆದರ್ಶ್ ಸಿಂಗ್ ಅವರ ಆಕರ್ಷಕ ಶತಕ ಮತ್ತು ಶುಭಂ ಮಿಶ್ರಾ ಅವರ ಅಬ್ಬರದ ಬೌಲಿಂಗ್ ಕಾನ್ಪುರ್‌ನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದವು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಾನ್ಪುರ್ ತಂಡ 10ನೇ ಓವರ್‌ಗೆ 54/2 ಕಷ್ಟಕರ ಸ್ಥಿತಿಯಲ್ಲಿ ಇತ್ತು. ಈ ಸಂದರ್ಭದಲ್ಲಿ ಆದರ್ಶ್ ಸಿಂಗ್ ಅಬ್ಬರ ಬ್ಯಾಟಿಂಗ್ ಆರಂಭಿಸಿ, ಕೇವಲ 51 ಎಸೆತಗಳಲ್ಲಿ ಶತಕ ಪೂರೈಸಿದರು. ಅವರು 55 ಎಸೆತಗಳಲ್ಲಿ ಅಜೇಯ 113 ರನ್ ಗಳಿಸಿದರು (12 ಸಿಕ್ಸರ್‌ಗಳು, ಅದರಲ್ಲಿ 10 ಕೊನೆಯ 19 ಎಸೆತಗಳಲ್ಲಿ).
ಕೊನೆಯ 3 ಓವರ್‌ಗಳಲ್ಲಿ ಮಾತ್ರ 79 ರನ್‌ಗಳನ್ನು ಗಳುಸಿದ ಆದರ್ಶ್, ಫೈಜ್ ಅಹ್ಮದ್ ಜೊತೆ ನಾಲ್ಕನೇ ವಿಕೆಟ್‌ಗೆ 113 ರನ್‌ಗಳ ಪಾಲುದಾರಿಕೆ ಕಟ್ಟಿದರು.
ಕಾನ್ಪುರ್ 20 ಓವರ್‌ಗಳಲ್ಲಿ 198/3 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಕಾಶಿ ರುದ್ರಾಸ್ ನಾಯಕ ಕರಣ್ ಶರ್ಮಾ ಮೊದಲ ಎಸೆತದಲ್ಲೇ ಎಲ್ಬಿಡಬ್ಲ್ಯೂ ಔಟಾದರು. ಅಂಕುರ್ ಶರ್ಮಾ ಪ್ರಾರಂಭದಲ್ಲೇ 2 ವಿಕೆಟ್ ಪಡೆದ ಕಾರಣ 7ನೇ ಓವರ್ ವೇಳೆಗೆ 27/4 ಕಷ್ಟಕರ ಸ್ಥಿತಿಗೆ ತಲುಪಿತು. ನಂತರ ಶುಭಂ ಮಿಶ್ರಾ ಮಾರಕ ಬೌಲಿಂಗ್ ಪ್ರದರ್ಶಿಸಿ, ಕೇವಲ 3 ಓವರ್‌ಗಳಲ್ಲಿ 6 ರನ್‌ಗಳಿಗೆ 5 ವಿಕೆಟ್ ಕಬಳಿಸಿದರು.
ಸಂಪೂರ್ಣ ತಂಡ 15 ಓವರ್‌ಗಳಲ್ಲಿ ಕೇವಲ 70 ರನ್‌ಗಳಿಗೆ ಆಲೌಟ್ ಆಯಿತು.
ಆದರ್ಶ್ ಸಿಂಗ್ ಅವರ ಬಿರುಗಾಳಿಯ ಬ್ಯಾಟಿಂಗ್ ಮತ್ತು ಶುಭಂ ಮಿಶ್ರಾ ಅವರ ಬೌಲಿಂಗ್, ಕಾನ್ಪುರ್ ಸೂಪರ್‌ಸ್ಟಾರ್ಸ್‌ಗೆ ಲೀಗ್‌ನಲ್ಲಿ ದೊಡ್ಡ ಗೆಲುವು ತಂದುಕೊಟ್ಟಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa