ನವದೆಹಲಿ, 28 ಆಗಸ್ಟ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಇಡೀ ಸಮಾಜ ನಮ್ಮದೇ ಆಗಿದೆ. ಯಾರೂ ಅಪರಿಚಿತರಲ್ಲ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ದೆಹಲಿ ವಿಜ್ಞಾನ ಭವನದಲ್ಲಿ ನಡೆದ ಸಂಘದ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸಮಗ್ರ ಅಭಿವೃದ್ಧಿ, ಸಮಾಜದಲ್ಲಿ ಸೌಹಾರ್ದ ಹಾಗೂ ಪರಸ್ಪರ ವಿಶ್ವಾಸ ನಿರ್ಮಾಣವೇ ಸಂಘದ ಮೂಲ ಗುರಿಯಾಗಿದೆ ಎಂದು ಅವರು ತಿಳಿಸಿದರು. ಸಂಘದ ಕಾರ್ಯದಲ್ಲಿ ಯಾವೊಬ್ಬರಿಗೂ ಹೊರತಾಗುವ ಪ್ರಶ್ನೆಯೇ ಇಲ್ಲ. ಎಲ್ಲರನ್ನು ಸಮಾನವಾಗಿ ಕಾಣುವುದು, ಶ್ರೇಷ್ಠ ಭಾರತೀಯ ಸಮಾಜ ನಿರ್ಮಾಣದ ದಿಶೆಯಲ್ಲಿ ಕಾರ್ಯನಿರ್ವಹಿಸುವುದು ನಮ್ಮ ಬದ್ಧತೆ ಎಂದರು.
ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ವಿಶ್ವ ಮಾನವಕುಲಕ್ಕೂ ಪ್ರೇರಣಾದಾಯಕವಾಗಿವೆ. ಆದ್ದರಿಂದ ಸಮಾಜದಲ್ಲಿ ವೈಮನಸ್ಯವಲ್ಲ, ಪರಸ್ಪರ ಸಹಭಾಗಿತ್ವವನ್ನೇ ಬಲಪಡಿಸಬೇಕು ಎಂದು ಭಾಗವತ್ ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa