ಬಳ್ಳಾರಿ, 13 ಆಗಸ್ಟ್ (ಹಿ.ಸ.) :
ಆ್ಯಂಕರ್ : ಹಿಂದೂ ಜಾಗರಣ ವೇದಿಕೆಯ ಬಳ್ಳಾರಿ ಘಟಕವು ಎಸ್.ಜಿ. ಕಾಲೇಜು ಆವರಣದಲ್ಲಿ ಆಗಸ್ಟ್ 14ರ ಗುರುವಾರ ಸಂಜೆ 5.30ಕ್ಕೆ `ಅಖಂಡ ಭಾರತ ಸಂಕಲ್ಪ ದಿನ'ವನ್ನು ಹಮ್ಮಿಕೊಂಡಿದ್ದು, ಹೈದರಾಬಾದ್‍ನ ಲೋಪಮುದ್ರ ಚಾರಿಟಬಲ್ ಟ್ರಸ್ಟ್‍ನ ಮಾಧವಿಲತ ಅವರು ಮುಖ್ಯ ಭಾಷಣಕಾರರಾಗಿದ್ದಾರೆ.
ಆರ್‍ಎಸ್‍ಎಸ್‍ನ ಬಳ್ಳಾರಿ ವಿಭಾಗ ಸಂಘಚಾಲಕರಾದ ಡಾ. ವಿಜಯಭಾಸ್ಕರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. ಉದ್ಯಮಿ ಮುಂಡ್ಲೂರ್ ಅನೂಪ್ ಕುಮಾರ್ ಅವರು ಅತಿಥಿಗಳಾಗಿದ್ದಾರೆ.
ಸಂಘಟನೆಯ ಎರ್ರಿಸ್ವಾಮಿ, ಕಿಶೋರ್, ಅರ್ಜುನ್ ಜೈನ್, ಗುರುರಾಜ್ ಇನ್ನಿತರರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್