ಬಳ್ಳಾರಿ, 13 ಆಗಸ್ಟ್ (ಹಿ.ಸ.)
ಆ್ಯಂಕರ್:
ಹಿಂದೂ ಜಾಗರಣ ವೇದಿಕೆಯ ಬಳ್ಳಾರಿ ಘಟಕವು ಎಸ್.ಜಿ. ಕಾಲೇಜು ಆವರಣದಲ್ಲಿ ಆಗಸ್ಟ್ 14ರ ಗುರುವಾರ ಸಂಜೆ 5.30ಕ್ಕೆ `ಅಖಂಡ ಭಾರತ ಸಂಕಲ್ಪ ದಿನ'ವನ್ನು ಹಮ್ಮಿಕೊಂಡಿದ್ದು, ಹೈದರಾಬಾದ್‍ನ ಲೋಪಮುದ್ರ ಚಾರಿಟಬಲ್ ಟ್ರಸ್ಟ್ ನ ಮಾಧವಿಲತ ಅವರು ಮುಖ್ಯ ಭಾಷಣಕಾರರಾಗಿದ್ದಾರೆ.
ಆರ್‍ಎಸ್‍ಎಸ್‍ನ ಬಳ್ಳಾರಿ ವಿಭಾಗ ಸಂಘಚಾಲಕರಾದ ಡಾ. ವಿಜಯಭಾಸ್ಕರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. ಉದ್ಯಮಿ ಮುಂಡ್ಲೂರ್ ಅನೂಪ್ ಕುಮಾರ್ ಅವರು ಅತಿಥಿಗಳಾಗಿದ್ದಾರೆ.
ಸಂಘಟನೆಯ ಎರ್ರಿಸ್ವಾಮಿ, ಕಿಶೋರ್, ಅರ್ಜುನ್ ಜೈನ್, ಗುರುರಾಜ್ ಇನ್ನಿತರರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್